ಬಾಯಿ ಹುಣ್ಣಿಗೆ ಇಲ್ಲಿದೆ ಮದ್ದು

ಬಾಯಿ ಹುಣ್ಣು ತುಂಬಾ ನೋವುಂಟು ಮಾಡುವುದು ಮಾತ್ರವಲ್ಲದೆ, ಆಹಾರ ಸೇವನೆಗೂ ಇದು ಅವಕಾಶ ನೀಡುವುದಿಲ್ಲ. ಇದು ಕೆಲವೊಮ್ಮೆ ಹಲವಾರು ದಿನಗಳ ಕಾಲ ಬಾಯಿಯಲ್ಲಿ ನೋವುಂಟು ಮಾಡುತ್ತ ಲಿರುತ್ತದೆ. ಇಂತಹ ಸಮಯದಲ್ಲಿ ಇದನ್ನು ನಿವಾರಣೆ ಮಾಡಲು ನೀವು ತುಂಬಾ ಶ್ರಮ ಪಟ್ಟಿರಬಹುದು. ಇದಕ್ಕೆ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿ ಆಗಿ ಬಾಯಿಯ ಹುಣ್ಣು ನಿವಾರಣೆ ಮಾಡುತ್ತದೆ.

ಬಾಯಿಯ ಒಳಭಾಗದಲ್ಲಿ ಇರುವ ಚರ್ಮದಲ್ಲಿ ಈ ಹುಣ್ಣು ಕಾಣಿಸಿಕೊಳ್ಳುವುದು. ಇದಕ್ಕೆ ಮುಖ್ಯವಾಗಿ ಹಲ್ಲಿನ ಪಟ್ಟಿಗಳು, ವಿಟಮಿನ್ ಕೊರತೆ, ನಿದ್ರೆ ಕೊರತೆ ಮತ್ತು ಒತ್ತಡವು ಪ್ರಮುಖ ಕಾರಣವಾಗಿರುವುದು. ಬಾಯಿ ಹುಣ್ಣಿಗೆ ಬಳಸಬಹುದಾದ ಕೆಲವು ಮನೆಮದ್ದುಗಳು ಈ ರೀತಿಯಾಗಿ ಇದೆ.

ಬಾಯಿ ಹುಣ್ಣಿಗೆ ಜೇನುತುಪ್ಪ

ಜೇನುತುಪ್ಪವು ಬಾಯಿ ಹುಣ್ಣಿಗೆ ತುಂಬಾ ಪರಿಣಾಮಕಾರಿ. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಧಿತ ಜಾಗಕ್ಕೆ ಮೊಶ್ಚಿರೈಸರ್ ಒದಗಿಸುವುದು ಮತ್ತು ಒಣಗುವಂತೆ ತಡೆದು ಇದನ್ನು ನಿವಾರಣೆ ಮಾಡುವುದು. ಜೇನುತುಪ್ಪಕ್ಕೆ ಒಂದು ಚಿಟಿಕೆ ಅರಶಿನ ಹಾಕಿಕೊಂಡರೆ ಬಾಯಿ ಅಲ್ಸರ್ ನಿವಾರಣೆ ಮಾಡಬಹುದು.ನೀವು ದಿನದಲ್ಲಿ 3-4 ಸಲ ಹಚ್ಚಿದರೆ ಅದು ಫಲಿತಾಂಶ ನೀಡಲಿದೆ.

 

ತೆಂಗಿನ ಎಣ್ಣೆ


ಉರಿಯೂತ ಶಮನಕಾರಿ, ಶಿಲೀಂಧ್ರ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿರುವ ತೆಂಗಿನ ಎಣ್ಣೆಯು ತುಂಬಾ ಪರಿಣಾಮಕಾರಿ ಆಗಿರುವುದು. ಇದು ನೋವಿಗೆ ತಕ್ಷಣವೇ ಶಮನ ನೀಡುವುದು. ಉತ್ತಮ ಫಲಿತಾಂಶ ಪಡೆಯಲು ನೀವು ಹಲವಾರ ಸಲ ಇದನ್ನು ಹಚ್ಚಿಕೊಳ್ಳಬೇಕು. ಘನ ತೆಂಗಿನ ಎಣ್ಣೆಯನ್ನು ಬಾಧಿತ ಜಾಗಕ್ಕೆ ಹಚ್ಚಿಬಿಡಿ. ಇದು ನೋವಿಗೆ ಶಮನ ನೀಡುವುದು.

 

ಅಲೋವೆರಾ ಜ್ಯೂಸ್


ಶಮನಕಾರಿ ಗುಣ ಹೊಂದಿರುವಂತಹ ಅಲೋವೆರಾ ಜ್ಯೂಸ್ ಬಾಯಿಯಲ್ಲಿ ಮೂಡುವಂತಹ ಹುಣ್ಣಿನಿಂದ ಶಮನ ನೀಡುವುದು ಮತ್ತು ಇದನ್ನು ನಿಯಮಿತವಾಗಿ ಬಳಸಿಕೊಳ್ಳಬೇಕು. ಇದು ಹುಣ್ಣನ್ನು ವೇಗವಾಗಿ ಗುಣಪಡಿಸುವುದು ಮತ್ತು ನೋವು ನಿವಾರಿಸುವುದು. ಅಲೋವೆರಾ ಜ್ಯೂಸ್ ನ್ನು ಬಾಯಿ ಮುಕ್ಕಳಿಸಿಕೊಂಡರೆ ಆಗ ಬಾಯಿ ಹುಣ್ಣಿನಿಂದ ಪರಿಹಾರ ಪಡೆಯಬಹುದು.ಅಲೋವೆರಾ ಜ್ಯೂಸ್ ಇಲ್ಲದೆ ಇದ್ದರೆ ಅದರ ಲೋಳೆ ಹಚ್ಚಿಕೊಳ್ಳಿ.

