ಪಡಿತರ ಚೀಟಿಗಾಗಿ ಕಾದಿದ್ದವರಿಗೆ ಖುಷಿ ಸುದ್ದಿ
ಬೆಂಗಳೂರು: ರೇಷನ್ ಕಾರ್ಡ್ ಗೆ ಹೊಸದಾಗಿ ಅರ್ಜಿ ಸಲ್ಲಿಸಿದವರು, ಕಳೆದ ಸಾಕಷ್ಟು ವರ್ಷಗಳಿಂದ ಸರಬರಾಜುಯಾಗದೆ ಉಳಿದಿದ್ದ ಇದ್ದ ಲಕ್ಷಗಟ್ಟಲೆ ಮಂದಿಗೆ ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೇಷನ್ ಕಾರ್ಡ್ ಗಳನ್ನೂ ಮಂಜೂರು ಮಾಡಿದೆ.
ರೇಷನ್ ಕಾರ್ಡ್ಎ ಪಡೆಯಲು ಅರ್ಹತೆ ಇಲ್ಲದೆ ಇದ್ದರು ಪಿಎಲ್ ಕಾರ್ಡ್‌ಗಳನ್ನು ಪಡೆದು ಇಲಾಖೆಗೆ ಮೋಸ ಮಾಡುತ್ತಿದ್ದರು. ಸಾಕಷ್ಟು ಅನಧಿಕೃತವಾಗಿ ರೇಷನ್ ಕಾರ್ಡ್ ಹೊಂದಿದ್ದು, ಪಡೆದ ರೇಷನ್ ಮಾರಿಕೊಳ್ಳುತ್ತಾ, ಅರ್ಹತೆ ಇರುವವರ ಬಾಯಿಗೆ ಮಣ್ಣು ಹಾಕುತ್ತಿದ್ದರು. ಹೀಗಾಗಿ ಎಪಿಎಲ್ ಕಾರ್ಡ್ ಹಿಂಪಡೆದು, ಬಿಪಿಎಲ್ ಪಟ್ಟಿಗೆ ಸೇರಿಸುವುದು, ಅರ್ಹರಲ್ಲದಿದ್ದರೂ ಯಾರದೋ ಹೆಸರನ್ನು ಪಟ್ಟಿಗೆ ಸೇರಿಸುವುದು ಸೇರಿದಂತೆ ಹಲವು ಅಕ್ರಮಗಳು ನಡೆಯುತ್ತಿದ್ದವು. ಹೀಗಾಗಿ ಅವುಗಳನ್ನು ತಡೆದು, ಅನರ್ಹ ರೇಷನ್ ಕಾರ್ಡ್ ರದ್ದುಗೊಳಿಸಲು ಇಲಾಖೆಯು ಹೊಸದಾಗಿ ಸಲ್ಲಿಸಿದ ಅರ್ಜಿಗಳ ವಿಲೇವಾರಿಯನ್ನು 2017ರಿಂದ ತಡೆಹಿಡಿದಿತ್ತು. ಆದರೆ 2019-2020ರ ವೇಳೆಗೆ ಕೋವಿಡ್ ಹಿನ್ನೆಲೆಯಲ್ಲಿ ಮತ್ತಷ್ಟು ವಿಳಂಬವಾಯಿತು. ತೀರಾ ಅಗತ್ಯವುಳ್ಳ ಅರ್ಜಿಗಳ ವಿಲೇವಾರಿಗೆ ಮಾತ್ರ ಅವಕಾಶ ಕೊಡಲಾಗಿತ್ತು. ಆದ್ದರಿಂದ 2017ರಿಂದ 2021ರವರೆಗೆ ಬಂದ 3.93 ಲಕ್ಷ ಅರ್ಜಿಗಳು ಬಾಕಿ ಇದ್ದವು. ಇವುಗಳ ಕುರಿತು ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಅರ್ಹ ಅರ್ಜಿದಾರರಿಗೆ ಬಿಪಿಎಲ್ ಹಾಗೂ ಇತರರಿಗೆ ಎಪಿಎಲ್ ಕಾರ್ಡ್ ನೀಡಲು ಆಹಾರ ಇಲಾಖೆ ನಿರ್ಧರಿಸಿದೆ.
ರೇಷನ್ ಕಾರ್ಡ್ ಎಲ್ಲಿ ಪಡೆಯುವುದು?
ತಾಲೂಕು ಕಚೇರಿಗಳಲ್ಲಿರುವ ಆಹಾರ ಇಲಾಖೆ ಶಾಖೆ ಅಥವಾ ಆಯಾ ಕ್ಷೇತ್ರದ ಆಹಾರ ಇಲಾಖೆಯ ಉಪ ಕಚೇರಿಗಳಲ್ಲಿ ಸ್ವೀಕೃತಿ ಪತ್ರದೊಂದಿಗೆ ಹೊಸ ಕಾರ್ಡ್‌ಗಳನ್ನು ಪಡೆಯಬಹುದು.
