ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

SSLC ಹಾಗು PUC ಪಾಸಾದ ಅಭ್ಯರ್ಥಿಗಳಿಗೆ ಸೇನೆಯಲ್ಲಿ ವಿವಿಧ ಖಾಲಿ ಹುದ್ದೆಗಳ ನೇಮಕಾತಿ 2022

SSLC ಹಾಗು PUC ಪಾಸಾದ ಅರ್ಹ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯಾ ಫಿರಂಗಿದಳದಲ್ಲಿ ವಿವಿಧ ಹುದ್ದೆಗಳ ನೇಮಕಾತಿ 2022 

 

Artillery Centre Nasik Recruitment 2022:  ಭಾರತೀಯ ಸೇನೆ ನಾಸಿಕ್‌ ಇಂಡಿಯನ್‌ ಆರ್ಮಿ ಫಿರಂಗಿದಳದಲ್ಲಿ ಖಾಲಿ ಇರುವ ಕೆಳ ದರ್ಜೆ ಸಹಾಯಕ, ಕುಕ್‌, ಕಾರ್ಪೆಂಟರ್, ಎಂಟಿಎಸ್ (ವಾಚ್‌ಮನ್‌) ಸೇರಿದಂತೆ ವಿವಿಧ ಒಟ್ಟು 107 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಪಡಿಸಿದ ಕೊನೆಯ ದಿನಾಂಕದೊಳಗಾಗಿ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

ಒಟ್ಟು ಹುದ್ದೆಗಳು: 107
ಉದ್ಯೋಗ ಸ್ಥಳ: ಭಾರತದಾದ್ಯಂತ

ಶೈಕ್ಷಣಿಕ ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯೋಮಿತಿ ಪೂರೈಸಿರಬೇಕು ಹಾಗೂ ಗರಿಷ್ಠ ಈ ಕೆಳಗಿನ ವಯೋಮಿತಿಯನ್ನು ಮೀರಿರಬಾರದು,

ಸಾಮಾನ್ಯವರ್ಗ 25 ವರ್ಷ
ಹಿಂದುಳಿದ ವರ್ಗ 28 ವರ್ಷ
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 30 ವರ್ಷಗಳ ಗರಿಷ್ಠ ವಯೋಮಿತಿಗಳನ್ನು ಮೀರಿರಬಾರದು.

ಉದ್ಯೋಗಾವಕಾಶ 2022: ನೀರಾವರಿ ಇಲಾಖೆ ಖಾಲಿ ಹುದ್ದೆಗಳ  ನೇಮಕಾತಿ 2022

ವೇತನಶ್ರೇಣಿ:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಲೆವೆಲ್-1, ಲೆವೆಲ್‌-2 ಪೇ ಮೆಟ್ರಿಕ್ಸ್‌ ಆಧಾರದಲ್ಲಿ ರೂ.19,000 ದಿಂದ ಆರಂಭಗೊಂಡು 63,000 ವರೆಗೆ ಮಾಸಿಕ ವೇತನವನ್ನು ಪಡೆಯಲಿದ್ದಾರೆ.

 

 

ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪರೀಕ್ಷೆ ಅವಧಿ – 2 ಗಂಟೆ.
ಒಟ್ಟು ಅಂಕಗಳು- 150 .

ಅರ್ಜಿ ಸಲ್ಲಿಸಬೇಕಾದ ಕಚೇರಿ ವಿಳಾಸ:
‘The Commandant, Headquarters, Artillery Centre,
Nasik Road Camp PIN-422102′

ಉದ್ಯೋಗ ಸುದ್ದಿ: ಅಂಗನವಾಡಿಯಲ್ಲಿ ವಿವಿಧ ಖಾಲಿ ಹುದ್ದೆಗಳು 2022

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30 ಡಿಸೆಂಬರ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಜನವರಿ 2022

Application Form / Official Notification PDF

 

close button