ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಆಯ್ಕೆ ಮಾಡಲಾದ 17 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಕಾಯಕಮಿತ್ರ ಹುದ್ದೆಗಳ ನಿಯೋಜನೆಗೆ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹಾನಗಲ್ ತಾಲ್ಲೂಕಿನ ಸೋಮಸಾಗರ, ಕುಸನೂರ, ಗೊಂದಿ, ಉಪ್ಪುಣಸಿ, ಕೆಲವರಕೊಪ್ಪ, ಹೀರೂರು, ಕಂಚಿನೆಗಳೂರು, ಬೈಚವಳ್ಳಿ, ಕಿರವಾಡಿ, ಮಾಸನಕಟ್ಟಿ, ಯಳವಟ್ಟಿ, ಸಮ್ಮಸಗಿ, ಹುಲ್ಲತ್ತಿ, ಸಾಂವಸಗಿ, ಹಿರೇಹುಲ್ಲಾಳ, ಮಾರನಬೀಡ ಹಾಗೂ ಶ್ಯಾಡಗುಪ್ಪಿ ಗ್ರಾಮ ಪಂಚಾಯತಿಗಳಿಗೆ ‘ಗ್ರಾಮ ಕಾಯಕಮಿತ್ರ’ ನಿಯೋಜನೆ ಅವಕಾಶ ನೀಡಲಾಗಿದೆ.ಸದರಿ ಪೋಸ್ಟ್‌ಗಳಿಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಿದ್ಯಾರ್ಹತೆ: ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಓದು ಮತ್ತು ಬರಹ ಚೆನ್ನಾಗಿ ತಿಳಿದಿರಬೇಕು,ಕಳೆದ ಮೂರು ವರ್ಷಗಳಲ್ಲಿ(2018-19, 2019-20, 2020-21) ಕನಿಷ್ಠ ಎರಡು ವರ್ಷ ಯೋಜನೆಯಡಿ ಅಕುಶಲ ಕೂಲಿಕಾರರಾಗಿ ಕೆಲಸ ನಿರ್ವಹಿಸಿರಬೇಕು. ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣಗಳನ್ನು ಹೊಂದಿರಬೇಕು.
10th Pass Jobs 2021 |
Degree Pass Jobs 2021 |
7th Pass Jobs 2021 |
Diploma Pass Jobs 2021 |
ITI Pass Jobs 2021 |
PUC Pass Jobs 2021 |
ವಯೋಮಿತಿ:45 ವರ್ಷ ವಯೋಮಿತಿ ಮೀರಿರಬಾರದು. ದಿನಾಂಕ 1-1-2021ಕ್ಕೆ ಅನ್ವಯಿಸುವಂತೆ ತಾನು ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕ್ರೀಯಾಶೀಲ ಜಾಬ್ ಕಾರ್ಡ್ ಹೊಂದಿರಬೇಕು.
ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.6000/- ಗೌರವಧನ ಹಾಗೂ ಕಾರ್ಯನಿರ್ವಹಣೆ ಆಧರಿಸಿ ರೂ.5000/- ಪ್ರೋತ್ಸಾಹಧನ ನೀಡಲಾಗುವುದು.
ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಗ್ರಾಮ ರೋಜಗಾರ ಮಿತ್ರರು ಸಮುದಾಯದ ಕಾರ್ಯನಿರ್ವಹಣೆ ಮಾಡಲು ನಿರ್ಧಿಷ್ಟ ಸಮಯವನ್ನು ನೀಡಬೇಕಾಗಿದ್ದು, ಇದಕ್ಕೆ ಗ್ರಾಮ ಕಾಯಕಮಿತ್ರರ ಕುಟುಂಬ ಮತ್ತು ಸಮಾಜ ಬೆಂಬಲವಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ದಿನಾಂಕ 15-06-2021ರೊಳಗಾಗಿ ವೆಬ್‌ಸೈಟ್ haveri.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8379-262236 ಸಂಪರ್ಕಿಸಬುದೆಂದು ಹಾನಗಲ್ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Website |
Notification |