ಅಮಿತಾಬ್ ಬಚ್ಚನ್ ಮಾಡಿದ ಸಹಾಯವೇನು ಗೊತ್ತಾ?

ಕರೊನಾ ಎರಡನೇ ಅಲೆ ಹೆಚ್ಚಾಗಿದ್ದು, ಸಂಕಷ್ಟದಲ್ಲಿರುವವರ ಸಹಾಯಕ್ಕೆ ಬಾಲಿವುಡ್​ನ ಹಲವು ಹೆಸರಾಂತ ಕಲಾವಿದರು ಮುಂದೆ ಬಂದಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಅಮಿತಾಭ್ ಬಚ್ಚನ್ ಅವರು ಸಂಕಷ್ಟದ ಜನರಿಗೆ ಏನು ಸಹಾಯ ಮಾಡಿದ್ದಾರೆ? ಎಂದು ಸೋಷಿಯಲ್ ಮೀಡಿಯಾ ಮೂಲಕ ಹಲವರು ಪ್ರಶ್ನಿಸಿದ್ದಾರೆ.

ಈಕುರಿತು, ಅಮಿತಾಭ್ ಬಚ್ಚನ್ಪ್ರತಿಕ್ರಿಯೆ ನೀಡಿರಲಿಲ್ಲ. ಯಾವಾಗ, ಪ್ರಶ್ನಿಸುವವರ ಸಂಖ್ಯೆ ಹೆಚ್ಚಾಯಿತೋ, ಅಮಿತಾಭ್ ಕೊನೆಗೂ ಮೌನ ಮುರಿದಿದ್ದಾರೆ. ತಾವೆಷ್ಟು ಕೊಟ್ಟಿದ್ದೇವೆ ಎಂದು ಬಹಿರಂಗಪಡಿಸಿದ್ದಾರೆ. ‘ದಾನ ಕೊಟ್ಟ ವಿಷಯವನ್ನು ಹೇಳಿಕೊಳ್ಳಬಾರದು. ಅದು ಬಹಳ ಸಂಕೋಚದ ವಿಷಯ. ದಾನ ಕೊಡುವುದು ನನ್ನ ತೃಪ್ತಿಗೆ ಮತ್ತು ನಾನು ಯಾರಿಗೂ ಗೊತ್ತಾಗದಂತೆ ನನ್ನದೇ ರೀತಿಯಲ್ಲಿ ಸಹಾಯ ಮಾಡಿಕೊಂಡು ಬಂದಿದ್ದೇನೆ. ಆದರೆ, ನೀವೇನು ಮಾಡಿದ್ದೀರಿ, ಕಷ್ಟದಲ್ಲಿರುವವರಿಗೆ ಏನು ಮಾಡುತ್ತಿದ್ದೀರಿ ಎಂಬ ಪ್ರಶ್ನೆಗಳನ್ನು ಕೇಳಿಕೇಳಿ ಸಾಕಾಗಿ ಹೋಗಿದೆ.

ಹಾಗಾಗಿ ಇದುವರೆಗೂ ಏನು ಮಾಡಿದ್ದೇನೆ ಎಂದು ಅನಿವಾರ್ಯವಾಗಿ ಹೇಳಬೇಕಾಗಿದೆ’ ಎಂದಿದ್ದಾರೆ ಅಮಿತಾಭ್.

‘ಕಳೆದ ವರ್ಷ 1500 ರೈತರ ಸಾಲವನ್ನು ನನ್ನ ಪರ್ಸನಲ್ ಅಕೌಂಟ್​ನಿಂದ ತೀರಿಸಿದ್ದೇನೆ. ಈ ಮೂಲಕ, ಕಷ್ಟದಲ್ಲಿರುವ ಹಲವರನ್ನು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ತಪ್ಪಿಸಿದ್ದೇನೆ. ಅಷ್ಟೇ ಅಲ್ಲ, ನಾಲ್ಕು ಲಕ್ಷ ಕಾರ್ವಿುಕರಿಗೆ ಒಂದು ತಿಂಗಳ ಕಾಲ ಊಟ ವಿತರಿಸಲಾಗಿದೆ. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಐದು ಸಾವಿರ ಕಾರ್ವಿುಕರಿಗೆ ಹಂಚಲಾಗಿದೆ. ಇದರ ಜತೆಗೆ, ಆಸ್ಪತ್ರೆ ಮತ್ತು ಕರೊನಾ ವಾರಿಯರ್ಸ್​ಗೆ ಮಾಸ್ಕ್, ಪಿಪಿಇ ಕಿಟ್​ಗಳನ್ನು ಹಂಚಲಾಗಿದೆ’ ಎಂದು ಅಮಿತಾಭ್ ಹೇಳಿಕೊಂಡಿದ್ದಾರೆ.


error: Content is protected !!