ಪರಿಶಿಷ್ಟ ಜಾತಿ ಉಪ ಯೋಜನೆ (SCSP) ಮತ್ತು ಪಂಗಡ ಉಪ ಯೋಜನೆ (TSP) ಅಡಿಯಲ್ಲಿ ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ ಉಚಿತ ಲಘು ಮತ್ತು ಭಾರೀ ವಾಹನ ಚಾಲನಾ ತರಬೇತಿ ನೀಡಲು ಬಿಎಂಟಿಸಿ ಅಧಿಸೂಚನೆಯನ್ನು ಹೊರಡಿಸಿದೆ. ತರಬೇತಿಯ ನಂತರ, ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಚಾಲನಾ ಪರವಾನಗಿ/ಬ್ಯಾಡ್ಜ್ ನೀಡಲಾಗುತ್ತದೆ.
ಈ ತರಬೇತಿಗೆ ಒಳಗಾಗಲು ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಸಲ್ಲಿಸಬೇಕಾದ ಕನಿಷ್ಠ ವಿದ್ಯಾರ್ಹತೆ/ದಾಖಲೆಗಳ ವಿವರಗಳನ್ನು ಕೆಳಗೆ ನೀಡಲಾಗಿದೆ.
ಲಘು ವಾಹನ ಚಾಲನಾ ತರಬೇತಿಗೆ ಅರ್ಹತೆ (ಕಾರ್/ಜೀಪ್)
** ಕನಿಷ್ಠ 18 ವರ್ಷಗಳು. ಗರಿಷ್ಠ 45 ವರ್ಷಗಳನ್ನು ಮೀರಬಾರದು.
** ಜನನ ಪ್ರಮಾಣಪತ್ರ ಅಥವಾ SSLC ಅಂಕಪಟ್ಟಿ ಅಥವಾ ಶಾಲಾ ವರ್ಗಾವಣೆ ಪ್ರಮಾಣಪತ್ರ ಅಥವಾ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ನೋಟರಿ ಪ್ರಮಾಣಪತ್ರ.
**ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ.
**ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ-5
ಹೆವಿ ವೆಹಿಕಲ್ ಡ್ರೈವಿಂಗ್ ತರಬೇತಿಗೆ ಅರ್ಹತೆ (ಬಸ್)
**ಕನಿಷ್ಠ 20 ವರ್ಷಗಳು. ಗರಿಷ್ಠ 45 ವರ್ಷಗಳನ್ನು ಮೀರಬಾರದು.
** ಲಘು ವಾಹನ ಚಾಲನಾ ಪರವಾನಗಿ ಪಡೆದು ಒಂದು ವರ್ಷ ಪೂರೈಸಿರಬೇಕು.
**ಜನನ ಪ್ರಮಾಣಪತ್ರ ಅಥವಾ ಎಸೆಸೆಲ್ಸಿ ಅಂಕಪಟ್ಟಿ ಅಥವಾ ಶಾಲಾ ವರ್ಗಾವಣೆ ಪ್ರಮಾಣಪತ್ರ ಅಥವಾ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ನೋಟರಿ ಪ್ರಮಾಣಪತ್ರ.
** ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ.
*ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ-5
ಅಭ್ಯರ್ಥಿಗಳು 30 ದಿನಗಳ ಕಾಲ ಲಘು/ಭಾರೀ ವಾಹನ ಚಾಲನಾ ತರಬೇತಿಯನ್ನು ಹೊಂದಿರುತ್ತಾರೆ. ತರಬೇತಿ ಅವಧಿಯಲ್ಲಿ ಉಚಿತ ವಸತಿ ಮತ್ತು ಊಟವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಮೇಲೆ ತಿಳಿಸಿದ ವಿದ್ಯಾರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ 02 ಸೆಟ್‌ಗಳ ಜೆರಾಕ್ಸ್ ಪ್ರತಿಗಳನ್ನು ‘ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ತರಬೇತಿ ಕೊಠಡಿ, 2 ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ, ಬೆಂಗಳೂರು – 560027’ ಗೆ ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2022