ಇನ್ನು ಮುಂದೆ ವಾರಕ್ಕೆ 3 ದಿನ ರಜೆ?

ಕರ್ನಾಟಕದಲ್ಲಿ ಹೊಸ ಉದ್ಯೋಗಾವಕಾಶ

ವಾರಕ್ಕೆ ನಾಲ್ಕೇ ದಿನ ಕೆಲಸ! ಮೂರು ದಿನ ರಜೆ! “ಇದೇ ನಪ್ಪಾ ಆಶ್ಚರ್ಯ ಅಂತೀರಾ? ಖಂಡಿತಾ ಅಲ್ಲ. ಕಾರ್ಮಿಕ ನೀತಿಗಳ ತಿದ್ದುಪಡಿಗೆ ಕೈಹಾಕಿರುವ ಕೇಂದ್ರ ಸರ್ಕಾರ, ಕಾರ್ಮಿಕರಿಗೆ ಸಿಹಿಸುದ್ದಿ ನೀಡಲು ತೀರ್ಮಾನಿಸಿದೆ. ಈ ನೀತಿ ಶೀಘ್ರವೇ ಜಾರಿಗೊಳ್ಳುವ ನಿರೀಕ್ಷೆ ಇದೆ.

“ಕೆಲಸದ ದಿನಗಳಲ್ಲಿನ ಒತ್ತಡ ಸಡಿಲಗೊಳಿಸಲು ಸರ್ಕಾರ ಮುಂದಾಗಿದೆ. ಹಲವು ಕಂಪನಿಗಳು ವಾರದಲ್ಲಿ 4 ದಿನಗಳ ಕೆಲಸಕ್ಕೆ ಸಮ್ಮತಿಸಿವೆ. ಮತ್ತೆ ಕೆಲವು ಸಂಸ್ಥೆಗಳು ವಾರದಲ್ಲಿ 5 ದಿನಗಳ ಕರ್ತವ್ಯಕ್ಕೆ ಚಿಂತನೆ ನಡೆಸಿವೆ’ ಎಂದು ತಿಳಿಸಿದ್ದಾರೆ.

ಒಪ್ಪಂದ ಕಡ್ಡಾಯ: “ಸಂಸ್ಥೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ವಾರದಲ್ಲಿ 4, 5 ಅಥವಾ 6 ದಿನಗಳು ಕೆಲಸಕ್ಕೆ ಅನುಮತಿ ನೀಡಬಹುದು. ಆದರೆ, ಸಂಸ್ಥೆ ಮತ್ತು ಉದ್ಯೋಗಿಯ ನಡುವೆ ವಾರದಲ್ಲಿ 4 ದಿನಗಳ ಕೆಲಸಕ್ಕೆ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯ ’ ಎಂದು ಹೇಳಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ 4 ಕಾರ್ಮಿಕ ನಿಯಮಾವಳಿಗಳಿಗೆ ಸಂಸತ್‌ ಅನುಮೋದನೆ ನೀಡಿತ್ತು.

ಕರ್ನಾಟಕದಲ್ಲಿ ಹೊಸ ಉದ್ಯೋಗಾವಕಾಶ

ಈ ಕುರಿತ ಕರಡಿನ ಕುರಿತು ಜನವರಿಯಲ್ಲಿ ವಿವಿಧ ರಾಜ್ಯಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು.
“ಕಾರ್ಮಿಕ ನೀತಿಗಳಿಗೆ ಅಂತಿಮ ಅಭಿಪ್ರಾಯ ನೀಡುತ್ತಿದ್ದೇವೆ. ವಿವಿಧ ರಾಜ್ಯಗಳೊಂದಿಗೆ ಹೊಸ ನೀತಿಗಳ ಕುರಿತು ಮಾತುಕತೆ ನಡೆಸಲಾಗಿದೆ. ಬಹುತೇಕ ರಾಜ್ಯಗಳು ನೂತನ ನೀತಿಗಳನ್ನು ದೃಢೀಕರಿಸುತ್ತಿವೆ. ಮತ್ತು ಉತ್ತರ ಪ್ರದೇಶ, ಪಂಜಾಬ್‌, ಮಧ್ಯಪ್ರದೇಶದಂಥ ರಾಜ್ಯಗಳು ಫೆ.10ರೊಳಗೆ ತಮ್ಮ ಅಭಿಪ್ರಾಯ ಸಲ್ಲಿಸಲಿವೆ’

48 ಗಂಟೆ ಮಾತ್ರವೇ ಕೆಲಸ!
ವಾರದಲ್ಲಿ 4 ದಿನಗಳ ಕೆಲಸವಾದರೂ, ವಾರದಲ್ಲಿ ಒಟ್ಟು ಕರ್ತವ್ಯ ಅವಧಿ 48 ಗಂಟೆ ಮೀರಿ ಹೋಗಬಾರದು ಎಂದು ಕೂಡ ಕರಡು ನೀತಿ ಅಭಿಪ್ರಾಯ ಪಟ್ಟಿದೆ. ಅಂದರೆ, ಈಗಿರುವ ನಿತ್ಯದ ಗರಿಷ್ಠ 10.5 ಗಂಟೆ ಕೆಲಸವನ್ನು 12 ಗಂಟೆಗೆ ಏರಿಸುವ ಸಾಧ್ಯತೆಯೂ ನಿಚ್ಚಳವಾಗಿದೆ. 12 ಗಂಟೆ ಅವಧಿಯಲ್ಲಿ ಊಟದ ವಿರಾಮ ಮತ್ತು ಇತರೆ ವಿರಾಮಗಳೂ ಇರಲಿವೆ. ಪ್ರತಿದಿನ 12 ಗಂಟೆ ಕೆಲಸ ಮಾಡಿದವರಿಗೆ 4 ದಿನ ಕೆಲಸ, 10 ಗಂಟೆ ಕೆಲಸ ಮಾಡುವವರಿಗೆ 5 ದಿನ ಕೆಲಸ- ಈ ಹಕ್ಕನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನೂ ನೌಕರರಿಗೆ ಕೊಡಲು ಕರಡು ಒಪ್ಪಿದೆ.

error: Content is protected !!