1312 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ 2022

1312 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ

BSF Recruitment 2022: ಗಡಿ ಭದ್ರತಾ ಪಡಿಯಲ್ಲಿ ಖಾಲಿ ಇರುವ 1312 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು: ಗಡಿ ಭದ್ರತಾ ಪಡಿ
ಹುದ್ದೆಗಳ ಹೆಸರು: ಹೆಡ್ ಕಾನ್ಸ್ಟೇಬಲ್ 
ಒಟ್ಟು ಹುದ್ದೆಗಳು  1312
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ 
ಹುದ್ದೆಗಳ ವಿವರ  ಹುದ್ದೆಗಳ ಸಂಖ್ಯೆ 
ಹೆಡ್ ಕಾನ್ಸ್ಟೇಬಲ್ (ರೇಡಿಯೋ ಆಪರೇಟರ್) 982
ಹೆಡ್ ಕಾನ್ಸ್ಟೇಬಲ್ (ರೇಡಿಯೋ ಮೆಕ್ಯಾನಿಕ್) 330

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು 10 ನೇ ತರಗತಿ, PUC ಮತ್ತು ITI ಪಾಸಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:
ಅರ್ಜಿಯನ್ನು ಸಲ್ಲಿಸ ಬಯಸುವ ಅಭ್ಯರ್ಥಿಗಳು 19-09-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25 ವರ್ಷಗಳನ್ನು ಹೊಂದಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ನೇಮಕಾತಿ ನಿಯಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ

ವೇತನಶ್ರೇಣಿ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ತಿಂಗಳಿಗೆ 25500/-ರಿಂದ81100/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ.

ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

  • ಮೊದಲನೆಯದಾಗಿ ಬಿಎಸೆಫ್ ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
  • ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
  • ಬಿಎಸೆಫ್ ಹೆಡ್ ಕಾನ್‌ಸ್ಟೆಬಲ್ ಆನ್‌ಲೈನ್‌ನಲ್ಲಿ ಅನ್ವಯಿಸು – ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಬಿಎಸೆಫ್ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
  • ಬಿಎಸೆಫ್ ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಕ್ಯಾಪ್ಚರ್ ಮಾಡಿ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  20-08-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  19-09-2022
   
ಪ್ರಮುಖ ಲಿಂಕುಗಳು 
ವೆಬ್ಸೈಟ್  ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 

error: Content is protected !!