ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಮ್ಮೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ಯನ್ನು ಇನ್ನೂ 3 ತಿಂಗಳವರೆಗೆ ವಿಸ್ತರಿಸಲಾಗಿದೆ. ಈಗ ಈ ಯೋಜನೆಯಡಿ ಪಡಿತರ ಚೀಟಿದಾರರು ಡಿಸೆಂಬರ್‌ವರೆಗೆ ಸರ್ಕಾರದಿಂದ ಉಚಿತ ಪಡಿತರ ಪ್ರಯೋಜನ ಪಡೆಯಲಿದ್ದಾರೆ.
ಕೇಂದ್ರ ಸರ್ಕಾರವು ಏಪ್ರಿಲ್ 2020ರಲ್ಲಿ ಕೋವಿಡ್ ಅವಧಿಯಲ್ಲಿ ಈ ಯೋಜನೆ ಪ್ರಾರಂಭಿಸಿತು. ನಂತರ ಮಾರ್ಚ್ 2022ರಲ್ಲಿ 6 ತಿಂಗಳವರೆಗೆ ಅಂದರೆ ಸೆಪ್ಟೆಂಬರ್‍ವರೆಗೆ ವಿಸ್ತರಿಸಲಾಯಿತು. ಇದೀಗ ಸರ್ಕಾರ ಮತ್ತೊಮ್ಮೆ 2022ರ ಡಿಸೆಂಬರ್‌ವರೆಗೆ 3 ತಿಂಗಳ ಕಾಲ ವಿಸ್ತರಿಸಿದೆ. ಆದರೆ, ಮಾಧ್ಯಮ ವರದಿಯಲ್ಲಿ 6 ತಿಂಗಳು ವಿಸ್ತರಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಈ ಯೋಜನೆ ಬಗ್ಗೆ ಮಾಹಿತಿ ನೀಡಿದ ಬಳಿಕ ಇದು ನೇರವಾಗಿ 80 ಕೋಟಿ ಜನರಿಗೆ ಪ್ರಯೋಜನ ನೀಡುತ್ತದೆ. ಸರ್ಕಾರದಿಂದ ಈ ಯೋಜನೆ ಹೆಚ್ಚಿಸುವ ಸುಳಿವು ಈಗಾಗಲೇ ನೀಡಲಾಗಿತ್ತು. ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿಯೂ ಈ ಬಗ್ಗೆ ಸೂಚಿಸಿದ್ದರು. ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ವಿಶ್ವದ ಅತಿದೊಡ್ಡ ಆಹಾರ ಯೋಜನೆಯಾಗಿದೆ.
ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರವು ಬರೋಬ್ಬರಿ 3.40 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಈ ಕೇಂದ್ರ ಯೋಜನೆಯಡಿ ದೇಶದ ಎಲ್ಲಾ ಬಡ ಪಡಿತರ ಚೀಟಿದಾರರ ಕುಟುಂಬಗಳಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಪಡಿತರವನ್ನು ನೀಡಲಾಗುತ್ತದೆ. ಆರಂಭದಲ್ಲಿ 1 ಕುಟುಂಬಕ್ಕೆ ಕಿಲೋ ಬೇಳೆ ಮತ್ತು ಅಗತ್ಯ ಮಸಾಲೆಗಳ ಕಿಟ್ ನೀಡಲಾಗಿತ್ತು.
ಇದಲ್ಲದೇ ರೈಲ್ವೆ ನೌಕರರಿಗೆ 78 ದಿನಗಳ ಬೋನಸ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರದಿಂದ ಸುಮಾರು 11 ಲಕ್ಷ ಸರ್ಕಾರಿ ನೌಕರರು ಪ್ರಯೋಜನ ಪಡೆಯಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಮ್ಮೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ಯನ್ನು ಇನ್ನೂ 3 ತಿಂಗಳವರೆಗೆ ವಿಸ್ತರಿಸಲಾಗಿದೆ. ಈಗ ಈ ಯೋಜನೆಯಡಿ ಪಡಿತರ ಚೀಟಿದಾರರು ಡಿಸೆಂಬರ್‌ವರೆಗೆ ಸರ್ಕಾರದಿಂದ ಉಚಿತ ಪಡಿತರ ಪ್ರಯೋಜನ ಪಡೆಯಲಿದ್ದಾರೆ.
ಕೇಂದ್ರ ಸರ್ಕಾರವು ಏಪ್ರಿಲ್ 2020ರಲ್ಲಿ ಕೋವಿಡ್ ಅವಧಿಯಲ್ಲಿ ಈ ಯೋಜನೆ ಪ್ರಾರಂಭಿಸಿತು. ನಂತರ ಮಾರ್ಚ್ 2022ರಲ್ಲಿ 6 ತಿಂಗಳವರೆಗೆ ಅಂದರೆ ಸೆಪ್ಟೆಂಬರ್‍ವರೆಗೆ ವಿಸ್ತರಿಸಲಾಯಿತು. ಇದೀಗ ಸರ್ಕಾರ ಮತ್ತೊಮ್ಮೆ 2022ರ ಡಿಸೆಂಬರ್‌ವರೆಗೆ 3 ತಿಂಗಳ ಕಾಲ ವಿಸ್ತರಿಸಿದೆ. ಆದರೆ, ಮಾಧ್ಯಮ ವರದಿಯಲ್ಲಿ 6 ತಿಂಗಳು ವಿಸ್ತರಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಈ ಯೋಜನೆ ಬಗ್ಗೆ ಮಾಹಿತಿ ನೀಡಿದ ಬಳಿಕ ಇದು ನೇರವಾಗಿ 80 ಕೋಟಿ ಜನರಿಗೆ ಪ್ರಯೋಜನ ನೀಡುತ್ತದೆ. ಸರ್ಕಾರದಿಂದ ಈ ಯೋಜನೆ ಹೆಚ್ಚಿಸುವ ಸುಳಿವು ಈಗಾಗಲೇ ನೀಡಲಾಗಿತ್ತು. ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿಯೂ ಈ ಬಗ್ಗೆ ಸೂಚಿಸಿದ್ದರು. ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ವಿಶ್ವದ ಅತಿದೊಡ್ಡ ಆಹಾರ ಯೋಜನೆಯಾಗಿದೆ.
ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರವು ಬರೋಬ್ಬರಿ 3.40 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಈ ಕೇಂದ್ರ ಯೋಜನೆಯಡಿ ದೇಶದ ಎಲ್ಲಾ ಬಡ ಪಡಿತರ ಚೀಟಿದಾರರ ಕುಟುಂಬಗಳಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಪಡಿತರವನ್ನು ನೀಡಲಾಗುತ್ತದೆ. ಆರಂಭದಲ್ಲಿ 1 ಕುಟುಂಬಕ್ಕೆ 1ಕಿಲೋ ಬೇಳೆ ಮತ್ತು ಅಗತ್ಯ ಮಸಾಲೆಗಳ ಕಿಟ್ ನೀಡಲಾಗಿತ್ತು.