ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಈಗ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ತುಂಬಾ ಸುಲಭ !

ಚಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಪಡೆಯುವುದನ್ನು ಸರ್ಕಾರ ಇನ್ನಷ್ಟು ಸರಳಗೊಳಿಸಲು ಮುಂದಾಗಿದೆ. ನಿರ್ದಿಷ್ಟ ಚಾಲನಾ ತರಬೇತಿ ಕೇಂದ್ರಗಳಿಂದ ಡ್ರೈವಿಂಗ್‌ ತರಬೇತಿ ಪಡೆದವರಿಗೆ ಆರ್‌ಟಿಒ ಆಫೀಸ್ ನಲ್ಲಿ ಡ್ರೈವಿಂಗ್‌ ಟ್ರಯಲ್‌ ಕೊಡಬೇಕಾಗಿಲ್ಲ.

ಹೈಲೈಟ್ಸ್‌
ನಿರ್ದಿಷ್ಟ ಕೇಂದ್ರಗಳಲ್ಲಿ ತರಬೇತಿ ಪಡೆದವರಿಗೆ ಡ್ರೈವಿಂಗ್‌ ಟ್ರಯಲ್‌ ನೀಡುವ ಅಗತ್ಯವಿಲ್ಲ,
ಡ್ರೈವಿಂಗ್ ಲೈಸೆನ್ಸ್ ಪಡೆಯುವುದನ್ನು ಸರಳಗೊಳಿಸಲು ಕೇಂದ್ರ ಸರ್ಕಾರದಿಂದ ಹೊಸ ನಿಯಮ
ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಕೇಂದ್ರಗಳಲ್ಲಿ ಮಾತ್ರ ಈ ಅವಕಾಶ
ನವದೆಹಲಿ: ವಾಹನ ಚಾಲನಾ ಪರವಾನಿಗೆ ಪಡೆಯಲು ಇನ್ನುಮುಂದೆ ಟ್ರಯಲ್‌ ನೀಡಬೇಕಿಲ್ಲ ಎನ್ನುವ ಹೊಸ ನಿಯಮ ರೂಪಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಈ ಮೂಲಕ ಡ್ರೈವಿಂಗ್ ಲೈಸೆನ್ಸ್‌ ಪಡೆಯುವುದನ್ನು ಮತ್ತಷ್ಟು ಸರಳಗೊಳಿಸಲು ಸರ್ಕಾರ ಮುಂದಾಗಿದೆ.

ಸದ್ಯ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸೇರಿದ ಪಥದಲ್ಲಿ ವಾಹನ ಓಡಿಸಿ ಟ್ರಯಲ್‌ ನೀಡದ ಬಳಿಕ, ಅದಲ್ಲಿ ತೇರ್ಗಡೆಯಾದ ಬಳಿಕ ಮಾತ್ರ ಈ ವರೆಗೆ ಚಲನಾ ಪರವಾನಗಿ ನೀಡುತ್ತಿದ್ದರು. ಆದರೆ ಈಗ ಇದನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಚಾಲನಾ ತರಬೇತಿ ಕೇಂದ್ರಗಳಲ್ಲಿ ನುರಿತ ತರಬೇತಿ ಪಡೆದ ನಾಗರಿಕರಿಗೆ ಆರ್‌ಟಿಓಗಳು ನಡೆಸುವ ಚಾಲನಾ ಪರೀಕ್ಷೆಯಿಂದ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಸಿದ್ದವಾಗಿದ್ದು, ಈ ಕುರಿತು ಕರಡು ಅಧಿಸೂಚನೆಯೊಂದನ್ನು ಹೊರಡಿಸಿದೆ. ಈ ಮೂಲಕ ಡ್ರೈವಿಂಗ್‌ ಲೈಸೆನ್ಸ್‌ ಪಡೆಯುವುದನ್ನು ಇನ್ನಷ್ಟು ಸರಳ ಗೊಳಿಸಲು ಮುಂದಾಗಿದೆ. ಅಲ್ಲದೇ ಈ ನಿಯಮದಿಂದಾಗಿ ರಸ್ತೆ ಅಪಘಾತವನ್ನು ಕಡಿಮೆಗೊಳಿಸುವುದು ಸರ್ಕಾರದ ಮುಖ್ಯ ಉದ್ದೇಶ.


