ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಕೇಂದ್ರ ರೇಷ್ಮೆ ಮತ್ತು ಕೃಷಿ ಸಂಶೋಧನಾ ಕೇಂದ್ರದಲ್ಲಿ ನೇಮಕಾತಿ 2020

 

CSRTI Mysore Recruitment 2020 – Walk-in Interview for 04 Project Assistant Posts

ಸೆಂಟ್ರಲ್ ಸೆರಿಕಲ್ಚರಲ್ ರಿಸರ್ಚ್ ಮತ್ತು ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಮೈಸೂರು (CSRTI) ನಲ್ಲಿ ಖಾಲಿ ಇರುವ 4 ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ 2 ವರ್ಷ ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿ.19ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ

ಒಟ್ಟು ಹುದ್ದೆಗಳು: 4

ಉದ್ಯೋಗ ಸ್ಥಳ: ಮೈಸೂರು, ಕರ್ನಾಟಕ

ವಿದ್ಯಾರ್ಹತೆ:
B.Sc (ಅಗ್ರಿ, ಹಾರ್ಟಿ, ಸೆರಿ, ಅಗ್ರಿ ಮಾರ್ಕೆಟ್, ಡೈರಿ ಮತ್ತು ಎಬಿಎಂ) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಅರ್ಜಿ ಶುಲ್ಕ:- ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ.

 

 

 

 

ವಯೋಮಿತಿ:
ಅಕ್ಟೋಬರ್ 31,2020ರ ಅನ್ವಯ ಕನಿಷ್ಠ- 18 ವರ್ಷಗಳನ್ನು ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಠ- 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳಬಹುದಾಗಿದೆ. ಹಾಗೂ ಪ.ಜಾ, ಪ.ಪಂ, ಹಿಂದುಳಿದ ವರ್ಗದ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ- 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುವುದು.

ಆಯ್ಕೆ ವಿಧಾನ:
ಹುದ್ದೆಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ವೇತನ ಶ್ರೇಣಿ:
ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ- 12,000/-ರೂ ಗಳ ವೇತನವನ್ನು ನೀಡಲಾಗುವುದು.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಫಾರ್ಮನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ಮೂಲ ದಾಖಲೆಗಳನ್ನು ಲಗತ್ತಿಸಿ ಡಿಸೆಂಬರ್ 19,2020ರಂದು ಬೆಳಿಗ್ಗೆ 9:30ಕ್ಕೆ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

 

 

ಕಚೇರಿಯ ವಿಳಾಸ :

Central Sericultural Research and training institute,

Central silk board, ministry of textiles, Govt of India,

Manandvadi road, Srirampura, Mysore -570008

 

ಸಂದರ್ಶನಕ್ಕೆ ಹಾಜರಾಗುವ  ದಿನಾಂಕ : 19 ಡಿಸೆಂಬರ್ 2020

 

Website – Click Here
Notification – Click Here
Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

close button