ದೇಶದಲ್ಲಿ2021 ರ ಬಜೆಟ್ ಮಂಡನೆಯಾಗಿದ್ದು ಮೊದಲಬಾರಿಗೆ ಪೇಪರ್ ಇಲ್ಲದೆ ಬಜೆಟ್ ಮಂಡಿಸಿದ್ದು ವಿಶೇಷ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವ್ರು ಬಜೆಟ್ ಮಂಡಿಸಿದರು.
ಇದೇ ವೇಳೆ ಅವರು ಮಾತನಾಡಿ, ಉಜ್ವಲ ಯೋಜನೆ ಯನ್ನು 1 ಕೋಟಿ ಹೆಚ್ಚು ಫಲಾನುಭವಿಗಳಿಗೆ ವಿಸ್ತರಿಸಲಾಗುವುದು. ಮುಂದಿನ 3 ವರ್ಷಗಳಲ್ಲಿ 100 ಹೆಚ್ಚು ಜಿಲ್ಲೆಗಳನ್ನು ನಗರ ಅನಿಲ ವಿತರಣೆಗಾಗಿ ಸೇರಿಸಲಿದೆ ಅಂತ ತಿಳಿಸಿದರು. ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ)ಯಡಿ ಕೇಂದ್ರ ಸರಕಾರವು ಉಚಿತ ಸಿಲಿಂಡರ್ ನೀಡುತ್ತಿದೆ.
ಅರ್ಜಿ ಸಲ್ಲಿಕೆ ಹೇಗೆ?
ಉಜ್ವಲ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದು ಸುಲಭವಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಯಾವುದೇ ಕುಟುಂಬದ ಮಹಿಳೆ ಉಜ್ವಲ ಯೋಜನೆ ಫಲಾನುಭವಿಗಳಾಗಲು ಅರ್ಹರು.
ಈ ಗ್ಯಾಸ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆಗೆ ಸಂಬಂಧಿಸಿದ ಅಧಿಕೃತ ವೆಬ್ ಸೈಟ್ pmujjwalayojana.com ಭೇಟಿ ನೀಡಿ ನೋಂದಾಯಿಸಿಕೊಳ್ಳ ಬೇಕು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26 ಫೆಬ್ರವರಿ 2021 ಆಗಿರುತ್ತದೆ.
ಉದ್ಯೋಗ ಸ್ಥಳ: ಚಿತ್ರದುರ್ಗ ಜಿಲ್ಲೆ
ಒಟ್ಟು ಹುದ್ದೆಗಳು: 129
ಅಂಗನವಾಡಿ ಕಾರ್ಯಕರ್ತೆ – 19
ಅಂಗನವಾಡಿ ಸಹಾಯಕಿ – 110
ವಿದ್ಯಾರ್ಹತೆ
ಅಂಗನವಾಡಿ ಸಹಾಯಕಿ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 4ನೇ ತರಗತಿ ತೇರ್ಗಡೆಯಾಗಿದ್ದು, ಗರಿಷ್ಠ 9ನೇ ತರಗತಿ ತೇರ್ಗಡೆಯಾಗಿರಬೇಕು. ಇದರಲ್ಲಿ ಹೆಚ್ಚಿನ ವಿದ್ಯಾರ್ಹತೆಯುಳ್ಳವರನ್ನು ಆಯ್ಕೆ ಮಾಡಲಾಗುತ್ತದೆ.( 9ನೇ ತರಗತಿಗಿಂತ ಹೆಚ್ಚಿನ ವಿದ್ಯಾರ್ಹತೆಯನ್ನು ಪರಿಗಣಿಸುವುದಿಲ್ಲ)
ಅಂಗನವಾಡಿ ಕಾರ್ಯಕರ್ತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು.
ವಯೋಮಿತಿ: ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 18 ರಿಂದ 35 ವರ್ಷ ವಯೋಮಿತಿಯ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಆಯ್ಕೆ ವಿಧಾನ: ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿಯಿರುವ / ಹೊಸ ಕೇಂದ್ರ ಪ್ರಾರಂಭಿಸುತ್ತಿರುವ ಗ್ರಾಮದಲ್ಲಿ ವಾಸಿಸುತ್ತಿರುವ ಸಹಾಯಕಿಯರಿದ್ದು, ಅವರು ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿದ್ದು, ಕನಿಷ್ಠ 3 ವರ್ಷ ಸೇವೆ ಸಲ್ಲಿಸಿದ್ದು, 45 ವರ್ಷ ವಯೋಮಿತಿಯೊಳಗಿದ್ದು, ಆ ಅಂಗನವಾಡಿ ಕೇಂದ್ರದಿಂದ 3 ಕಿ.ಮೀ. ವ್ಯಾಪ್ತಿಯೊಳಗೆ ವಾಸಿಸುತ್ತಿದ್ದು, ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಆ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಹುದ್ದೆಗೆ ಬೇರೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಪ್ರಮೇಯವಿರುವುದಿಲ್ಲ. ಸದರಿ ಸಹಾಯಕಿಯನ್ನೇ ಕಾರ್ಯಕರ್ತೆ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 27 ಜನವರಿ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 26 ಫೆಬ್ರವರಿ 2021
ವೆಬ್ಸೈಟ್ |
ನೋಟಿಫಿಕೇಶನ್ |
10th pass jobs, Degree jobs, latest job news Karnataka, ITI Jobs, KPSC, Railway jobs,