Chamarajanagara RDPR Senior Analyst Job Notification 2022: ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಾಮರಾಜನಗರ ವಿಭಾಗ ರವರಿಂದ ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗಾಗಿ ಜಿಲ್ಲಾ ಪ್ರಯೋಗಾಲಯಕ್ಕೆ ಹಿರಿಯ ವಿಶ್ಲೇಷಕ ಹುದ್ದೆ ನೇಮಕ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ |
ಹುದ್ದೆಗಳ ಹೆಸರು: | ಹಿರಿಯ ವಿಶ್ಲೇಷಕ |
ವಿದ್ಯಾರ್ಹತೆ:
ಎಂಎಸ್ಸಿ ಇನ್ ಕೆಮಿಸ್ಟ್ರಿ / ಬಯೋಕೆಮಿಸ್ಟ್ರಿ / ಮೈಕ್ರೋಬಯೋಲಜಿ / ಎನ್ವಿರಾನ್ಮೆಂಟಲ್ ಸೈನ್ಸ್ / ಬಯೋಟೆಕ್ನಾಲಜಿ / ಬಿಇ ಇನ್ ಎನ್ವಿರಾನ್ಮೆಂಟಲ್ ಅನ್ನು ಕನಿಷ್ಠ ಶೇಕಡ.60 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ನೀರಿನ ಗುಣಮಟ್ಟ ಪರೀಕ್ಷಕರ ಹುದ್ದೆ ಕಾರ್ಯಾನುಭವ ಇರುವವರಿಗೆ ಶೇಕಡ.50 ಅಂಕಗಳನ್ನು ಗಳಿಸಿದ್ದರೂ ಸಹ ಹುದ್ದೆಗೆ ಆಧ್ಯತೆ ನೀಡಲಾಗುತ್ತದೆ.
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸಿನ ಮಿತಿ 25 ವರ್ಷ, ಗರಿಷ್ಠ ವಯಸ್ಸಿನ ಮಿತಿ 45 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತರು ತಮ್ಮ ವಿದ್ಯಾರ್ಹತೆ, ಕಾರ್ಯಾನುಭವ ದಾಖಲೆಗಳೊಂದಿಗೆ ಲೇಟೆಸ್ಟ್ ಬಯೋಡಾಟಾವನ್ನು ಈ ಕೆಳಗಿನ ವಿಭಾಗ ಕಚೇರಿಗೆ ಸಲ್ಲಿಸಬೇಕು.
ಅನುಭವ:
3 ವರ್ಷ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದಲ್ಲಿ ಸೇವೆ ಸಲ್ಲಿಸಿರಬೇಕು. ಹಾಗೂ ಎನ್‌ಎಬಿಎಲ್ ಪ್ರಮಾಣ ಪತ್ರ ಪಡೆದಿರುವ ಪ್ರಯೋಗಾಲಯದಲ್ಲಿ ಸೇವೆ ಸಲ್ಲಿಸಿದವರಿಗೆ ಮೊದಲ ಆಧ್ಯತೆ ಮತ್ತು ಎಂಎಸ್ ಆಫೀಸ್ ಬಳಕೆ ಮಾಡುವ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಅರ್ಜಿ ವಿಳಾಸ :
ಕಾರ್ಯಪಾಲಕ ಇಂಜಿನಿಯರ್‌ರವರ ಕಛೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ನ್ಯಾಯಾಲಯದ ರಸ್ತೆ, ಚಾಮರಾಜನಗರ ವಿಭಾಗ, ಚಾಮರಾಜನಗರ – 571313
ದೂರವಾಣಿ ಸಂಖ್ಯೆ : 08226 – 226054
ಇ-ಮೇಲ್ ವಿಳಾಸ : eerdwsd,chn@gmail.com
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಆಧಾರ್ ಕಾರ್ಡ್
ವಿದ್ಯಾರ್ಹತೆ ದಾಖಲೆಗಳು
ಕಾರ್ಯಾನುಭವ ದಾಖಲೆಗಳು
ಜನ್ಮ ದಿನಾಂಕ ದಾಖಲೆ ಅಥವಾ
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
ಇತರೆ.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 06-08-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 17-08-2022 |