WhatsApp Telegram Group

ಹಳೆ ವಾಹನ ಮಾಲೀಕರಿಗೆ ಕೇಂದ್ರದಿಂದ ಮತ್ತೊಂದು ಶಾಕ್!

 15 ವರ್ಷ ಮೇಲ್ಪಟ್ಟ ವಾಣಿಜ್ಯ ಬಳಕೆ ವಾಹನ ಮತ್ತು 20 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳನ್ನು ಸ್ಕ್ರಾಪ್ ಗೆ ಹಾಕುವ ವಾಹನ ಸ್ಕ್ರಾಪ್ ಕರಡು ನೀತಿಯನ್ನು 15 ದಿನದೊಳಗೆ ಪ್ರಕಟಿಸಲಾಗುವುದು.

ಕೇಂದ್ರ ರಸ್ತೆ, ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಮಾಹಿತಿನ ನೀಡಿ, ಸುಮಾರು ಒಂದು ಕೋಟಿಯಷ್ಟು ವಾಹನಗಳು ಗುಜರಿಗೆ ಸೇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಹಳೆಯ ವಾಹನಗಳ ಒಂದೊಂದೇ ಬಿಡಿಭಾಗಗಳನ್ನು ಬೇರ್ಪಡಿಸಿ ಸ್ಕ್ರಾಪ್ ಮಾಡಿ ಮೌಲ್ಯಮಾಪನ ಮಾಡಿ ಅದರ ಮೊತ್ತವನ್ನು ವಾಹನ ಮಾಲೀಕರಿಗೆ ನೀಡಲಾಗುತ್ತದೆ. ಸ್ಕ್ರಾಪಿಂಗ್ ನೀತಿಯಿಂದ ಆಟೋಮೊಬೈಲ್ ಉದ್ಯಮಕ್ಕೆ ಅನುಕೂಲವಾಗಲಿದೆ. ಮೂರು ಸಲ ಫಿಟ್ನೆಸ್ ಟೆಸ್ಟ್ ಫೇಲಾಗುವ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರಾಪ್ ಮಾಡಲಾಗುವುದು.

In Article ad

20 ವರ್ಷ ಮೀರಿದ 51 ಲಕ್ಷ ಲಘು ವಾಹನಗಳು, 15 ವರ್ಷ ಮೀರಿದ 34 ಲಕ್ಷ ಲಘು ವಾಹನಗಳು ಗುಜರಿ ಸೇರಲಿವೆ.

ಇದರಿಂದ ಸುಮಾರು 10 ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗಲಿದೆ. 50 ಸಾವಿರ ಹೊಸ ಉದ್ಯೋಗ ಸೃಷ್ಟಿಯಾಗಲಿವೆ. ಮಾಲಿನ್ಯ ತಡೆ, ರಸ್ತೆ ಸುರಕ್ಷತೆ, ತ್ಯಾಜ್ಯ ಲೋಹ ಮರು ಬಳಕೆ, ತೈಲ ಆಮದು ನಿಯಂತ್ರಣಕ್ಕೆ ಇದು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

ಹೊಸ ಉದ್ಯೋಗ ಸುದ್ದಿ 

In Article ad

 

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ, ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ಪೀಠಗಳಲ್ಲಿ ಪ್ರಸ್ತುತ ಖಾಲಿ ಇರುವ ಉಳಿದ ಮೂಲ ವೃಂದ ಮತ್ತು ಸ್ಥಳೀಯ ವೃಂದದ ಶೀಘ್ರಲಿಪಿಗಾರ ಹುದ್ದೆಗಳನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಹುದ್ದೆಗಳ ವಿವರ :

ಶೀಘ್ರಲಿಪಿಗಾರರು – 13 ಹುದ್ದೆಗಳು 

In Article ad

ಬೆರಳಚ್ಚುಗಾರರು – 03 ಹುದ್ದೆಗಳು)

 

 

In Article ad

ಒಟ್ಟು ಹುದ್ದೆಗಳು: 16

ವಿದ್ಯಾರ್ಹತೆ:
1. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
2. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು ಪರೀಕ್ಷೆ ಪ್ರೌಢದರ್ಜೆ (ಸೀನಿಯರ್ ಗ್ರೇಡ್) ಹಾಗೂ ಆಂಗ್ಲ ಮತ್ತು ಕನ್ನಡ ಭಾಷೆಯ ಶೀಘ್ರಲಿಪಿ ಪ್ರೌಢದರ್ಜೆ (ಸೀನಿಯರ್ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿಸಿದೆ. ಇತರೆ ಪ್ರವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ.150/- ಗಳನ್ನು (ಒಂದುನೂರ ಐವತ್ತು ರೂಪಾಯಿ) ಐಪಿಒ/ಡಿಡಿ ಮೂಲಕ ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-560 009 ಇವರ ಪದನಾಮಕ್ಕೆ ಸಂದಾಯವಾಗುವಂತೆ ಪಡೆದು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.

 

 

In Article ad

ವಯೋಮಿತಿ:
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಮತ್ತು ಈ ಕೆಳಗಿನಂತೆ ವರ್ಗಾವಾರು ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

– ಸಾಮಾನ್ಯ ವರ್ಗ: 35 ವರ್ಷಗಳು

– ಪ.ಜಾ/ಪ.ಪಂ/ಪ್ರ-1 : 40 ವರ್ಷಗಳು

– 2ಎ, 2ಬಿ, 3ಎ, 3ಬಿ: 38 ವರ್ಷಗಳು

In Article ad

 

 

ವೇತನ ಶ್ರೇಣಿ: ರೂ. 30350-750-32600-850-36000-950-39800-1100-46400-1250-539001450-58250.

In Article ad

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 27 ಜನವರಿ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಫೆಬ್ರುವರಿ 2021

ಶೀಘ್ರಲಿಪಿಗಾಗರುಅರ್ಜಿ ಫಾರ್ಮ್  – ಅಧಿಸೂಚನೆ 
ಬೆರಳಚ್ಚುಗಾರರುಅರ್ಜಿ ಫಾರ್ಮ್ಅಧಿಸೂಚನೆ 

 

ಜಿಲ್ಲಾವಾರು ಉದ್ಯೋಗ ಮಾಹಿತಿ

close button