ಭಾರತೀಯ ವಾಯುಪಡೆಯ ಗ್ರೂಪ್ ‘C’ ನೇಮಕಾತಿ 2025 – ದೇಶಾದ್ಯಾಂತ 153 ಹುದ್ದೆಗಳ ಭರ್ತಿ
IAF Group C Recruitment 2025 – ಭಾರತೀಯ ವಾಯುಪಡೆ (IAF) ತನ್ನ 2025 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ದೇಶದಾದ್ಯಾಂತ 153 ಗ್ರೂಪ್ ‘C’ ನಾಗರಿಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಇದು ಕೇಂದ್ರ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದ್ದು, 16 ಜೂನ್ 2025ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗಳು ನೇರ ನೇಮಕಾತಿ ವಿಧಾನದಲ್ಲಿ ಭರ್ತಿಯಾಗಲಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಮೊದಲಾದ ಎಲ್ಲ ಮಾಹಿತಿ ಅಧಿಸೂಚನೆಯ ಮೂಲಕ ತಿಳಿದುಕೊಳ್ಳುವುದು ಅತ್ಯಗತ್ಯ.
ಉದ್ಯೋಗ ವಿವರಗಳು | |
ಇಲಾಖೆ ಹೆಸರು | ಭಾರತೀಯ ವಾಯುಪಡೆ |
ಹುದ್ದೆಗಳ ಹೆಸರು | ಗ್ರೂಪ್ ‘C’ ನಾಗರಿಕ ಹುದ್ದೆಗಳು |
ಒಟ್ಟು ಹುದ್ದೆಗಳು | 153 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ (Online) |
ಉದ್ಯೋಗ ಸ್ಥಳ – | ಭಾರತಾದ್ಯಂತ |
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಬಿನ್ನವಾಗಿ ಅರ್ಹತೆ ಹೊಂದಿರಬೇಕು. ಲೋವರ್ ಡಿವಿಷನ್ ಕ್ಲರ್ಕ್ ಮತ್ತು ಹಿಂದಿ ಟೈಪಿಸ್ಟ್ ಹುದ್ದೆಗಳಿಗೆ ಅಭ್ಯರ್ಥಿಗಳು ಕನಿಷ್ಠ 12ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು ಮತ್ತು ಟೈಪಿಂಗ್ ಕೌಶಲ್ಯ ಹೊಂದಿರಬೇಕು. ಕುಕ್ ಹುದ್ದೆಗೆ 10ನೇ ತರಗತಿ ಜೊತೆಗೆ ಕೇಟರಿಂಗ್ ಬಗ್ಗೆ ತರಬೇತಿಯು ಅಗತ್ಯವಿದೆ. ಸ್ಟೋರ್ ಕೀಪರ್ ಹುದ್ದೆಗೆ 12ನೇ ತರಗತಿಯು ಬೇಕಾಗುತ್ತದೆ.
ಕಾರ್ಪೆಂಟರ್ ಹಾಗೂ ಪೇಂಟರ್ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿ ಸಂಬಂಧಿತ ಕ್ಷೇತ್ರದಲ್ಲಿ ತರಬೇತಿ ಹೊಂದಿರಬೇಕು. ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS), ಮೆಸ್ ಸ್ಟಾಫ್, ಲಾಂಡ್ರಿಮ್ಯಾನ್ ಹಾಗೂ ಹೌಸ್ ಕೀಪಿಂಗ್ ಸ್ಟಾಫ್ ಹುದ್ದೆಗಳಿಗೆ ಕನಿಷ್ಠ 10ನೇ ತರಗತಿ ಪೂರೈಸಿರಬೇಕು.
ವಲ್ಕನೈಸರ್ ಹುದ್ದೆಗೆ 10ನೇ ತರಗತಿ ಜೊತೆಗೆ ಸಂಬಂಧಿತ ತರಬೇತಿಯು ಅಗತ್ಯವಿದ್ದು, ಸಿವಿಲಿಯನ್ ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ ಡ್ರೈವರ್ ಹುದ್ದೆಗೆ 10ನೇ ತರಗತಿಗೆ ಸೇರ್ಪಡೆವಾಗಿ ಮಾನ್ಯ ಚಾಲನಾ ಪರವಾನಗಿಯು ಅಗತ್ಯವಿದೆ.
