ಜಿಲ್ಲಾ ಅರೋಗ್ಯ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ 2021

ಬಾಗಲಕೋಟೆ ಜಿಲ್ಲೆಯ ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಆದೇಶದ ಮೇರೆಗೆ ಬಾದಾಮಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲುಸಂದರ್ಶನಕ್ಕೆ ಕರೆಯಲಾಗಿದೆ. ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ನೇರ ಸಂದರ್ಶನಕ್ಕೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ

ಶುಶ್ರೂಕ ಅಧಿಕಾರಿಗಳು- 4 ಹುದ್ದೆಗಳು
ವಿದ್ಯಾರ್ಹತೆ: ಬಿಎಸ್ಸಿ ನರ್ಸಿಂಗ್/ಜಿ.ಎನ್.ಎಮ್ ಪದವಿ ಹಾಗೂ ಕೆ.ಎನ್.ಸಿ ನೊಂದಣಿ ಹೊಂದಿರಬೇಕು. ಮಾಸಿಕ ವೇತನ 25 ಸಾವಿರ ರೂ ನೀಡಲಾಗುತ್ತದೆ.

ಫಾರ್ಮಸಿ ಅಧಿಕಾರಿ- 1 ಹುದ್ದೆ
ವಿದ್ಯಾರ್ಹತೆ: ಡಿ.ಫಾರ್ಮಾ ಪದವಿ ಹಾಗೂ ಕೆ.ಎನ್.ಸಿ ನೋಂದಣಿ ಹೊಂದಿರಬೇಕು. ಮಾಸಿಕ ವೇತನ 20 ಸಾವಿರ ರೂ. ನೀಡಲಾಗುತ್ತದೆ.
ಕಿರಿಯ ಆರೋಗ್ಯ ಸಹಾಯಕಿ- 3 ಹುದ್ದೆಗಳು
ವಿದ್ಯಾರ್ಹತೆ: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ಎ.ಎನ್.ಎಮ್ ತರಬೇತಿ ಪಡೆದಿರಬೇಕು ಹಾಗೂ ಕೆ.ಎನ್.ಸಿ ನೋಂದಣಿ ಹೊಂದಿರಬೇಕು. ಮಾಸಿಕ ವೇತನ 15 ಸಾವಿರ ರೂ ಸಂಭಾವನೆ ನೀಡಲಾಗುತ್ತದೆ.

ಗ್ರೂಪ್‌ ಡಿ – 8 ಹುದ್ದೆಗಳು
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಮಾಸಿಕ ವೇತನ 12 ಸಾವಿರ ರೂ. ವೇತನ ನೀಡಲಾಗುವುದು.

ಮೇಲಿನ ಹುದ್ದೆಗಳಿಗೆ ಸಂದರ್ಶನ ಪ್ರಕ್ರಿಯೆಗಳನ್ನು ಜೂನ್ 8 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತಾಲ್ಲೂಕು ಅಧಿಕಾರಿಗಳ ಕಾರ್ಯಾಲಯ ಬಾದಾಮಿಯಲ್ಲಿ ನಡೆಯಲಿದೆ.
ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ ಸಂದರ್ಶನಕ್ಕೆ ಹೆಸರು ನೋಂದಾಯಿಸಲು ಅವಕಾಶವಿದ್ದು, ಹೆಸರು ನೋಂದಾಯಿಸದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಪರಿಗಣಿಸಲಾಗುವುದಿಲ್ಲ.


10th Pass Jobs 2021
Degree Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
PUC Pass Jobs 2021

 

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವಾಗ ತಮ್ಮ ಮೂಲ ದಾಖಲಾತಿಗಳನ್ನುಒಂದು ಸೆಟ್ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು. ನೇಮಕಾತಿಯು ತಾತ್ಕಾಲಿಕವಾಗಿ ಸೆಪ್ಟೆಂಬರ್‌ 30 ವರೆಗೆ ಮಾತ್ರ ಗುತ್ತಿಗೆ ಆಧಾರಿತ ನೇಮಕಾತಿ ಆಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಅಧಿಕಾರಿಗಳು ಬಾದಾಮಿ ಅವರನ್ನು 7760224572 ಸಂಪರ್ಕಿಸುವಂತೆ ಪ್ರಕಟಣೆ ಮೂಲಕ ತಿಳಿಸಲಾಗಿದೆ.

error: Content is protected !!