ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಬೆಂಗಳೂರು ಮಹಾನಗರ ಸಾರಿಗೆ BMTC ಯಲ್ಲಿ 500 ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ

 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯಲ್ಲಿ ಖಾಲಿ ಇರುವ ಒಟ್ಟು 500 ಮೆಕ್ಯಾನಿಕ್ ಡೀಸೆಲ್ ಅಪ್ಪ್ರೆಂಟಿಸ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ದಿನಾಂಕ: 18-11-2021 ರಿಂದ 30-11-2021ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.

ಒಟ್ಟು ಹುದ್ದೆಗಳು: 500
ಉದ್ಯೋಗ ಸ್ಥಳ: ಬೆಂಗಳೂರು

ವಿದ್ಯಾರ್ಹತೆ:
ಮೆಕ್ಯಾನಿಕ್ ಡೀಸೆಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ದಿಂದ SSLC / 10ನೇ ತರಗತಿ ವಿದ್ಯಾರ್ಹತೆಯನ್ನು ಪಡೆದಿರಬೇಕು.

ವೇತನ ಶ್ರೇಣಿ:
ಮೆಕ್ಯಾನಿಕ್ ಡೀಸೆಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳಿಗೆ 8,000/-ರೂ ದಿಂದ 9,000/-ರೂಗಳ ಸ್ಟೈಫೆಂಡ್ ಅನ್ನು ಪಡೆಯುವರು.

 

 

ಆಯ್ಕೆ ವಿಧಾನ:
ಮೆಕ್ಯಾನಿಕ್ ಡೀಸೆಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಿ ನಂತರ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18 ನವೆಂಬರ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ನವೆಂಬರ್ 2021

Notification / Website / Apply LInk
close button