ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗಳ ಕೊವಿಡ 19 ಐಸೋಲೇಶನ್ ವಾರ್ಡ್ ಗಳಲ್ಲಿ ಕರ್ತವ್ಯ ನಿರ್ವಹಿಸಲು ಈ ಕೆಳಕಂಡ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಸೆಪ್ಟೆಂಬರ್- 2021 ರ ವರೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನವನ್ನು ದಿನಾಂಕ :22-03-2021 ರಿಂದ 3 ದಿನಗಳವರೆಗೆ ಮಾತ್ರ ಹಮ್ಮಿಕೊಳ್ಳಲಾಗಿದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು ಮೂಲ ದಾಖಲಾತಿ ಮತ್ತು ಜೆರಾಕ್ಸ್ ಪ್ರತಿಗಳೊಂದಿಗೆ ಬೆಳಿಗ್ಗೆ 11:00 ಗಂಟೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ :207, 2 ನೇ ಮಹಡಿ, ಬೀರಸಂದ್ರ ಗ್ರಾಮ, ವಿಶ್ವನಾಥಪುರ ಅಂಚೆ ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು ಇಲ್ಲಿ ಸಂಪರ್ಕಿಸುವುದು.
* ಹುದ್ದೆಗಳ ವಿವರ :
ಅರವಳಿಕೆ ತಜ್ಞರು – 02
ಎಕ್ಸ್ ರೇ ತಂತ್ರಜ್ಞರು – 02
ಫಿಜಿಷಿಯನ್ – 06
ರೇಡಿಯೋಲಾಜಿಸ್ಟ್ – 02
ಮಕ್ಕಳ ತಜ್ಞರು – 04
ಭದ್ರತಾ ಸಿಬ್ಬಂದಿ – 03
ಶುಶ್ರೂಷಕರು – 65
ಪ್ರಯೋಗಶಾಲಾ ತಂತ್ರಜ್ಞರು -07
ಫಾರ್ಮಸಿಸ್ಟ್ – 02
ಗ್ರೂಪ್ ಡಿ ಸಿಬ್ಬಂದಿ – 34
ಮೆಡಿಕಲ್ ಆಫೀಸರ್ – 38
ಸ್ವಚ್ಛತಾ ಸಿಬ್ಬಂದಿ – 05
ಒಟ್ಟು ಹುದ್ದೆಗಳು: 170
ಉದ್ಯೋಗ ಸ್ಥಳ: ಕರ್ನಾಟಕ
ಆಯ್ಕೆ ವಿಧಾನ
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು.
ವಿದ್ಯಾರ್ಹತೆ:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಈ ಕೆಳಕಂಡ ವಿದ್ಯಾರ್ಹತೆಯನ್ನು ಹೊಂದಿರಬೇಕು
– MBBS, MD, DA, DMRD / MDRD / DCH DIPLOMA / DEGREE IN NURSING, DMLT / BSc IN LAB, DIPLOMA IN X-RAY TECHNOLOGY, DIPLOMA IN PHARMACY, SSLC PASS / FAIL ವಿದ್ಯಾರ್ಹತೆಯನ್ನು ಹೊಂದಿರಬೇಕು.
ವೇತನ ಶ್ರೇಣಿ:
ಹುದ್ದೆಗಳಿಗೆ ಅನುಸಾರವಾಗಿ ಆಯ್ಕೆಯಾದ ಅಭ್ಯರ್ಥಿಗಳು ಈ ಕೆಳಗಿನಂತೆ ಮಾಸಿಕ ವೇತನ ಪಡೆಯುವರು :
ಗ್ರೂಪ್ ಡಿ ಸಿಬ್ಬಂದಿ – 12,000/-
ಅರವಳಿಕೆ ತಜ್ಞರು – 1,21,000/-
ಭದ್ರತಾ ಸಿಬ್ಬಂದಿ – 12,000/-
ಫಿಜಿಷಿಯನ್ – 1,21,000/-
ಎಕ್ಸ್ ರೇ ತಂತ್ರಜ್ಞರು – 15,000/-
ರೇಡಿಯೋಲಾಜಿಸ್ಟ್ – 1,21,000/-
ಮಕ್ಕಳ ತಜ್ಞರು – 1,21,000/-
ಮೆಡಿಕಲ್ ಆಫೀಸರ್ – 60,000/-
ಶುಶ್ರೂಷಕರು – 20,000/-
ಪ್ರಯೋಗಶಾಲಾ ತಂತ್ರಜ್ಞರು -15,000/-
ಫಾರ್ಮಸಿಸ್ಟ್ – 15,000/-
ಗ್ರೂಪ್ ಡಿ ಸಿಬ್ಬಂದಿ – 12,000/-
ಸ್ವಚ್ಛತಾ ಸಿಬ್ಬಂದಿ – 12,000/-
ಭದ್ರತಾ ಸಿಬ್ಬಂದಿ – 12,000/-
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23 ಮಾರ್ಚ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಮಾರ್ಚ್ 2021