ಆಧಾರ್ ಕಾರ್ಡ್ ಪಡೆಯೋದು ಈಗ ಸುಲಭ

Aadhaar Card Lost? How to Get New One

ಆಧಾರ್ ಕಾರ್ಡ್ ಎನ್ನುವುದು ಇಂದು ಬಹುತೇಕ ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲ ಯೋಜನೆಗಳಿಗೆ ಆಧಾರ್ ಅಗತ್ಯವಾಗಿ ಬೇಕಾಗುತ್ತದೆ. ಆಧಾರ್ ಕಾರ್ಡ್ ಪಡೆದುಕೊಳ್ಳಲು ಕೂಡ ಹಲವು ದಾಖಲೆ ಒದಗಿಸಿ, ಸೂಕ್ತ ಪ್ರಕ್ರಿಯೆ ಪೂರೈಸಬೇಕಿದೆ. ಆದರೆ ಆಧಾರ್ ತಿದ್ದುಪಡಿ ಮತ್ತು ಕಳೆದುಹೋದರೆ ಮತ್ತೆ ಪಡೆದುಕೊಳ್ಳುವುದು ಕೂಡ ತ್ರಾಸದಾಯಕ ಕೆಲಸವಾಗಿದೆ. ಅದಕ್ಕಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, UIDAI ಹೊಸದಾಗಿ mAadhaar app ಪರಿಚಯಿಸಿದೆ…

​mAadhaar ಆ್ಯಪ್‌

ಯುಐಡಿಎಐ ಬಿಡುಗಡೆ ಮಾಡಿರುವ mAadhaar ಆ್ಯಪ್‌ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ. ಈ ಆ್ಯಪ್‌ ಬಳಸಿ ಬಳಕೆದಾರರು ಆಧಾರ್‌ನ ಸಾಫ್ಟ್ ಪ್ರತಿಯನ್ನು ಹೊಂದಬಹುದು ಮತ್ತು ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳಬಹುದು. ಅಂದರೆ ಕಾರ್ಡ್ ಒಯ್ಯುವ ಬದಲು, mAadhaar ಆ್ಯಪ್‌ನಲ್ಲಿ ಡಿಜಿಟಲ್ ಆಧಾರ್ ಕಾರ್ಡ್ ಬಳಸಬಹುದು.

mAadhaar ಆ್ಯಪ್‌ನಲ್ಲಿವೆ ಹಲವು ಪ್ರಯೋಜನ

ಹೊಸ mAadhaar ಆ್ಯಪ್‌ನಲ್ಲಿ ಡಿಜಿಟಲ್ ಆಧಾರ್ ಮಾತ್ರವಲ್ಲ, ಹಲವು ಪ್ರಯೋಜನಗಳನ್ನು ನೀಡಲಾಗಿದೆ. ವಿಳಾಸ ಬದಲಾವಣೆ ಅಥವಾ ಪರಿಷ್ಕರಣೆ, ಆಫ್‌ಲೈನ್ ಕೆವೈಸಿ, ಬಯೋಮೆಟ್ರಿಕ್ ವಿವರ ನಿಯಂತ್ರಣ, ಮೊಬೈಲ್ ಸಂಖ್ಯೆಯ ಬದಲಾವಣೆ ಹೀಗೆ ವಿವಿಧ ಆಯ್ಕೆಗಳನ್ನು ನೀಡಲಾಗಿದೆ. mAadhaar ಆ್ಯಪ್‌ ಬಳಸಿ, ಹೊಸದಾಗಿ ಆಧಾರ್ ಕಾರ್ಡ್ ಪ್ರತಿ ಬೇಕಾಗಿದ್ದಲ್ಲಿ ಪಡೆಯಲು ಅವಕಾಶವಿದೆ. ಹಳೆಯ ಕಾರ್ಡ್ ಕಳೆದುಹೋಗಿದ್ದರೆ ಇಲ್ಲವೆ ಹರಿದು ಹೋಗಿದ್ದರೆ, ಅಲ್ಲಿ ಮತ್ತೊಮ್ಮೆ ಆಧಾರ್ ಪಡೆಯಬಹುದು.



ಆಧಾರ್ ಪ್ರತಿ ಪಡೆಯಲು ಬೇಕಾಗಿರುವುದೇನು?

mAadhaar ಆ್ಯಪ್‌ ಮೂಲಕ ಆಧಾರ್ ಪ್ರತಿ ಪಡೆಯಲು, ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್‌ ಸ್ಟೋರ್‌ಗೆ ತೆರಳಿ. ಅಲ್ಲಿ mAadhaar ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಿ. ಇಂಟರ್‌ನೆಟ್ ಸಂಪರ್ಕ ಇರುವುದನ್ನು ಖಚಿತಪಡಿಸಿಕೊಳ್ಳಿ. ಆಧಾರ್‌ಗೆ ಜೋಡಿಸಿರುವ ನಿಮ್ಮ ಮೊಬೈಲ್ ಆನ್ ಇರಲಿ. ಜತೆಗೆ ನಿಮ್ಮ 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆಯೂ ಬೇಕು.

