ಎಸೆಸೆಲ್ಸಿ ಪಾಸ್ ಆದವರಿಗೆ ಕೃಷಿ ಇಲಾಖೆಯಲ್ಲಿ 641 ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ : IARI Technician Jobs 2021

Telegram Group

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು (IARI Technician Jobs 2021) ಟೆಕ್ನೀಷಿಯನ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.

ಒಟ್ಟು ಟೆಕ್ನೀಷಿಯನ್ ಹುದ್ದೆಗಳು: 641

ವರ್ಗಾವಾರು ಹುದ್ದೆಗಳ ವಿವರ
ಸಾಮಾನ್ಯ: 286
ಆರ್ಥಿಕವಾಗಿ ಹಿಂದುಳಿದ ವರ್ಗ: 61
ಪರಿಶಿಷ್ಟ ಜಾತಿ: 93
ಪರಿಶಿಷ್ಟ ಪಂಗಡ: 68
ಇತರೆ ಹಿಂದುಳಿದ ವರ್ಗ (ಎನ್‌ಸಿಎಲ್): 133

ವಿದ್ಯಾರ್ಹತೆ : 10ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.(ಎಸ್‌ಎಸ್‌ಎಲ್‌ಸಿ / 10th)

ವಯೋಮಿತಿ:
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಎಂದಿನಂತೆ ವಯೋಸಡಿಲಿಕೆ ಕಲ್ಪಿಸಲಾಗಿದೆ.

 

 

ಅರ್ಜಿ ಶುಲ್ಕ
ಸಾಮಾನ್ಯ / ಒಬಿಸಿ / ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ರೂ.1000.
ಮಹಿಳಾ / ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.300.

ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂಡಿಯನ್‌ ಅಗ್ರಿಕಲ್ಚರಲ್ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಅಧಿಕೃತ ವೆಬ್‌ಸೈಟ್‌ https://www.iari.res.in/ ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿ ಸಹ ಅರ್ಜಿ ಸಲ್ಲಿಸಬಹುದು.

 

 

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 18-12-2021
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 10-01-2022 ರ ರಾತ್ರಿ 11-55 ರವರೆಗೆ.
ಆನ್‌ಲೈನ್‌ ಪರೀಕ್ಷೆ ದಿನಾಂಕ 2022 ರ ಜನವರಿ 25 ರಿಂದ ಫೆಬ್ರುವರಿ 05 ರವರೆಗೆ.
ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸುವ ವೇಳೆ ಗರಿಷ್ಠ 5 ಸಿಟಿಗಳನ್ನು ಪರೀಕ್ಷೆ ಕೇಂದ್ರಗಳಾಗಿ ಆಯ್ಕೆ ಮಾಡಿಕೊಳ್ಳಬಹುದು.

Website
Download Notification PDF
Telegram Group
error: Content is protected !!