ವಯೋಮಿತಿ
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 25 ವರ್ಷ (16 ಜೂನ್ 2025ರ ವೇಳೆಗೆ)
ವಯೋ ಸಡಿಲಿಕೆ:
ಎಸ್ಸಿ/ಎಸ್ಟಿ: 5 ವರ್ಷ
ಓಬಿಸಿ: 3 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ: 10 ರಿಂದ 15 ವರ್ಷ
ವೇತನ ಶ್ರೇಣಿ
ಎಲ್ಲಾ ಹುದ್ದೆಗಳ ವೇತನವನ್ನು ಕೇಂದ್ರ ಸರ್ಕಾರಿ ಮಾದರಿಯ ಪ್ರಕಾರ ನಿಗದಿಪಡಿಸಲಾಗಿದ್ದು, ಸಮ್ಮತಿದ ಪ್ರಮಾಣದ ಗ್ರೇಡ್ ವೇತನ ಮತ್ತು ಇತರ ಭತ್ಯೆಗಳು ಅನ್ವಯವಾಗುತ್ತವೆ.
ಅರ್ಜಿ ಸಲ್ಲಿಕೆ ವಿಧಾನ
ಈ ಹುದ್ದೆಗಳಿಗಾಗಿ ಆಫ್ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ, ನಿಗದಿತ ವಿಳಾಸಕ್ಕೆ 16-06-2025ರ ಒಳಗೆ ತಲುಪುವಂತೆ ಕಳುಹಿಸಬೇಕು.
ಆಯ್ಕೆ ವಿಧಾನ
ಅಭ್ಯರ್ಥಿಗಳು ಕೆಳಗಿನ ಹಂತಗಳಲ್ಲಿ ಪಂಗೊಳ್ಳಬೇಕಾಗುತ್ತದೆ:
ಲಿಖಿತ ಪರೀಕ್ಷೆ
ಕೌಶಲ್ಯ ಅಥವಾ ಪ್ರಾಯೋಗಿಕ ಪರೀಕ್ಷೆ
ದೈಹಿಕ ಪರೀಕ್ಷೆ (ಪರಿಸ್ಥಿತಿ ಅನುಸಾರ)
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅಂತಿಮ ಸಂದರ್ಶನ
ಅರ್ಜಿ ಶುಲ್ಕ
ಅಧಿಕೃತ ಅಧಿಸೂಚನೆಯ ಪ್ರಕಾರ, ಶ್ರೇಣಿಗೆ ಅನುಗುಣವಾಗಿ ಅರ್ಜಿ ಶುಲ್ಕ ವಿಧಿಸಲಾಗಿದ್ದು, ಕೆಲ ಶ್ರೇಣಿಗಳಿಗೆ ಶುಲ್ಕದಿಂದ ವಿನಾಯಿತಿ ಇರುತ್ತದೆ.
ಪ್ರಮುಖ ದಿನಾಂಕಗಳು | |
---|---|
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 17 ಮೇ 2025 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 16 ಜೂನ್ 2025 |
ಪ್ರಮುಖ ಲಿಂಕುಗಳು | |
ನೋಟಿಫಿಕೇಶನ್ (ಅಧಿಸೂಚನೆ): | ಇಲ್ಲಿ ಕ್ಲಿಕ್ ಮಾಡಿ |
ಆನ್ಲೈನ್ ಅರ್ಜಿ ಲಿಂಕ್: | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ: | ಇಲ್ಲಿ ಕ್ಲಿಕ್ ಮಾಡಿ |
ನಮ್ಮ ಯೂಟ್ಯೂಬ್ ಚಾನೆಲ್ ನೋಡಿ: | ಇಲ್ಲಿ ಕ್ಲಿಕ್ ಮಾಡಿ |