ಕರ್ನಾಟಕದಲ್ಲಿ ಹೊಸ ಉದ್ಯೋಗಾವಕಾಶಗಳು

ಚಾಲನಾ ತರಬೇತಿ ಕೇಂದ್ರಗಳಿಗೆ ಸರ್ಕಾರದಿಂದ ಮಾನ್ಯತೆ ನೀಡಲು ಸರ್ಕಾರ ಸಿದ್ದವಾಗಿದ್ದು, ಇಂಥ ಕೇಂದ್ರಗಳಿಂದ ಆರ್‌ಟಿಒ ಪರೀಕ್ಷೆಯಿಂದ ವಿನಾಯಿತಿ ದೊರೆಯಲಿದೆ. ಈ ಕೇಂದ್ರಗಳಲ್ಲಿ ವಿಶೇಷ ತರಬೇತಿ ಲಭಿಸಿದ ಚಾಲಕರು ಸೃಷ್ಠಿಯಾಗಲಿದ್ದಾರೆ. ಹೀಗಾಗಿ ಅವರಿಗೆ ಆರ್‌ಟಿಒ ಪರೀಕ್ಷೆ ವಿನಾಯಿತಿ ಕೊಡಲಾಗುವುದು. ಅಲ್ಲದೇ ರಸ್ತೆ ಅಪಘಾತಗಳೂ ತಗ್ಗಲಿವೆ ಎನ್ನುವುದು ಸರ್ಕಾರದ ಚಿಂತನೆ.

ದೇಶಾದ್ಯಂತ ಸದ್ಯ ಲಕ್ಷಾಂತರ ಡ್ರೈವಿಂಗ್‌ ಸ್ಕೂಲ್‌ಗಳಿದ್ದು, ಅವುಗಳ ಮೂಲಸೌಕರ್ಯವನ್ನು ಪರಶೀಲನೆ ಮಾಡಿ, ಅವುಗಳು ಸರ್ಕಾರ ಬಯಸಿದ ಗುಣಮಟ್ಟಕ್ಕೆ ಇದ್ದರೆ ಅಂಥವುಗಳಿಗೆ ಮಾನ್ಯತೆ ನೀಡಲಾಗುತ್ತದೆ. ಈ ಕೇಂದ್ರಗಳಲ್ಲಿ ಚಾಲನಾ ತರಬೇತಿ ಪಡೆದವರಿಗೆ ಆರ್‌ಟಿಒ ಪರೀಕ್ಷೆ ಇರೋದಿಲ್ಲ.

ಚಾಲನಾ ತರಬೇತಿ ಕೇಂದ್ರಗಳು ಮಾನ್ಯತೆ ಪಡೆಯಬೇಕಿದ್ದರೇ, ಅಲ್ಲಿ ಕೌಶಲ್ಯಾಭಿವೃದ್ಧಿ ಸೌಲಭ್ಯಮ ಭೂಮಿ, ಕಟ್ಟಡ, ಚಾಲನಾ ಪರೀಕ್ಷಾ ಪಥ, ವಾಹನಗಳು, ಸಿಮ್ಯುಲೇಟರ್‌ ವರ್ಕ್‌ ಶಾಪ್‌ ಸೇರಿದಂತೆ ಇನ್ನಿತರ ಸೌಕರ್ಯಗಳು ಇರಬೇಕಾಗುತ್ತದೆ.

ಕರ್ನಾಟಕದಲ್ಲಿ ಹೊಸ ಉದ್ಯೋಗಾವಕಾಶಗಳು

close button