ಹೊಸ ನೇಮಕಾತಿ ಅಧಿಸೂಚನೆ 2022
Cantonment Board Recruitment 2022 – ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಟೋನ್ಮೆಂಟ್ ಬೋರ್ಡ್, ಕರ್ನಾಟಕದ ಬೆಳಗಾಂ ಘಟಕ ಸೇರಿದಂತೆ ದೇಶದ ವಿವಿಧ ಘಟಕಗಳಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಎಂಪ್ಲಾಯ್‌ಮೆಂಟ್ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ರಕ್ಷಣಾ ಸಚಿವಾಲಯ (Cantonment Board) |
ಹುದ್ದೆಗಳ ಹೆಸರು: | ಜೂನಿಯರ್ ಕ್ಲರ್ಕ್, ಆರ್‌ಎಂಒ, ಅಸಿಸ್ಟಂಟ್ ಟೀಚರ್ ಹಾಗೂ ಇತರೆ ಹುದ್ದೆಗಳ ಭರ್ತಿ |
ಒಟ್ಟು ಹುದ್ದೆಗಳು | 173 |
ಅರ್ಜಿ ಸಲ್ಲಿಸುವ ಬಗೆ | ಆಫ್ ಲೈನ್ Cantonment Board |
ಹುದ್ದೆಗಳ ವಿವರ |
ಲಕ್ನೊ : 15 |
ದೆಹಲಿ : 4 |
ಜಬಲ್‌ಪುರ್ : 48 |
ಜಲಪಹರ್ : 7 |
ಅಹ್ಮೆದ್‌ನಗರ : 40 |
ಕಾನ್ಪುರ್ : 9 |
ಶಹ್ಜಾಹಾನ್ಪುರ್ : 5 |
ಶಿಲ್ಲಾಂಗ್ : 9 |
ಬೆಳಗಾಂ : 5 |
ವಿದ್ಯಾರ್ಹತೆ:
ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು 8ನೇ, 10ನೇ ತರಗತಿ, ಡಿಪ್ಲೊಮಾ/ಪದವಿ (ಸಂಬಂಧಿತ ಶಿಸ್ತು), ಎಂಬಿಬಿಎಸ್ ಅಥವಾ ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯ/ಸಂಸ್ಥೆಯಿಂದ ತತ್ಸಮಾನ ಉತ್ತೀರ್ಣರಾಗಿರಬೇಕು.
ಹೆಚ್ಚಿನ ಶಿಕ್ಷಣ ಅರ್ಹತೆಯ ವಿವರಗಳಿಗಾಗಿ ದಯವಿಟ್ಟು ಕೆಳಗಿನ ಅಧಿಕೃತ ಅಧಿಸೂಚನೆಗೆ ಹೋಗಿ.
ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ವೇತನಶ್ರೇಣಿ:
ಲೋವರ್ ಡಿವಿಷನ್ ಕ್ಲರ್ಕ್ (LDC), ಪ್ಯೂನ್, ಸಫಾಯಿಕರಂಚಾರಿ, ಫಾರೆಸ್ಟ್ ಗಾರ್ಡ್, ಸ್ಯಾನಿಟರಿ ಇನ್ಸ್ಪೆಕ್ಟರ್, ಜೂನಿಯರ್ ಕ್ಲರ್ಕ್, ಸಹಾಯಕ ಶಿಕ್ಷಕ, ಎಲೆಕ್ಟ್ರಿಷಿಯನ್, ಪೈಪ್ ಫಿಟ್ಟರ್, ಚೌಕಿದಾರ್, ಮಾಲಿ, ಅಯಾಹ್, ಸಫಾಯಿವಾಲಾ, ನರ್ಸ್, ಮೇಸನ್, ವಾರ್ಡ್ ಬಾಯ್, ಮಜ್ದೂರ್, ವೈದ್ಯಾಧಿಕಾರಿ, ಪ್ಲಂಬರ್ , ಜೂನಿಯರ್ ಅಸಿಸ್ಟೆಂಟ್, ಮಿಡ್‌ವೈಫ್, ವಾಲ್ವ್ ಮ್ಯಾನ್, ಡ್ರೆಸ್ಸರ್, ಮಾಲಿ, ಲ್ಯಾಬ್ ಅಸಿಸ್ಟೆಂಟ್, ಡ್ರೈವರ್, ಕಾರ್ಪೆಂಟರ್ ಪೇ ಸ್ಕೇಲ್ ರೂ. 18000/- ರೂ. 56900/- ರಿಂದ ರೂ. 56100/- ರಿಂದ ರೂ.177500/-.
ಅರ್ಜಿ ಶುಲ್ಕ:
ಸಾಮಾನ್ಯ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.1200.
ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂ.1000.
ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ರೂ.800.
ಇತರೆ ಹೆಚ್ಚಿನ ಮಾಹಿತಿಗಳಿಗೆ ಅಧಿಕೃತ ನೋಟಿಫಿಕೇಶನ್ ಓದಬಹುದು.
ಆಯ್ಕೆ ವಿಧಾನ:
ಕೌಶಲ್ಯ ಪರೀಕ್ಷೆ / ಲಿಖಿತ ಪರೀಕ್ಷೆ / ಸಂದರ್ಶನ / ವ್ಯಕ್ತಿತ್ವ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 01-12-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 02-01-2023 |
| |