ಹಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ: ಈಗಲೇ ಅರ್ಜಿ ಸಲ್ಲಿಸಿ

 

 ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್, ಒಂದು ನವರತ್ನ ಕಂಪನಿ ಮತ್ತು ಭಾರತದ ಪ್ರಮುಖ ರಕ್ಷಣಾ ಎಲೆಕ್ಟ್ರಾನಿಕ್ಸ್‌ ಕಂಪನಿ. ಪ್ರಸ್ತುತ ವಿವಿಧ ಹುದ್ದೆಗಳ ಭರ್ತಿಗೆ ಬಿಇಎಲ್ ನೇಮಕ ಪ್ರಕಟಣೆ ಹೊರಡಿಸಿದೆ.

ಈ ಕಂಪನಿಗೆ ಭಾರತಾದ್ಯಂತ ಗ್ರಾಹಕ ಸ್ಥಳಗಳಲ್ಲಿ ನಿಯೋಜಿಸುವುದಕ್ಕಾಗಿ 5 ವರ್ಷಗಳ ನಿಗದಿತ ಅವಧಿಯ ಆಧಾರದ ಮೇಲೆ ಹಿರಿಯ ಸಹಾಯಕ ಇಂಜಿನಿಯರ್ ಹುದ್ದೆಗೆ ನೌಕಾ ಪಡೆ / ವಾಯು ಸೇನೆ / ಭೂಸೇನೆ / ಕರಾವಳಿ ರಕ್ಷಕ ದಳದಿಂದ ನಿವೃತ್ತಿ ಹೊಂದಿದ ಮಾಜಿ ಸೈನಿಕರು / ಸದ್ಯದಲ್ಲಿ ಸೇವೆಯಿಂದ ನಿವೃತ್ತಿ ಹೊಂದುವಂತಹ ಅಧಿಕಾರಿಗಳ ಅವಶ್ಯಕತೆ ಇದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಹುದ್ದೆಯ ಹೆಸರು: ಹಿರಿಯ ಸಹಾಯಕ ಇಂಜಿನಿಯರ್ / ಇ-1 / ಸಿಎಸ್‌ಎಸ್‌ / ಎನ್‌ಎಸ್‌ (ಆರ್‌ ಮತ್ತು ಎಫ್‌ಸಿಎಸ್)
ಹುದ್ದೆಗಳು: 19
ವೇತನ ಶ್ರೇಣಿ: ರೂ.30000-3%-120000

 

 

ಹುದ್ದೆಯ ಹೆಸರು: ಹಿರಿಯ ಸಹಾಯಕ ಇಂಜಿನಿಯರ್ / ಇ-1/ ಡಬ್ಲ್ಯೂ ಎಫ್‌ ಎಸ್‌ / ಪಿ ಎಸ್
ಹುದ್ದೆಗಳು: 01

ವೇತನ ಶ್ರೇಣಿ: ರೂ.30000-3%-120000

ಇತರೆ ಹೆಚ್ಚಿನ ವಿವರಗಳಿಗಾಗಿ ಆಸಕ್ತ ಅಭ್ಯರ್ಥಿಗಳು ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಅಧಿಕೃತ ವೆಬ್‌ಸೈಟ್‌ www.bel-india.in ಗೆ ಭೇಟಿ ನೀಡಲು ಸೂಚಿಸಲಾಗಿದೆ. ಅಭ್ಯರ್ಥಿಗಳು ಕಂಪ್ಲೀಟ್ ನೋಟಿಫಿಕೇಶನ್‌, ವರ್ಗಾವಾರು ಅರ್ಜಿ ಸಲ್ಲಿಕೆಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ.

ಒಂದಕ್ಕಿಂತ ಹೆಚ್ಚು ಹುದ್ದೆಗಾಗಿ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಪ್ರತಿಯೊಂದು ಹುದ್ದೆಗೂ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

 

 

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: ಡಿಸೆಂಬರ್ 15, 2021

Website 
Notification PDF
Application Form – 1
Application Form – 2
error: Content is protected !!