ಗ್ರಾಮಲೆಕ್ಕಾಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ, ಮೂಲ ದಾಖಲೆಗಳ ಪರಿಶೀಲನೆಗೆ ದಿನಾಂಕ ಪ್ರಕಟಿಸಲಾಗಿದೆ

 

ಜಿಲ್ಲಾ ಕಂದಾಯ ಘಟಕದಲ್ಲಿನ 59 ಗ್ರಾಮಲೆಕ್ಕಾಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ, ಮೂಲ ದಾಖಲೆಗಳ ಪರಿಶೀಲನೆಗೆ ದಿನಾಂಕ ಪ್ರಕಟಿಸಲಾಗಿದೆ. ಈ ಹುದ್ದೆಗಳ ಭರ್ತಿಗೆ 2020ನೇ ಸಾಲಿನಲ್ಲಿ ನೇಮಕ ಅಧಿಸೂಚನೆ ಪ್ರಕಟಿಸಲಾಗಿತ್ತು.

ಸದರಿ ಹುದ್ದೆಗಳ ನೇಮಕ ಸಂಬಂಧ ಈಗಾಗಲೇ ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ 1:10 ರ ಅನುಪಾತದಲ್ಲಿ ತಾತ್ಕಾಲಿಕ ಪರಿಶೀಲನಾ ಆಯ್ಕೆಪಟ್ಟಿಯನ್ನು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯ ವೆಬ್‌ಸೈಟ್‌ http://chitradurga-va.kar.nic.in ನಲ್ಲಿ ಪ್ರಕಟಿಸಲಾಗಿದೆ.

ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿನ ಸಾಮಾನ್ಯ ವರ್ಗದಲ್ಲಿನ ಅಭ್ಯರ್ಥಿಗಳಿಗೆ ದಿನಾಂಕ 24-11-2021 ರಂದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ / ಪ್ರವರ್ಗ-1 /2A / 2B/3A / 3B ವರ್ಗದ ಅಭ್ಯರ್ಥಿಗಳಿಗೆ ದಿನಾಂಕ 25-11-2021 ರಂದು ಬೆಳಿಗ್ಗೆ 10-30 ಗಂಟೆಗೆ ಕ್ರೀಡಾ ಭವನ, ಜಿಲ್ಲಾ ಕ್ರೀಡಾಂಗಣ, ಸ್ಟೇಡಿಯಂ ರಸ್ತೆ, ಚಿತ್ರದುರ್ಗ ಇಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ.

 

 

ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿದಂತೆ ಹಾಗೂ ಅರ್ಜಿಯ ಜತೆಗೆ ಅಪ್‌ಲೋಡ್ ಮಾಡಲಾದ ದಾಖಲೆಗಳ ಮೂಲ ಪ್ರತಿಗಳೊಂದಿಗೆ ಮತ್ತು ಒಂದು ಸೆಟ್‌ ದೃಢೀಕೃತ ಪ್ರತಿಯೊಂದಿಗೆ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಲು ತಿಳಿಸಲಾಗಿದೆ.

ತಾತ್ಕಾಲಿಕ ಆಯ್ಕೆಪಟ್ಟಿ ಚೆಕ್‌ ಮಾಡಲು ವೆಬ್‌ಸೈಟ್ : Click Here 

error: Content is protected !!