ಹೊಸ ರೇಷನ್ ಕಾರ್ಡ್/ತಿದ್ದುಪಡಿ
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹಾಗೂ ಕಾರ್ಡ್‌ನಲ್ಲಿ ಮಕ್ಕಳು ಅಥವಾ ಇತರೆ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೀಗ ಕಲ್ಪಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಹಾಗೂ ಅರ್ಜಿದಾರರ ಕುಟುಂಬಗಳ ಪರಿಶೀಲನೆ ಹಿನ್ನೆಲೆಯಲ್ಲಿ ಆನ್‌ಲೈನ್ ಪೋರ್ಟಲ್ ಅನ್ನು ಸದ್ಯಕ್ಕೆ ಮಾತ್ರ ಸ್ಥಗಿತಗೊಳಿಸಲಾಗಿತ್ತು. ಈಗ ಮನೆಯ ಸದಸ್ಯರ ಹೆಸರು ಸೇರ್ಪಡೆ ಮಾಡುವುದು, ತಿದ್ದುಪಡಿ ಅಥವಾ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಪೋರ್ಟಲ್‌ನ ವ್ಯವಸ್ಥೆ ಕಲ್ಪಿಸಲಾಗಿದೆ.
ಇದೀಗ ಬಾಕಿ ಉಳಿದಿದ್ದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ 1.55 ಲಕ್ಷ ಅರ್ಜಿದಾರರಿಗೆ ಎಪಿಎಲ್ ಕಾರ್ಡ್ ಮತ್ತು 2.76 ಲಕ್ಷ ಅರ್ಜಿದಾರರಿಗೆ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲು ಕಳೆದ ತಿಂಗಳು ಮಂಜೂರಾತಿ ನೀಡಿದೆ. ಹೀಗಾಗಿ ಅರ್ಜಿ ಸಲ್ಲಿಸಿ ಕಾರ್ಡ್‌ಗಾಗಿ ಕಾಯುತ್ತಿರುವವವರಿಗೆ ಅವರ ಅರ್ಹತೆ ಆಧಾರದಲ್ಲಿ ಎಪಿಎಲ್/ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸ ರೇಷನ್ ಕಾರ್ಡ್ ಗೆ ಬೇಕಾದ ಮೂಲ ದಾಖಲೆಗಳು
- ಆಧಾರ್ ಕಾರ್ಡ್ ಮತ್ತು ಮನೆಯಲ್ಲಿಹಿರಿಯ ಮಹಿಳೆಯ ಕಾಸ್ಟ್ ಮತ್ತು ಇನ್ಕಮ್ ಪ್ರಮಾಣ ಪತ್ರ ಕಡ್ಡಾಯವಾಗಿ ಲಗತ್ತಿಸುವುದು.
- ರೇಷನ್ ಕಾರ್ಡ್‌ನಲ್ಲಿ ಹೆಸರು ಸೇರಿಸಬೇಕಾದರೆ ಆಧಾರ್ ನಂಬರ್ ಜತೆಗೆ ಜಾತಿ ಮತ್ತು ಆದಾಯ ಪತ್ರ ಕಡ್ಡಾಯವಾಗಿ ಇರತಕ್ಕದ್ದು. ಇದರಲ್ಲಿ 6 ವರ್ಷದ ಒಳಗಿನ ಮಕ್ಕಳನ್ನು ಸೇರ್ಪಡೆ ಮಾಡಬೇಕಾದರೆ ದೂರವಾಣಿ ಸಂಖ್ಯೆ ಲಿಂಕ್ ಆಗಿರುವ ಆಧಾರ್ ಸಂಖ್ಯೆ ಜೊತೆ ಜನನ ಪ್ರಮಾಣ ಪತ್ರ ಕಡ್ಡಾಯ.
- ಬೆಂಗಳೂರು ಒನ್ ಅಥವಾ ಸೈಬರ್ ಸೆಂಟರ್‌ಗಳಲ್ಲಿ ಹೊಸ ಕಾರ್ಡ್ ಮತ್ತು ಸೇರ್ಪಡೆ ಮಾಡುವ ಸೌಲಭ್ಯ ಕೂಡ ಇರುವಂತದ್ದು. ಇಲ್ಲವೇ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ವಯಂ ಆಗಿ ಕೂಡ ಅರ್ಜಿಗಳನ್ನು ಸಲ್ಲಿಸಬಹುದು. ಎಪಿಎಲ್ ಕಾರ್ಡ್ ಪಡೆಯುವವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಹಾಗೆಯೇ ಕಾರ್ಡ್ ಪಡೆಯಬಹುದು.