ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ । BECIL Recruitment 2022

ಬ್ರಾಡ್‌ಕಾಸ್ಟ್‌ ಇಂಜಿನಿಯರಿಂಗ್ ಕನ್ಸಲ್‌ಟಂಟ್‌ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆ 2022

BECIL Recruitment 2022: ಬ್ರಾಡ್‌ಕಾಸ್ಟ್‌ ಇಂಜಿನಿಯರಿಂಗ್ ಕನ್ಸಲ್‌ಟಂಟ್‌ ಇಂಡಿಯಾ ಲಿಮಿಟೆಡ್ ಕೇಂದ್ರ ಸರ್ಕಾರದ ಒಂದು ಮಿನಿರತ್ನ ಕಂಪನಿ ಆಗಿದೆ. ಪ್ರಸ್ತುತ ಮಿನಿಸ್ಟ್ರಿ ಆಫ್‌ ಆಯುಷ್‌ನಲ್ಲಿ ಭರ್ತಿ ಮಾಡಲು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು:ಬ್ರಾಡ್‌ಕಾಸ್ಟ್‌ ಇಂಜಿನಿಯರಿಂಗ್ ಕನ್ಸಲ್‌ಟಂಟ್‌ ಇಂಡಿಯಾ ಲಿಮಿಟೆಡ್
ಹುದ್ದೆಗಳ ಹೆಸರು:ಡಾಟಾ ಎಂಟ್ರಿ ಆಪರೇಟರ್
ಒಟ್ಟು ಹುದ್ದೆಗಳು 86
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ 

 

ವಿದ್ಯಾರ್ಹತೆ:
ಅಂಗೀಕೃತ ವಿವಿಗಳಿಂದ ಯಾವುದೇ ಪದವಿ ಪಾಸ್ ಮಾಡಿರಬೇಕು. ಅಭ್ಯರ್ಥಿಗಳು ಟೈಪಿಂಗ್ ಅರಿವು ತಿಳಿದಿರಬೇಕು. ಒಂದು ನಿಮಿಷಕ್ಕೆ 35 ಪದಗಳನ್ನು ಟೈಪಿಸಬೇಕು. ಎಂಎಸ್ ವರ್ಲ್ಡ್‌, ಪವರ್‌ಪಾಯಿಂಟ್ ಮತ್ತು ಎಕ್ಸೆಲ್‌ ಜ್ಞಾನ ಇರಬೇಕು.

ವೇತನಶ್ರೇಣಿ:
ಬ್ರಾಡ್‌ಕಾಸ್ಟ್‌ ಇಂಜಿನಿಯರಿಂಗ್ ಕನ್ಸಲ್‌ಟಂಟ್‌ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.21,184/- ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.750.
ಒಬಿಸಿ ಅಭ್ಯರ್ಥಿಗಳಿಗೆ ರೂ.750.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ರೂ.450.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.750.
ಮಹಿಳಾ ಅಭ್ಯರ್ಥಿಗಳಿಗೆ ರೂ.750.
ಇ ಡಬ್ಲ್ಯೂ ಎಸ್ /ವಿಕಲಚೇತನ ಅಭ್ಯರ್ಥಿಗಳಿಗೆ ರೂ.450.

ಆಯ್ಕೆ ವಿಧಾನ 
ಬ್ರಾಡ್‌ಕಾಸ್ಟ್‌ ಇಂಜಿನಿಯರಿಂಗ್ ಕನ್ಸಲ್‌ಟಂಟ್‌ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅರ್ಹತೆಯುಳ್ಳವರನ್ನು ಟೈಪಿಂಗ್ ಟೆಸ್ಟ್‌ಗೆ ಆಹ್ವಾನಿಸಲಾಗುತ್ತದೆ. ಕಂಪ್ಯೂಟರ್ / ಲಿಖಿತ ಪರೀಕ್ಷೆಯನ್ನು ಸಹ ಜೆನೆರಲ್ ಅವಾರ್ನೆಸ್, ಪ್ರಚಲಿತ ವಿದ್ಯಮಾನಗಳ ಕುರಿತು, ಇಂಗ್ಲಿಷ್ ವ್ಯಾಕರಣ ಕುರಿತು ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಆಧಾರ್ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಸ್ಕ್ಯಾನ್‌ ಮಾಡಿದ ಭಾವಚಿತ್ರ, ಸ್ಕ್ಯಾನ್‌ ಮಾಡಿದ ಸಹಿ ದಾಖಲೆ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 07-05-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-05-2022
  
ಪ್ರಮುಖ ಲಿಂಕುಗಳು 
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
close button