ವಿಶೇಷ ಡ್ರೋನ್ ತಯಾರಿಸಿದ್ದಾಗಿ ಸುಳ್ಳು ಹೇಳಿಕೊಂಡು ಈಗ ಸಿಕ್ಕಿಬಿದ್ದಿರುವ ಪ್ರತಾಪ್ ಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾನೆ. ಹೀಗಾಗಿ ಪ್ರತಾಪನ ವಿರುದ್ಧ ಎಫ್ ಐಆರ್ ದಾಖಲಿಸಿರುವ ಪೊಲೀಸರು ಪ್ರತಾಪನ ಬಂಧನಕ್ಕೆ ವಿಶೇಷ ತಂಡವೊ
ಆದರೆ ಈ ಬಾರಿ ಪ್ರಕರಣ ದಾಖಲಾಗಿರುವುದು ಡ್ರೋನ್ ವಿಚಾರಕ್ಕೆ ಅಲ್ಲ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಕಾರಣ. ಪ್ರತಾಪ್ ಇದೇ ತಿಂಗಳ 15ರಂದು ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದ. ಹೊರ ರಾಜ್ಯದಿಂದ ಬಂದ ತಲಘಟ್ಟಪುರದ ಅಪಾರ್ಟ್ ಮೆಂಟ್ ವೊಂದರಲ್ಲಿ ಹೋಂ ಕ್ವಾರಂಟೈನ್ ಆಗಿದ್ದ. ಆತನಿಗೆ 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕಿದ್ದ ಪ್ರತಾಪ್ ಮರುದಿವಸ ನಿಯಮ ಉಲ್ಲಂಘಿಸಿ ಚಾನೆಲ್ ಒಂದರ ಸಂದರ್ಶನದಲ್ಲಿ ಪಾಲ್ಗೊಂಡಿದ್ದ.
ಪ್ರತಾಪ್ ಕ್ವಾರಂಟೈನ್ ನಿಯಮಗಳು ಉಲ್ಲಂಘಿಸಿರುವುದು ಸ್ಪಷ್ಟವಾದ ಕಾರಣ ಬಿಬಿಎಂಪಿ ಅಧಿಕಾರಿಗಳು ತಲಘಟ್ಟಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆತನ ಮೊಬೈಲ್ ಕೂಡಾ ಸ್ವಿಚ್ ಆಫ್ ಎಂದು ಬರುತ್ತಿದೆ. ಆತನ ಅಪಾರ್ಟ್ ಮೆಂಟ್ ಗೆ ಭೇಟಿ ನೀಡಿದಾಗಲೂ ಆತ ಪತ್ತೆಯಾಗಿರಲಿಲ್ಲ. ಈತ ಮಂಡ್ಯ ಅಥವಾ ಚಿಕ್ಕಮಗಳೂರಿನಲ್ಲಿ ಇದ್ದಾನೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.