ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

40 ಸೂಪರ್‌ವೈಸರ್ ಸೆಕ್ಯುರಿಟಿ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ : AAAL Recruitment 2021

 

ಅಲೈಯನ್ಸ್ ಏರ್ ಏವಿಯೇಶನ್ ಲಿಮಿಟೆಡ್ (ಎಎಎಎಲ್) ನಲ್ಲಿ 40 ಸೂಪರ್‌ವೈಸರ್ ಸೆಕ್ಯುರಿಟಿ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 15,2021 ಮತ್ತು ಡಿಸೆಂಬರ್ 16,2021 ರಂದು ಬೆಳಿಗ್ಗೆ 9:30 ರಿಂದ 12:30ರ ವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಮುಂದೆ ಓದಿ.

ಒಟ್ಟು ಹುದ್ದೆಗಳು: 40

ಶೈಕ್ಷಣಿಕ ವಿದ್ಯಾರ್ಹತೆ:
ಯಾವುದೇ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸೆಂಬರ್ 15,2021ರ ಅನ್ವಯ ಗರಿಷ್ಟ 45 ವರ್ಷ ವಯೋಮಿತಿಯೊಳಗಿರಬೇಕು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

 

 

ಆಯ್ಕೆ ಪ್ರಕ್ರಿಯೆ:
ಅಲೈಯನ್ಸ್ ಏರ್ ಏವಿಯೇಶನ್ ಲಿಮಿಟೆಡ್ (ಎಎಎಎಲ್) ನೇಮಕಾತಿಯ ಸೂಪರ್‌ವೈಸರ್ ಸೆಕ್ಯುರಿಟಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವೇತನ : ತಿಂಗಳಿಗೆ 22,371/-ರೂ ವೇತನವನ್ನು ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಅರ್ಜಿ ಶುಲ್ಕ :
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 1000/-ರೂ ಅರ್ಜಿ ಶುಲ್ಕವನ್ನು ಡಿಡಿ ಮೂಲಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿಯನ್ನು ನೀಡಲಾಗಿರುತ್ತದೆ.

ಸಂದರ್ಶನ ವಿವರ:
ಸಂದರ್ಶನದಕ್ಕೆ ಹಾಜರಾಗಲಿರುವ ಅಭ್ಯರ್ಥಿಗಳು ಆನ್‌ಲೈನ್‌ ನಲ್ಲಿ ಅಧಿಕೃತ ವೆಬ್‌ಸೈಟ್ https://www.airindia.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿಕೊಂಡು ಡಿಸೆಂಬರ್ 15,2021 ಮತ್ತು ಡಿಸೆಂಬರ್ 16,2021 ರಂದು ಬೆಳಿಗ್ಗೆ 9:30 ರಿಂದ 12:30ರ ವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

Notification PDF
close button