ಗೃಹ ಜ್ಯೋತಿ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಿ
gruha jyothi application – ಜೂನ್ 18 ರಂದು ಅಧಿಕೃತವಾಗಿ ಜಾರಿಯಾಗಿರುವ ಗ್ರಹ ಜ್ಯೋತಿ ಯೋಜನೆಯು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹೆಚ್ಚಿಸುವ ಫಲಾನುಭವಿಗಳು ತಪ್ಪದೆ ಈ ಲೇಖನ ಪೂರ್ತಿಯಾಗಿ ಓದಿ ಹಾಗೂ ಇತರರಿಗೂ ಶೇರ್ ಮಾಡುವುದರ ಮೂಲಕ ನಮ್ಮನ್ನು ಬೆಂಬಲಿಸಿ.
ಗೃಹಜೋತಿ ಯೋಜನೆಯ ಅರ್ಜಿಯನ್ನು ಫಲಾನುಭವಿಗಳು ಸೇವಾ ಸಿಂಧು ಪೋರ್ಟ್ ನಲ್ಲಿ ತಮ್ಮ ತಮ್ಮ ಸ್ಮಾರ್ಟ್ ಫೋನ್ ಬಳಸಿ ಅಥವಾ ಯಾವುದಾದರೂ ಇಂಟರ್ನೆಟ್ ಸೆಂಟರ್ ಗೆ ಹೋಗಿ ಅಥವಾ ಮನೆಯಲ್ಲೇ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಮೂಲಕ ಸುಲಭವಾಗಿ ಅರ್ಜಿ ನೋಂದಣಿ ಮಾಡಬಹುದು.
ಅರ್ಜಿ ಸಲ್ಲಿಸುವ ಅರ್ಜಿದಾರರು ಸದ್ಯಕ್ಕೆ ಯಾವುದೇ ಮೂಲ ದಾಖಲೆ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ.
ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಏನೆಲ್ಲಾ ಅಗತ್ಯತೆಗಳು ಪಾಲಿಸಬೇಕು.
- ಆಧಾರ್ ಕಾರ್ಡ್ ಸಂಖ್ಯೆ
- ಮೊಬೈಲ್ ನಂಬರ್
- ವಿದ್ಯುತ್ ಬಿಲ್
ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಸುಲಭ ವಿಧಾನ
1 ಅರ್ಜಿದಾರರು ಸೇವಾ ಸಿಂಧು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
2 ನಂತರ ಗೃಹ ಜ್ಯೋತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ನಂತರ ಆನ್ಲೈನ್ ಅರ್ಜಿ ಫಾರ್ಮ್ ದೊರೆಯುತ್ತದೆ.
3 ನಂತರ ಮೇಲೆ ಇಂಗ್ಲಿಷ್ ಅಥವಾ ಕನ್ನಡ ಭಾಷೆ ಆಯ್ಕೆ ಮಾಡಿಕೊಳ್ಳಬಹುದು
4 ನಂತರ ನೀವು ಯಾವ ವಿದ್ಯುತ್ ಘಟಕದ ಅಡಿಯಲ್ಲಿ ಬರುತ್ತಿರೋ ಆ ವಿದ್ಯುತ್ ಕಂಪನಿ ಆಯ್ಕೆ ಮಾಡಿಕೊಳ್ಳಿ
5 ನಂತರ ನಿಮ್ಮ ವಿದ್ಯುತ್ ಬಿಲ್ ನಲ್ಲಿ ಇರುವ ಅಕೌಂಟ್ ಐಡಿ ಸಂಖ್ಯೆಯನ್ನು ಟೈಪ್ ಮಾಡಿ ಹೆಸರು ಮತ್ತು ಮನೆ ವಿಳಾಸ ತಾನಾಗಿಯೇ ಅಲ್ಲಿ ನಿಮ್ಮ ಸ್ಕ್ರೀನ್ ಮೇಲೆ ಕಾಣುತ್ತದೆ
6 ಇದಾದ ನಂತರ ಮುಂದಿನ ಆಯ್ಕೆಗಳು ಮಾಲಿಕ ಬಾಡಿಗೆದಾರ ಕುಟುಂಬ ಸದಸ್ಯ ಎಂಬ ಆಯ್ಕೆಗಳು ನಿಮಗೆ ಸಿಗುತ್ತವೆ ಅದರಲ್ಲಿ ಸೂಕ್ತವಾದದ್ದನ್ನು ಆಯ್ದುಕೊಳ್ಳಿ.
