WhatsApp Telegram Group

ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ , ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಿ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಹಾವೇರಿ ನಗರದಲ್ಲಿ ಆಗಸ್ಟ್‌ 07, 2021 ರಂದು ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 09 ಗಂಟೆಗೆ ಆದರ್ಶ ಐಟಿಐ ಕಾಲೇಜಿನ ಆವರಣದಲ್ಲಿ ಮಿನಿ ಉದ್ಯೋಗಮೇಳ ನಡೆಯಲಿದೆ.

ಡೇ-ನಲ್ಮ್‌ ಇಎಸ್‌ಟಿಪಿ, ಎನ್‌ಆರ್‌ಎಲ್‌ಎಂ (ಸಂಜೀವಿನಿ), ಐಟಿಐ, ಜಿಟಿಟಿಸಿ ಮತ್ತು ಇತರೆ ತರಬೇತಿಗಳನ್ನು ಪಡೆದು, ಪ್ರಮಾಣ ಪತ್ರಗಳನ್ನು ಹೊಂದಿರುವ ನಿರುದ್ಯೋಗ ಅಭ್ಯರ್ಥಿಗಳು ಈ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.

ವಿದ್ಯಾರ್ಹತೆ:
ಉದ್ಯೋಗ ಮೇಳದಲ್ಲಿ 20 ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಲಿವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮ, ವಿವಿಧ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಆಗಸ್ಟ್‌ 7 ರೊಳಗೆ ಗೂಗಲ್‌ ಫಾರ್ಮ್‌ನಲ್ಲಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.

In Article ad

ಬೇಕಾಗಿರುವ ಅಗತ್ಯತೆಗಳು
ಅಭ್ಯರ್ಥಿಗಳು ತಮ್ಮ ಆಧಾರ್‌ ಕಾರ್ಡ್, ಎಲ್ಲ ಶೈಕ್ಷಣಿಕ ದಾಖಲೆ ಹಾಗೂ ಬಯೋಡಾಟಾದ ಕನಿಷ್ಠ 10 ನಕಲು ಪ್ರತಿಗಳನ್ನು ಸಂದರ್ಶನಕ್ಕೆ ತೆಗೆದುಕೊಂಡು ಬರಬೇಕು.

ಇತರೆ ಹೆಚ್ಚಿನ ಮಾಹಿತಿಗೆ  
ಹಾವೇರಿ ಜಿಲ್ಲಾಡಳಿತ ಭವನದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕಚೇರಿ ದೂರವಾಣಿ: 08375-249191 ಗೆ ಹಾಗೂ ಹಾವೇರಿ (08375-232444, 233020), ಗುತ್ತಲ (08375-224227), ಶಿಗ್ಗಾಂವ (08378-25250), ಬಂಕಾಪುರ (08378-254222, 2542316) ಹಾನಗಲ್ 262274), ಬ್ಯಾಡಗಿ (08375-228444), ರಾಣೇಬೆನ್ನೂರು (08373-266575, 266444), ಹಿರೇಕೆರೂರ (08376-282382), ಸವಣೂರು (08378-241724) ತಾಲ್ಲೂಕನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.

In Article ad

ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಉದ್ಯೋಗಾಕಾಂಷಿಗಳು ವೆಬ್‌ಸೈಟ್‌ https://tinyurl.com/haveri2021 ಗೆ ಭೇಟಿ ನೀಡಿ ರಿಜಿಸ್ಟ್ರೇಷನ್‌ ಪಡೆಯಬೇಕು.

ಪ್ರಮುಖ ದಿನಾಂಕ
ಹಾವೇರಿ ನಗರದಲ್ಲಿ ಆಗಸ್ಟ್‌ 07, 2021 ಬೆಳಿಗ್ಗೆ 09 ಗಂಟೆಗೆ ಆದರ್ಶ ಐಟಿಐ ಕಾಲೇಜಿನ ಆವರಣದಲ್ಲಿ ಮಿನಿ ಉದ್ಯೋಗಮೇಳ ನಡೆಯಲಿದೆ.

ರಿಜಿಸ್ಟರ್ ಲಿಂಕ್ – Registration Link 

ಜಿಲ್ಲಾವಾರು ಉದ್ಯೋಗ ಮಾಹಿತಿ

close button