ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವ 511 ವಿವಿಧ ಹುದ್ದೆಗಳ ಭರ್ತಿ

Telegram Group

 

ಉದ್ಯೋಗ ಸುದ್ದಿ 

ಭಾರತೀಯ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವ 511 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಏಪ್ರಿಲ್ 09 2021 ಪ್ರಾರಂಭಗೊಂಡು ಮತ್ತು ಏಪ್ರಿಲ್ 29 2021 ರಂದು ಕೊನೆಗೊಳ್ಳುತ್ತದೆ.

* ಖಾಲಿ ಹುದ್ದೆಗಳ ವಿವರ:

– ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್- 407 ಹುದ್ದೆಗಳು

– ಇ- ವೆಲ್ತ್ ರಿಲೇಶನ್‌ಶಿಪ್ ಮ್ಯಾನೇಜರ್- 50 ಹುದ್ದೆಗಳು

– ಪ್ರಾಂತ್ಯದ ಮುಖ್ಯಸ್ಥ- 44 ಹುದ್ದೆಗಳು

– ಗುಂಪು ಮುಖ್ಯಸ್ಥ- 06 ಹುದ್ದೆಗಳು

– ಉತ್ಪನ್ನ ಮುಖ್ಯಸ್ಥ (ಹೂಡಿಕೆ ಮತ್ತು ಸಂಶೋಧನೆ) – 01 ಹುದ್ದೆ

– ಮುಖ್ಯಸ್ಥ (ಕಾರ್ಯಾಚರಣೆ ಮತ್ತು ತಂತ್ರಜ್ಞಾನ) – 01 ಹುದ್ದೆ

– ಡಿಜಿಟಲ್ ಸೇಲ್ಸ್ ಮ್ಯಾನೇಜರ್- 01 ಹುದ್ದೆ

– ಐಟಿ ಕ್ರಿಯಾತ್ಮಕ ವಿಶ್ಲೇಷಕ – ವ್ಯವಸ್ಥಾಪಕ- 01 ಹುದ್ದೆ


ಒಟ್ಟು ಹುದ್ದೆಗಳು: 511

ಉದ್ಯೋಗ ಸ್ಥಳ: ಭಾರತದಾದ್ಯಂತ

ವಿದ್ಯಾರ್ಹತೆ:
ಹುದ್ದೆಗೆ ಅನುಗುಣವಾಗಿ ಯಾವುದೇ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಮತ್ತು ಆಯಾ ಹುದ್ದೆಗಳ ಅನುಸಾರವಾಗಿ 2 ರಿಂದ 10 ವರ್ಷಗಳಷ್ಟು ಕೆಲಸದ ಅನುಭವವನ್ನು ಹೊಂದಿರಬೇಕು.

ವಯೋಮಿತಿ:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ದಿನಾಂಕ 01-04-2021 ಅನ್ವಯಿಸುವಂತೆ ಕನಿಷ್ಠ- 23 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ – 45 ವರ್ಷಗಳ ವಯೋಮಿತಿಯೊಳಗಿನವರಾಗಿರಬೇಕು.

ಅರ್ಜಿ ಶುಲ್ಕ:
ಹುದ್ದೆಗೆ ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು- 600/- ರೂ ಗಳ ಮತ್ತು
ಪ.ಜಾ ಮತ್ತು ಪ.ಪಂ ದ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳು- 100/- ಗಳ ಅರ್ಜಿ ಶುಲ್ಕವನ್ನು ತುಂಬಬೇಕು.

ಆಯ್ಕೆ ವಿಧಾನ:
ಹುದ್ದೆಗೆ ಅಭ್ಯರ್ಥಿಗಳನ್ನುಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ, ಅಭ್ಯರ್ಥಿಯ ಸಂದರ್ಶನ ಅಥವಾ ಗುಂಪು ಚರ್ಚೆ ಮೂಲಕ ಆಯ್ಕೆ ಮಾಡಲಾಗುವುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 9 ಎಪ್ರಿಲ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಎಪ್ರಿಲ್ 2021

Notification – 1

Notification – 2

Telegram Group
error: Content is protected !!