ಈಗ ಕೂದಲಿನ ಸಮಸ್ಯೆಗೆ ಹೇಳಿ ಗುಡ್ ಬೈ | Hair fall Tips In Kannada

ಈಗ ಕೂದಲಿನ ಸಮಸ್ಯೆಗೆ ಹೇಳಿ ಗುಡ್ ಬೈ 

Hair Fall Tips In Kannada| ಈಗಿನ ಜೀವನ ಶೈಲಿ ಹೇಗಿದೆ ಎಂದರೆ ಹೊರಗಡೆ ಸಿಗುವ ಕೆಮಿಕಲ್ ಇರುವಂತಹ ಉಪಹಾರಗಳು ತಿಂಡಿ-ತಿನಿಸುಗಳು ಇತ್ಯಾದಿಗಳನ್ನು ಸಾಕಷ್ಟು ಜನ ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತಾರೆ, ಈ ರೀತಿ ತಮ್ಮ ಆರೋಗ್ಯ ಗಳನ್ನು ಹದಗೆಡಿಸಿ ಕೊಳ್ಳುವುದಲ್ಲದೆ ತಮ್ಮ ಸಂಗಡಿಗರನ್ನು ಕೂಡ ಕರೆದುಕೊಂಡು ಹೋಗಿ ಅವರ ಜೀವನವನ್ನು ಕೂಡ ಹಾಳು ಮಾಡುತ್ತಿದ್ದಾರೆ,

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಜಗತ್ತು ನೈಸರ್ಗಿಕ ಆಹಾರ ದವಸ ಧಾನ್ಯಗಳು ಉತ್ತಮವಾದ ಪ್ರೊಟೀನ್ ವಿಟಮಿನ್ ಕ್ಯಾಲ್ಸಿಯಂ ಕೊರತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಕಾಣಿಸಿಕೊಳ್ಳುತ್ತಿದೆ.

 

 

ಅಷ್ಟೇ ಅಲ್ಲದೆ ಅನೇಕ ಜನರು ತಮ್ಮ ಬಾಲ್ಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ, ಅಂಥವುಗಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಮತ್ತು ಬೂದು ಬಣ್ಣದ ಕೂದಲು ಕಾಣಿಸಿಕೊಳ್ಳುತ್ತದೆ, ಇಂತಹ ಹಲವಾರು ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಕಾರಣವೇನೆಂದರೆ ನಾವು ಸೇವಿಸುವ ಆಹಾರದಲ್ಲಿ ಪೌಷ್ಠಿಕಾಂಶದ ಕೊರತೆ ಸಾಕಷ್ಟು ಇರುವ ಕಾರಣ ಈಗಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಚಿಕ್ಕವರಿಗೂ ಬರುವುದು ಸರ್ವೇಸಾಮಾನ್ಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಬಹಳ ಬೇಗ ಬಿಳಿಕೂದಲು ಕಾಣಿಸಿಕೊಳ್ಳಲಾರಂಭಿಸುತ್ತದೆ, ಇಂತಹ ಸಮಸ್ಯೆಗಳನ್ನು ಮರೆಮಾಚಲು ಸಾಕಷ್ಟು ಜನರು ಕೂದಲಿಗೆ ಕೆಮಿಕಲ್ ಇರುವಂತಹ ಹೇರ್ ಡೈ ಅಂದರೆ ಕೂದಲಿಗೆ ಕೆಮಿಕಲ್ ಇರುವಂತಹ ಕಪ್ಪುಬಣ್ಣವನ್ನು ಬೆಳೆದುಕೊಂಡು ಮತ್ತಷ್ಟು ಕೂದಲನ್ನು ಮತ್ತಷ್ಟು ಹಾನಿ ಗಳಿಸುತ್ತಾರೆ

ಇದಕ್ಕೆ ಪರಿಹಾರ ಇಲ್ಲವೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

1 ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾದರೆ ಅದಕ್ಕೆ ಕಾರಣಗಳನ್ನು ನೋಡಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಸಲಹೆಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಕೂದಲು ಉದುರುವಿಕೆಯನ್ನು ಕಡಿಮೆ ಮಾಡಬಹುದು.

