ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ 2021: ನೇರ ನೇಮಕಾತಿಗೆ ಅರ್ಜಿ ಅಹ್ವಾನ

Telegram Group

 

BBMP Walk In Interview 2021 for various posts

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯು ಕ್ಷಯರೋಗ ನಿರ್ಮೂಲನಾ (ಅರ್‌.ಎನ್‌.ಟಿ.ಸಿ.ಪಿ) ಕಾರ್ಯಕ್ರಮದಡಿಯಲ್ಲಿ ವಿವಿಧ ಹುದ್ದೆಗಳನ್ನು ನೇಮಕ ಮಾಡಲು ಪ್ರಕಟಣೆ ಹೊರಡಿಸಿದೆ. ಖಾಲಿ ಇರುವ ವೈದ್ಯಾಧಿಕಾರಿಗಳು, ಹಿರಿಯ ಕ್ಷಯರೋಗ ಮೇಲ್ವಿಚಾರಕರು, ಕ್ಷಯರೋಗ ಸಂದರ್ಶಕರು, ಅಕೌಂಟೆಂಟ್, ಕೌನ್ಸಿಲರ್ ಮತ್ತು ಲ್ಯಾಬ್ ಟೆಕ್ನೀಷಿಯನ್ ಹುದ್ದೆಗಳನ್ನು ಮೆರಿಟ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ.

ಈ ಹುದ್ದೆಗಳನ್ನು 01 ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ವಾಕ್‌ ಇನ್‌ ಪ್ರಕ್ರಿಯೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ಹೆಸರು ಮತ್ತು ಸಂಖ್ಯೆ ಈ ಕೆಳಗಿನಂತಿದೆ.
ಮೆಡಿಕಲ್ ಆಫೀಸರ್ ( ಮೆಡಿಕಲ್ ಕಾಲೇಜು) – 1
ಸೀನಿಯರ್ ಟ್ರೀಟ್‌ಮೆಂಟ್ ಸೂಪರ್‌ವೈಸರ್ – 4
ಟ್ಯೂಬರ್‌ಕ್ಯುಲೋಸಿಸ್ ಹೆಲ್ತ್‌ ವಿಸಿಟರ್ – (TB-HV) – 20
ಅಕೌಂಟಂಟ್ – – 1
ಕೌನ್ಸಿಲರ್ – ಡಿಆರ್‌ಟಿಬಿ – 1
ಲ್ಯಾಬ್ ಟೆಕ್ನೀಷಿಯನ್/SputumMicroscopist – 3

 

 

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಸಂಬಂಧಿಸಿದ ವಿಷಯಗಳಲ್ಲಿ ಎಂಬಿಬಿಎಸ್ / ಡಿಪ್ಲೊಮ / ಡಿಗ್ರಿ ಪಾಸ್‌ ಮಾಡಿರಬೇಕು.

ವಯೋಮಿತಿ : ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷಗಳು ತುಂಬಿರಬೇಕು. ಸಾಮಾನ್ಯ ವರ್ಗ – 35, ಇತರೆ ಹಿಂದುಳಿದ ವರ್ಗ – 38, ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನದ ಅವಶ್ಯಕತೆ ಕಡ್ಡಾಯವಾಗಿರುತ್ತದೆ. ಆಸಕ್ತರು ಸಂಬಂಧಿಸಿದ ಮೂಲ ದಾಖಲೆಗಳೊಂದಿಗೆ ನಿಗದಿತ ಸ್ಥಳಕ್ಕೆ, ನಿಗದಿತ ದಿನಾಂಕದಂದು ವಾಕ್ ಇನ್‌ ಇಂಟರ್‌ವ್ಯೂಗೆ ಹಾಜರಾಗಲು ಸೂಚಿಸಲಾಗಿದೆ.

ಸಂದರ್ಶನ ವಿಳಾಸ : ನೌಕರರ ಭವನ, ಬಿಬಿಎಂಪಿ ಕೇಂದ್ರ ಕಚೇರಿ, ಬೆಂಗಳೂರು.

ವೇತನಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.13000 – 45000 ರವರೆಗೆ ಮಾಸಿಕ ವೇತನ ನೀಡಲಾಗುತ್ತದೆ.

ಸಂದರ್ಶನ: ಹುದ್ದೆಗಳಿಗೆ ದಿನಾಂಕ 17–11-2021, 18-11-2021 ರಂದು ಸಂದರ್ಶನ ನಡೆಸಲಾಗುತ್ತದೆ.

Website

 

Telegram Group
error: Content is protected !!