ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕನಸು ಹೊಂದಿದ ರಾಜ್ಯದ ಅಭ್ಯರ್ಥಿಗಳಿಗೊಂದು ಸುವರ್ಣಾವಕಾಶ ಒದಗಿ ಬಂದಿದ್ದು, ಕೋಲಾರ ಜಿಲ್ಲೆಯಲ್ಲಿ ಭಾರತೀಯ ಸೇನಾ ನೇಮಕಾತಿ ರ್ಯಾಲಿ ಆಯೋಜಿಸಲಾಗಿದ್ದು, ಈ ಕುರಿತು ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.
ಈಗಾಗಲೇ ಈ ನೇಮಕಾತಿ ರ್ಯಾಲಿಯಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ನೇಮಕಾತಿ ರ್ಯಾಲಿಯು ಕರ್ನಾಟಕದ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳ ಅಭ್ಯರ್ಥಿಗಳಿಗೆ ಅನ್ವಯಿಸಲಿದೆ.
ಹುದ್ದೆಗಳ ವಿವರಗಳು :
* ಸೋಲ್ಜರ್ ಜನರಲ್ ಡ್ಯೂಟಿ
* ಸೋಲ್ಜರ್ ಟೆಕ್ನಿಕಲ್
* ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಅಸಿಸ್ಟೆಂಟ್ Nursing Assistant Veterinary
* ಸೋಲ್ಜರ್ Clerk/Store Keeper/ Technical/ Inventory Management
* ಸೋಲ್ಜರ್ ಟ್ರೇಡ್ ಮ್ಯಾನ್ 10th pass
* ಸೋಲ್ಜರ್ ಟ್ರೇಡ್ ಮ್ಯಾನ್ 8th pass
– ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 05 ರಿಂದ 20 ಜನವರಿ 2021 ರವರೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
– ರ್ಯಾಲಿ ನಡೆಯುವ ದಿನಾಂಕಕ್ಕೆ ಒಂದು ವಾರ ಮೊದಲು ರ್ಯಾಲಿಗಾಗಿ ಅಡ್ಮಿಟ್ ಕಾರ್ಡ್‌ಗಳನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವದು.
– ಈ ರ್ಯಾಲಿಯು ವಿಶ್ವೇಶ್ವರಯ್ಯ ಮೈದಾನ, ಕೋಲಾರ ಇಲ್ಲಿ ದಿನಾಂಕ 07 ಮೇ 2021 ರಿಂದ 12 ಮೇ 2021 ರವರೆಗೆ ನಡೆಸಲಾಗುವದು.
– ಈ ರ್ಯಾಲಿಯಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ದಿನಾಂಕ 13 ಮಾರ್ಚ್ 2021 ರಿಂದ 26 ಏಪ್ರಿಲ್ 2021 ರವರೆಗೆ ಆನ್ಲೈನ್ ನೋಂದಾಯಿಸಕೊಳ್ಳಬಹುದಾಗಿದೆ.
ಆಯ್ಕೆ ವಿಧಾನ:
– ಹುದ್ದೆಗೆ ಅನುಸಾರವಾಗಿ ದೈಹಿಕ ಪರೀಕ್ಷೆ, ಮೆಡಿಕಲ್ ಟೆಸ್ಟ್ ಮತ್ತು ಸಾಮರ್ಥ್ಯ ಪರೀಕ್ಷೆಯ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ವಿದ್ಯಾರ್ಹತೆ:
– ಹುದ್ದೆಗಳಿಗೆ ಅನುಸಾರವಾಗಿ 8 ನೇ ತರಗತಿ, ಎಸ್,ಎಸ್, ಎಲ್, ಸಿ ಮತ್ತು ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವಯೋಮಿತಿ:
* ಸೋಲ್ಜರ್ ಜನರಲ್ ಡ್ಯೂಟಿ: 17 ½ ರಿಂದ 21 ವರ್ಷ ( ಅಭ್ಯರ್ಥಿಗಳು 01 Oct 1998 ರಿಂದ 01 Apr 2002 ರ ನಡುವೆ ಜನಿಸಿರಬೇಕು)
* ಉಳಿದ ಎಲ್ಲ ಹುದ್ದೆಗಳಿಗೆ : 17 ½ ರಿಂದ 23 ವರ್ಷ ( ಅಭ್ಯರ್ಥಿಗಳು 01 Oct 1996 ರಿಂದ 01 Apr 2002 ರ ನಡುವೆ ಜನಿಸಿರಬೇಕು)
– ಈ ನೇಮಕಾತಿಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕನ್ನು ಆಧರಿಸಿ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಬಹುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 13 ಮಾರ್ಚ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಎಪ್ರಿಲ್ 2021