ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಖಾಲಿ ಇರುವ 1679 ನುರಿತ / ಅರೆ ನುರಿತ /ಕೌಶಲ್ಯರಹಿತ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಏಪ್ರಿಲ್ 01, 2021 ರಂದು ಪ್ರಾರಂಭಗೊಂಡು ಮತ್ತು ಏಪ್ರಿಲ್ 20, 2021ಕ್ಕೆ ಕೊನೆಗೊಳ್ಳುತ್ತದೆ.
ಹುದ್ದೆಗಳ ವಿವರ:
ನುರಿತ / ಅರೆನುರಿತ / ಕೌಶಲ್ಯರಹಿತ- 1679 ಹುದ್ದೆಗಳು
ಒಟ್ಟು ಹುದ್ದೆಗಳು: 1679
ಆಯ್ಕೆ ವಿಧಾನ:
ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನುಅರ್ಹತಾ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ವಿದ್ಯಾರ್ಹತೆ:
ಹುದ್ದೆಗೆ ಅನುಗುಣವಾಗಿ 8th, 10th, 12th Class, DCA, PGDCA, & ITI (Electrical Trade/ Wireman) ನಲ್ಲಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಕೆಲಸದ ಅನುಭವವನ್ನು ಹೊಂದಿರಬೇಕು.
ವಿದ್ಯಾರ್ಹತೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ
ಅರ್ಜಿ ಶುಲ್ಕ:
ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು- 590/- ರೂ ಗಳು ಮತ್ತು ಪ.ಜಾ ಮತ್ತು ಪ.ಪಂ ದ ಅಭ್ಯರ್ಥಿಗಳು- 295 /- ರೂ ಗಳ ಅರ್ಜಿ ಶುಲ್ಕವನ್ನು ತುಂಬಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 1 ಎಪ್ರಿಲ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಎಪ್ರಿಲ್ 2021