ಆಧಾರ್ ಪ್ರತಿ ಪಡೆಯುವ ವಿಧಾನ

ಮೊದಲೇ ಡೌನ್‌ಲೋಡ್ ಮಾಡಿಟ್ಟುಕೊಂಡಿರುವ mAadhaar ಆ್ಯಪ್‌ ಅಪ್‌ಡೇಟ್ ಆಗಿದೆಯೇ ನೋಡಿಕೊಳ್ಳಿ. mAadhaar ಆ್ಯಪ್‌ ತೆರೆದು, ಮೊಬೈಲ್ ಸಂಖ್ಯೆ ನಮೂದಿಸಿ, ನೋಂದಣಿ ಮಾಡಿಕೊಳ್ಳಿ. ಅದರಲ್ಲಿ ಸರ್ವಿಸ್ ಸೆಕ್ಷನ್ ಅಡಿಯಲ್ಲಿ ಆರ್ಡರ್ ಆಧಾರ್ ರಿಪ್ರಿಂಟ್ ಎಂದು ಕೊಡಿ. ಬಳಿಕ ಟರ್ಮ್ಸ್ ಕಂಡಿಶನ್ಸ್ ಕ್ಲಿಕ್ ಮಾಡಿ, ಒಕೆ ಕೊಡಿ.

ಆಧಾರ್ ಪ್ರತಿ ಪಡೆಯುವುದು ಸುಲಭ

mAadhaar ಆ್ಯಪ್‌ ಮೂಲಕ ಅಲ್ಲಿ ನೀಡಿರುವ ಎರಡು ಆಯ್ಕೆಗಳಲ್ಲಿ ನಿಮಗೆ ಬೇಕಾಗಿರುವುದನ್ನು ಸೆಲೆಕ್ಟ್ ಮಾಡಿ. ಮೊದಲನೆಯದ್ದು ರಿಜಿಸ್ಟರ್ಡ್ ಮೊಬೈಲ್ ನಂಬರ್, ಎರಡನೆಯದ್ದು ಅನ್‌ರಿಜಿಸ್ಟರ್ಡ್ ಮೊಬೈಲ್ ನಂಬರ್. ನೀವು ಈಗಾಗಲೇ ಆಧಾರ್ ಜತೆ ಮೊಬೈಲ್ ನಂಬರ್ ನೋಂದಾಯಿಸಿಕೊಂಡಿದ್ದರೆ, ಮೊದಲ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ಆಧಾರ್ ಸಂಖ್ಯೆ ನಮೂದಿಸಿ, ಸೀಕ್ರೆಟ್ ನಂಬರ್ ಎಂಟರ್ ಮಾಡಿ. ಬಳಿಕ ಒಟಿಪಿ ಬರುತ್ತದೆ. ಮೊಬೈಲ್ ನೋಂದಾಯಿಸಿಲ್ಲವಾದರೆ, ಎರಡನೆಯ ಆಯ್ಕೆ ಉಪಯೋಗಕ್ಕೆ ಬರುತ್ತದೆ. ಬಳಿಕ ಒಟಿಪಿ ಎಂಟರ್ ಮಾಡಿ, ಪ್ರಕ್ರಿಯೆ ಪೂರ್ಣಗೊಳಿಸಿ.



Aadhaar Card is the Aadhaar required for almost all central and state government projects today. To obtain an Aadhaar card, you have to provide many documents and complete the process. But the Aadhaar correction and reclaiming of the lost is also a troublesome task. That’s why the Indian Identity Authority of India, UIDAI has introduced the mAadhaar app …

mAadhaar AAP

The mAadhaar app released by UIDAI has many benefits. Using this app, users can have a soft copy of Aadhaar and use it for various tasks. This means that instead of carrying a card, you can use a digital Aadhaar card in the mAadhaar App.

mAadhaar App has many benefits

The new mAadhaar app has not only digital Aadhaar but also many benefits. Various options are provided such as address change or revision, offline KYC, biometric detail control, mobile number change. Using the mAadhaar App, you can get a new Aadhaar card if needed. If the old card is lost or torn, you can get Aadhaar again.

What does Aadhaar need to get over?

To get Aadhaar over the mAadhaar App, go to Google Play Store or Apple App Store. Download the mAadhaar App there. Make sure there is an internet connection. Have your mobile connected to Aadhaar. You also need your 12 digit Aadhaar card number.

Method of getting Aadhaar

Check to see if the pre-downloaded mAadhaar app is updated. Open mAadhaar App, enter the mobile number, and register. Give it as an Order Aadhaar Reprint under Service Section. Then click on Terms Conditions.

Aadhaar is easy to get to

Choose what you want from the two options offered through the mAadhaar App. The first is the registered mobile number, the second is the unregistered mobile number. If you have already registered a mobile number with Aadhaar, click on the first option. Then enter the Aadhaar number and enter the Secret Number. Then comes the OTP. If the mobile is not registered, the second option is used. Then enter the OTP and complete the process.

error: Content is protected !!