ಈ ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ಒಂದಷ್ಟು ಧಾರಾವಾಹಿಗಳು ಪ್ರಸಾರವನ್ನೇ ನಿಲ್ಲಿಸಿವೆ. ಅದರ ಮಧ್ಯೆ ಹೊಸ ಹೊಸ ಕಂಟೆಂಟ್ ಇರುವ ಧಾರಾವಾಹಿಗಳೂ ಕೂಡ ಶುರುವಾಗುತ್ತಲೇ ಇವೆ. ಇದೀಗ ಜೀ ಕನ್ನಡ ವಾಹಿನಿಯು ಜುಲೈ 4ರಿಂದ ಹೊಸ ಧಾರಾವಾಹಿಯೊಂದನ್ನು ಆರಂಭಿಸಲಿದೆ. ಭಾರತದ ಸಂವಿಧಾನ ರೂಪಿಸಿದ, ಶೋಷಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತಾದ ಧಾರಾವಾಹಿ ಇದಾಗಿದೆ.
‘ಜುಲೈ 4ರಿಂದ ಶನಿವಾರ ಮತ್ತು ಭಾನುವಾರ ಸಂಜೆ 6 ರಿಂದ 7 ಗಂಟೆಯವರೆಗೆ ಪ್ರಸಾರವಾಗಲಿರುವ ‘ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್’ ಧಾರಾವಾಹಿಯು ಜೀ ಕನ್ನಡದ ಪ್ರಯಾಣದಲ್ಲಿ ಮತ್ತೊಂದು ಮಹತ್ವಪೂರ್ಣ ಹೆಜ್ಜೆಯಾಗಿದೆ. ಭಾರತದ ಸಂವಿಧಾನ ಶಿಲ್ಪಿ, ಅಸಾಧಾರಣ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನದ ಗಾಥೆಯು ಕನ್ನಡದಲ್ಲಿ ಪ್ರಸಾರವಾಗುತ್ತಿರುವುದು ಇದೇ ಮೊದಲು’ ಎಂದು ವಾಹಿನಿ ಹೇಳಿಕೊಂಡಿದೆ.
ಬಾಲ್ಯದಿಂದಲೇ ಅಸ್ಪೃಶ್ಯತೆಯ ಸಂಕಷ್ಟ ಎದುರಿಸಿದರೂ ಕಂಗೆಡದೇ ತಮ್ಮ ವಿದ್ಯಾಭ್ಯಾಸ ಪೂರೈಸಿ ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸಿದ, ಅವರ ಸ್ವಾತಂತ್ರ್ಯಕ್ಕಾಗಿ ಹೋರಾಡುವ ನಾಯಕನಾಗಿ ಬೆಳೆದವರು ಡಾ. ಬಿ.ಆರ್ ಅಂಬೇಡ್ಕರ್. ಅವರ ಈ ಬೆಳವಣಿಗೆಯ ಹಂತಗಳನ್ನು ಧಾರಾವಾಹಿಯಲ್ಲಿ ಎಳೆ ಎಳೆಯಾಗಿ ಮನಮುಟ್ಟುವಂತೆ ಚಿತ್ರಿಸಲಾಗಿದೆಯಂತೆ. ಭಾರತ ಸ್ವತಂತ್ರವಾದ ನಂತರ ಕಾನೂನು ಸಚಿವರಾಗಿ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅವರ ಕೊಡುಗೆ ಅನುಪಮವಾದುದು. ಅವರ ಸೇವೆಯನ್ನು ಗುರುತಿಸಿ 1990ರಲ್ಲಿ ಮರಣೋತ್ತರವಾಗಿ ಅವರಿಗೆ ‘ಭಾರತ ರತ್ನ’ ನೀಡಿ ಪುರಸ್ಕರಿಸಲಾಗಿದೆ.
‘ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್’ ಧಾರಾವಾಹಿ ಪ್ರಸಾರ ಕುರಿತು ಮಾತನಾಡಿರುವ ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ‘ಜನರು ಬಯಸುವ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ಮುಂಚೂಣಿಯಲ್ಲಿರುವ ಜೀ ಕನ್ನಡ ಇದೀಗ ಭಾರತದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಜೀವನ ಕುರಿತಾದ ಧಾರಾವಾಹಿ ಪ್ರಸಾರ ಮಾಡುವ ಮೂಲಕ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಜೀ ಕನ್ನಡದ ಎಲ್ಲ ಧಾರಾವಾಹಿಗಳನ್ನು ಪ್ರೀತಿಯಿಂದ ವೀಕ್ಷಿಸುವ ಕನ್ನಡದ ವೀಕ್ಷಕರಿಗೆ ಈ ಧಾರಾವಾಹಿ ಇಷ್ಟವಾಗುತ್ತದೆ ಎಂಬ ನಂಬಿಕೆ ನಮ್ಮದು’ ಎನ್ನುತ್ತಾರೆ.
Due to this lockdown effect, a few episodes have stopped airing. In the meantime, a new content series is also starting to appear. Now, the Zee Kannada channel will launch a new series from July 4. Dr. B.R. Gopalakrishnan, the founder of the Constitution of India, fought for the rights of the exploited. This is the serial on Ambedkar.
“The great Dr. BR Ambedkar series, which will air on Saturday 4th July and Sunday from 6 pm to 7 pm, is another significant step in the journey of Jee Kannada. The Constitutionalist of India, Dr. B.R. This is the first time Ambedkar’s life story is being circulated in Kannada.
Despite the hardships of untouchability from an early age, he was raised as a leader who fought for his freedom, educated and advocated for the rights of the exploited. BR Ambedkar. These stages of their development are portrayed in a serialized fashion. After India’s independence, his role as Minister of Law and Chairman of the Constitutional Committee was unique. He was awarded the ‘Bharat Ratna’ posthumously in 1990 for his service.
Speaking about the serial ‘Dr. BR Ambedkar’, the head of JEE Kannada Business Head Raghavendra Hunasur said, ‘JEE Kannada is the forerunner of creating the programs that people want. The serial on Ambedkar’s life has taken another significant step. We are confident that the audience will love all the serials of Zee Kannada.