 

ಬಾಯಿಗೆ ಹುಣ್ಣಿಗೆ ಆಪಲ್ ಸೀಡರ್ ವಿನೇಗರ್


ಬಾಯಿ ಹುಣ್ಣಿಗೆ ಆಪಲ್ ಸೀಡರ್ ವಿನೇಗರ್ ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ. ಇದರಲ್ಲಿ ಇರುವಂತಹ ಆಮ್ಲೀಯ ಗುಣವು ಹುಣ್ಣು ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ಕೊಲ್ಲುವುದು. ವಿನೇಗರ್ ನಿಂದ ಬಾಯಿ ಮುಕ್ಕಳಿಸಿಕೊಳ್ಳಿ. ಇದು ನೋವಿನಿಂದ ಪರಿಹಾರ ನೀಡುವುದು ಮತ್ತು ಹುಣ್ಣನ್ನು ಬೇಗನೆ ಗುಣಪಡಿಸುವುದು.ಬಾಯಿ ಮುಕ್ಕಳಿಸುವ ಮೊದಲು ವಿನೇಗರ್ ಗೆ ನೀರು ಹಾಕಿ.

ಉಪ್ಪು ನೀರು


ಬಾಯಿಯ ಹಲವಾರು ಸಮಸ್ಯೆಗಳ ನಿವಾರಣೆಗೆ ಉಪ್ಪು ನೀರನ್ನು ಬಳಸಲಾಗುತ್ತದೆ. ಇದು ಹುಣ್ಣು ನಿವಾರಣೆಗೆ ತುಂಬಾ ಪರಿಣಾಮಕಾರಿ ಮತ್ತು ಬ್ಯಾಕ್ಟೀರಿಯಾ ಕಡಿಮೆ ಮಾಡುವುದು. ಉಸಿರಿನ ದುರ್ವಾಸನೆ ತಡೆಯುವಲ್ಲಿಯೂ ಇದು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ.ದಿನದಲ್ಲಿ ಎರಡು ಸಲ ನೀವು ಇದರಿಂದ ಬಾಯಿ ಮುಕ್ಕಳಿಸಿದರೆ ಪರಿಣಾಮಕಾರಿ.

 

ಬಾಯಿ ಹುಣ್ಣಿಗೆ ಟೂಥ್ ಪೇಸ್ಟ್


ಟೂಥ್ ಪೇಸ್ಟ್ ನಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ ಮತ್ತು ಇದು ಹುಣ್ಣು ಉಂಟು ಮಾಡುವಂತಹ ಬ್ಯಾಕ್ಟೀರಿಯಾ ನಿವಾರಣೆ ಮಾಡುವುದು. ಬಾಧಿತ ಜಾಗಕ್ಕೆ ಟೂಥ್ ಪೇಸ್ಟ್ ಹಚ್ಚಿಕೊಳ್ಳಿ. ಇದು ಆ ಭಾಗವನ್ನು ತಂಪಾಗಿಸುವುದು.ದಿನದಲ್ಲಿ ಒಂದು ಸಲ ನೀವು ಬಾಯಿಗೆ ಟೂಥ್ ಪೇಸ್ಟ್ ಹಚ್ಚಿಕೊಳ್ಳಿ.

 

ಬಾಯಿ ಹುಣ್ಣಿಗೆ ಬೆಳ್ಳುಳ್ಳಿ


ಸೂಕ್ಷ್ಮಾಣು ವಿರೋಧಿ ಗುಣ ಹೊಂದಿರುವಂತಹ ಬೆಳ್ಳುಳ್ಳಿಯು ನೋವುಂಟು ಮಾಡುವಂತಹ ಬಾಯಿಯ ಹುಣ್ಣನ್ನು ಪರಿಣಾಮಕಾರಿ ಆಗಿ ನಿವಾರಣೆ ಮಾಡುವುದು. ಇದರಲ್ಲಿ ಅಲಿಸಿನ್ ಎನ್ನುವಂತಹ ಅಂಶವಿದ್ದು, ಇದು ನೋವನ್ನು ನಿವಾರಣೆ ಮಾಡಿ, ಹುಣ್ಣಿನ ಗಾತ್ರವನ್ನು ಕೂಡ ಕಡಿಮೆ ಮಾಡುವುದು. ದಿನದಲ್ಲಿ ಎರಡು ಸಲ ಬೆಳ್ಳುಳ್ಳಿಯನ್ನು ಉಜ್ಜಿಕೊಂಡರೆ ಆಗ ಹುಣ್ಣು ಪರಿಣಾಮಕಾರಿ ಆಗಿ ನಿವಾರಣೆ ಆಗುತ್ತದೆ.

error: Content is protected !!