ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತ ನೇಮಕಾತಿ 2022
BCB Bank Recruitment 2022: ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತ, ಜಯನಗರ, ಬೆಂಗಳೂರು ಇಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತ |
ಹುದ್ದೆಗಳ ಹೆಸರು: | ವಿವಿಧ ಹುದ್ದೆಗಳು |
ಒಟ್ಟು ಹುದ್ದೆಗಳು | 18 |
ಅರ್ಜಿ ಸಲ್ಲಿಸುವ ಬಗೆ | ಆಫ್ಲೈನ್ |
ಉದ್ಯೋಗ ಸ್ಥಳ | ಬೆಂಗಳೂರು |
ವಿದ್ಯಾರ್ಹತೆ:
ಮುಖ್ಯ ಕಾರ್ಯನಿರ್ವಹಣಾಧಿಕಾರಿ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಹಿರಿಯ ವ್ಯವಸ್ಥಾಪಕರು – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಕಂಪ್ಯೂಟರ್ ಮ್ಯಾನೇಜರ್ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಗಣಕ ವಿಜ್ಞಾನದಲ್ಲಿ ಬಿ.ಇ ಪದವಿ ಅಥವಾ ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಮತ್ತು ಬ್ಯಾಂಕಿಂಗ್ ವಲಯದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದಲ್ಲಿ 5 ವರ್ಷಗಳು ಕೆಲಸ ಮಾಡಿರುವ ಅನುಭವ ಹೊಂದಿರಬೇಕು. ವ್ಯವಸ್ಥಾಪಕರು – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು ಮತ್ತು ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಜ್ಞಾನ ಹೊಂದಿರಬೇಕು. ಅಕೌಂಟೆಂಟ್, ಅಸಿಸ್ಟೆಂಟ್ ಅಕೌಂಟೆಂಟ್ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಾಣಿಜ್ಯ/ಸಹಕಾರ/ಮ್ಯಾನೇಜ್ಮೆಂಟ್ ವಿಷಯಗಳಲ್ಲಿ ಪದವಿ ಪಡೆದಿರಬೇಕು ಹಾಗೂ ಟ್ಯಾಲಿ ಕೋರ್ಸ್ ತೇರ್ಗಡೆಯಾದ ಪ್ರಮಾಣ ಪತ್ರದ ಜೊತೆಗೆ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಜ್ಞಾನ ಹೊಂದಿರಬೇಕು. ದ್ವಿತೀಯ ದರ್ಜೆ ಸಹಾಯಕರು – ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿರಬೇಕು ಮತ್ತು ಕಂಪ್ಯೂಟರಿನಲ್ಲಿ ಸೂಕ್ತ ಅರಿವಿರಬೇಕು. ಅಟೆಂಡರ್ – ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿರಬೇಕು ಮತ್ತು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. |
ವಯೋಮಿತಿ:
ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ
ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ,
ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ,
ಪ.ಜಾತಿ, ಪ.ಪಂ, ಇತರೆ ಹಿಂದುಳಿದ ವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅರ್ಹ ಅಭ್ಯರ್ಥಿಗಳು ರೂ. 1,000 ಹಾಗೂ ಪ.ಜಾತಿ, ಪ.ಪಂ., ಹಿಂದುಳಿದ ವರ್ಗ – 01ರ ಅಭ್ಯರ್ಥಿಗಳು ರೂ. 500 ಪಾವತಿಸಬೇಕು.
(ಅರ್ಜಿ ಶುಲ್ಕವನ್ನು ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತ ಇವರ ಹೆಸರಿಗೆ ಡಿಡಿ/ಪೇ ಆರ್ಡರ್/ಪೋಸ್ಟಲ್ ಆರ್ಡರ್ ಮೂಲಕ ಪಾವತಿಸಬೇಕು.)
ಅರ್ಜಿ ಸಲ್ಲಿಸುವ ವಿಳಾಸ :
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿ., ನಂ. 30, 15ನೇ ಕ್ರಾಸ್, 3ನೇ ಬ್ಲಾಕ್,
ಜಯನಗರ, ಬೆಂಗಳೂರು – 560 011
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | ಮೇ 25, 2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಜೂನ್ 15, 2022 |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |