ESIC ಇಂದ ಬೃಹತ್ ನೇಮಕಾತಿ 2021 – ESIC Recruitment 2021 notification Apply Online for 6552 UDC, Stenographer Posts

ಉದ್ಯೋಗ ಮಾಹಿತಿ 

ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ), ಖಾಲಿ ಇರುವ 6,552 ಅಪ್ಪರ್ ಡಿವಿಷನ್ ಕ್ಲರ್ಕ್/ ಅಪ್ಪರ್ ಡಿವಿಷನ್ ಕ್ಲರ್ಕ್ ಕ್ಯಾಶಿಯರ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿಗೆ
ಇಲಾಖೆಯಿಂದ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು:  6,552
* ಅಪ್ಪರ್ ಡಿವಿಷನ್ ಕ್ಲರ್ಕ್ ಅಪ್ಪರ್ ಡಿವಿಷನ್ ಕ್ಲರ್ಕ್ 6306 ಹುದ್ದೆಗಳು
* ಸ್ಟೆನೋಗ್ರಾಫರ್‌ 246 ಹುದ್ದೆಗಳು

ವಿದ್ಯಾರ್ಹತೆ
ಸ್ಟೆನೋಗ್ರಾಫರ್‌ ಹುದ್ದೆಗಳಿಗೆ  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಡೇಟಾಬೇಸ್‌ಗಳ ಬಳಕೆ ಸೇರಿದಂತೆ ಕಂಪ್ಯೂಟರ್‌ ಕೆಲಸದ ಜ್ಞಾನವನ್ನು ಅಭ್ಯರ್ಥಿಗಳು ಹೊಂದಿರಬೇಕು. ಅಭ್ಯರ್ಥಿಗಳು ಇಂಗ್ಲಿಷ್ / ಹಿಂದಿಯಲ್ಲಿ ನಿಮಿಷಕ್ಕೆ 80 ಪದಗಳ ವೇಗದಲ್ಲಿ ಟೈಪ್ ಮಾಡಬೇಕು.

ಅಪ್ಪರ್ ಡಿವಿಷನ್ ಕ್ಲರ್ಕ್ ಕ್ಯಾಷಿಯರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಅಥವಾ ತತ್ಸಮಾನ. ಅಭ್ಯರ್ಥಿಗಳು ಎಂಎಸ್ ಆಫೀಸ್ ಮತ್ತು ಡೇಟಾಬೇಸ್‌ಗಳು ಸೇರಿದಂತೆ ಕಂಪ್ಯೂಟರ್‌ಗಳ ಜ್ಞಾನವನ್ನೂ ಹೊಂದಿರಬೇಕು.

ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ, ಅಭ್ಯರ್ಥಿಗಳು ಎಲ್ಲಾ ಪ್ರಮಾಣಪತ್ರಗಳು, ಪದವಿಗಳು ಮತ್ತು ಶೈಕ್ಷಣಿಕ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು.


ವಯೋಮಿತಿ: ಕನಿಷ್ಠ 18 ಗರಿಷ್ಠ 27 ವರ್ಷಗಳು ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳು ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಹಿರಿತನ ಮತ್ತು ಫಿಟ್‌ನೆಸ್ / ಸ್ಪರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ಅಪ್ಪರ್ ಡಿವಿಷನ್ ಕ್ಲರ್ಕ್ / ಅಪ್ಪರ್ ಡಿವಿಷನ್ ಕ್ಲರ್ಕ್ ಕ್ಯಾಷಿಯರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಮತ್ತು ಸ್ಟೆನೋಗ್ರಾಫರ್ ಹುದ್ದೆಗಳಿಗೆ, ನೇರ ನೇಮಕಾತಿ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಡಿಎ, ಎಚ್‌ಆರ್‌ಎ ಇತ್ಯಾದಿ ಸೇರಿದಂತೆ 25,500 ರೂ. ಹೆಚ್ಚುವರಿ ಭತ್ಯೆ ಸಿಗಲಿದೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 02 ಮಾರ್ಚ್ 2021

Website – ವೆಬ್ಸೈಟ್    
Notification – ಅಧಿಸೂಚನೆ   

 

error: Content is protected !!