7 ಅರ್ಜಿದಾರ ಮನೆ ಯಜಮಾನ ಅಥವಾ ಕುಟುಂಬ ಸದಸ್ಯರ ಆಧಾರ್ ಸಂಖ್ಯೆ ಅಥವಾ ನೀವು ಬಾಡಿಗೆ ಇದ್ದರೆ ಬಾಡಿಗೆದಾರರ ಆಧಾರ್ ಕಾರ್ಡ್ ಸಂಖ್ಯೆ ಟೈಪ್ ಮಾಡಬೇಕು
ನಂತರ ಆಧಾರ್ e – KYC ಕೇಳುತ್ತದೆ OK ಮಾಡಿದರೆ ಹೊಸ ಪೇಜ್ ತೆರೆದುಕೊಳ್ಳುತ್ತದೆ.. ಅಲ್ಲಿ OK ಅಂತ ಟಿಕ್ ಮಾಡಿ.. ಆಧಾರ್ ಕಾರ್ಡ್’ನಲ್ಲಿ ಇರುವ ಫೋನ್ ನಂಬರ್’ಗೆ OTP ( ಒಟಿಪಿ) ಸಂಖ್ಯೆ ಬರುತ್ತದೆ.. ಅದನ್ನ ಟೈಪಿಸಿ OK ಮಾಡಿ, e – KYC ಮುಗಿಯಿತು. ಅಥವಾ
ಸಂವಹನಕ್ಕಾಗಿ ದೂರವಾಣಿ ಸಂಖ್ಯೆ ಎಂದಿರುತ್ತದೆ. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಟೈಪ್ ಮಾಡಿದ ನಂತರ ನೀವು ಟೈಪಿಸಿದ ನಂಬರ್ ಗೆ OTP ಬರುತ್ತದೆ. ಅದನ್ನು ಅಲ್ಲಿ ಎಂಟರ್ ಮಾಡಿ.
8) ನಂತರ ಮುಂದಿನ ಬಾಕ್ಸ್’ ನಲ್ಲಿ ಸಂಪರ್ಕಕ್ಕಾಗಿ ಫೋನ್ ಸಂಖ್ಯೆ ಟೈಪ್ ಮಾಡಿ. ಟೈಪ್ ಮಾಡಿರುವ ಸಂಖ್ಯೆಗೆ ಮತ್ತೊಂದು OTP (ಒಟಿಪಿ) ಬರುತ್ತದೆ.
ಅದನ್ನ ಟೈಪ್ ಮಾಡಿ OK ಮಾಡಿ.
9) ಕೆಳಗೆ I agree ಅಂತ ಇರುವ ಡಿಕ್ಲೆರೇಶನ್’ಗೆ ಬಲಗಡೆಯ ಮಾರ್ಕ್ ಟಿಕ್ ಮಾಡಿ ✅ ಮಾಡಿ.
10) ಕೆಳಗೆ Word verification ಅಂತ ತೋರಿಸುವ 6 ಸಂಖ್ಯೆಯನ್ನ, ಅಲ್ಲಿನ ಬಾಕ್ಸ್’ನಲ್ಲಿ ಟೈಪ್ ಮಾಡಿ. ಹಸಿರು ಬಣ್ಣದ submit ಬಟನ್ ಮೇಲೆ ಕ್ಲಿಕ್ ಮಾಡಿ.
11) ನಿಮ್ಮ ಅರ್ಜಿಯ ಒಟ್ಟು ಮಾಹಿತಿಯ ಹೊಸ ಪೇಜ್ ಪುಟ ತೆರೆಯುತ್ತದೆ, ಮತ್ತೆ Submit ಅಂತ ಒತ್ತಿ.
12) ನಿಮ್ಮ ಅರ್ಜಿಯ ಸಂಖ್ಯೆಯೊಂದಿಗೆ ಸ್ವೀಕೃತಿ ಪ್ರತಿಯ ಪಿಡಿಎಫ್ ಬರುತ್ತದೆ. ಅದನ್ನ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇಲ್ಲಿಗೆ ಅರ್ಜಿ ಹಾಕುವ ಪ್ರಕ್ರಿಯೆ ಮುಗಿಯುತ್ತದೆ.
“ಗೃಹ ಜ್ಯೋತಿ” ಯೋಜನೆ (Gruha Jyoti Scheme) ಯ ಅರ್ಜಿಯನ್ನು ನೀವು ಸಲ್ಲಿಸಿದ್ದರೆ ನಿಮ್ಮ ಅರ್ಜಿ ಸ್ವೀಕಾರವಾಗಿದೆ ಅಥವಾ ಇಲ್ಲಾ ಎಂಬುದನ್ನು ತಿಳಿಸಿದುಕೊಳ್ಳಲು ಇವಾಗ ಅವಕಾಶ ಸೀಡಲಾಗಿದೆ. ಅರ್ಜಿ ಸಲ್ಲಿಸಿದ ಗ್ರಾಹಕರು ತಮ್ಮ ಅರ್ಜಿ ಸ್ಥೀತಿ ನೋಡಬಹುದಾಗಿದೆ. ಇಲ್ಲಿ ಕ್ಲಿಕ್ ಮಾಡಿ:- ಗೃಹ ಜ್ಯೋತಿ ಅರ್ಜಿ Status ಚೇಕ್ ಮಾಡಿ
Sevasindhugs.karnataka.gov.in Gruha Jyothi Scheme ಅರ್ಜಿ ಲಿಂಕ್
ಗೃಹಲಕ್ಷ್ಮಿ ಅರ್ಜಿ ಲಿಂಕ್ – ಇಲ್ಲಿ ಕ್ಲಿಕ್ ಮಾಡಿ |