2 ಹೇರ್ ಪ್ಯಾಕ್ ಅನ್ನು ಮೆಹೆಂದಿ ಮತ್ತು ನೆಲ್ಲಿಕಾಯಿ ಬಳಸಿ ತಯಾರಿಸಲಾಗುತ್ತದೆ. ಈ ಎರಡು ಮಿಶ್ರಣವು ಸ್ವಲ್ಪ ಮಟ್ಟಿಗೆ ಬೂದು ಬಣ್ಣದ ಕೂದಲುಗಳನ್ನು ತಡೆಯಲು ಸಹಾಯ ಮಾಡುತ್ತದೆ.

3 ಮೆಹೆಂದಿ ಪೇಸ್ಟ್ ಮಾಡಿ ಮತ್ತು 3 ಟೇಬಲ್ಸ್ಪೂನ್ ನೆಲ್ಲಿಕಾಯಿ ಪುಡಿಯೊಂದಿಗೆ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಕೂದಲಿನ ಆರಂಭದವರೆಗೂ ಚೆನ್ನಾಗಿ ಹಚ್ಚಬೇಕು. ನಂತರ ಅದನ್ನು ಚೆನ್ನಾಗಿ ನೆನೆಸಿ ಶಾಂಪೂ ಬಳಸಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಕೂದಲಿಗೆ ನೈಸರ್ಗಿಕ ಬಣ್ಣ ಮರಳಿ ಪಡೆಯಲು ಮತ್ತು ಆರೋಗ್ಯಕರ ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ.

 

ಕೂದಲನ್ನು ಕಪ್ಪಾಗಿ ಮತ್ತು ಹೊಳೆಯುವಂತೆ ಮಾಡಲು ಹೇರ್ ಟಾನಿಕ್ ಆಗಿ ನೆಲ್ಲಿಕಾಯಿ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಕೂದಲಿನ ಬೆಳವಣಿಗೆಯೊಂದಿಗೆ ಉತ್ತಮ ಬಣ್ಣವನ್ನು ನೀಡುವಲ್ಲಿ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ.

4 ನಿಮ್ಮ ಕೂದಲಿನ ಬಣ್ಣವು ಮೊದಲಿನಂತೆ ಕಪ್ಪಾಗಿ ಸುಂದರವಾಗಿ ಕಾಣಬೇಕು ಎಂದರೆ , ಬಾದಾಮಿ ಎಣ್ಣೆ ಮತ್ತು ನೆಲ್ಲಿಕಾಯಿ ರಸವನ್ನು ಮಿಶ್ರಣ ಮಾಡಿ ಮತ್ತು ನೆತ್ತಿಯ ಮೇಲೆ ಹಚ್ಚಿ. ಇದನ್ನು ತಲೆಗೆ ಹಚ್ಚುವುದರಿಂದ ಚಿಕ್ಕ ವಯಸ್ಸಿನಲ್ಲೇ ಬೂದು ಕೂದಲು ಬರದಂತೆ ತಡೆಯುತ್ತದೆ.

5 ನೀವು ಚಿಕ್ಕ ವಯಸ್ಸಿನಲ್ಲೇ ಬೂದು ಕೂದಲಿನ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ , ಇದಕ್ಕೆ ಕಪ್ಪು ಚಹಾ ಸಹಾಯ ಮಾಡುತ್ತದೆ. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಚಹಾ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಸ್ಟವ್ ಆಫ್ ಮಾಡಿ ಮತ್ತು ತಣ್ಣಗಾಗಲು ಬಿಡಿ

6 ಈ ಕಪ್ಪು ಚಹಾದ ನೀರನ್ನು ತಲೆಗೆ ಹಚ್ಚಿದ ನಂತರ ಶಾಂಪೂ ಬಳಸಬೇಡಿ ಈ ಮನೆಮದ್ದು ಬೂದು ಕೂದಲನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

error: Content is protected !!