ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಕರ್ನಾಟಕ ಅಂಚೆ ಬ್ಯಾಂಕ್ ನೇಮಕಾತಿ ಅಧಿಸೂಚನೆ 2022 – Indian Post Payment Bank Recruitment 2022

ಇಂಡಿಯನ್ ಪೋಸ್ಟ್‌ ಪೇಮೆಂಟ್ ಬ್ಯಾಂಕ್ ನೇಮಕಾತಿ ಅಧಿಸೂಚನೆ 2022

Indian Post Payment Bank Recruitment 2022: ಇಂಡಿಯನ್ ಪೋಸ್ಟ್‌ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ನಲ್ಲಿ ಅಗತ್ಯವಿರುವ ಗ್ರಾಮೀಣ ಡಾಕ್ ಸೇವಕ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು:ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್
ಹುದ್ದೆಗಳ ಹೆಸರು:ಗ್ರಾಮೀಣ ಡಾಕ್ ಸೇವಕ್ ಎಕ್ಸಿಕ್ಯೂಟಿವ್
ಒಟ್ಟು ಹುದ್ದೆಗಳು 650 ( ಕರ್ನಾಟಕಕ್ಕೆ 42 ಹುದ್ದೆಗಳು )
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ 

 

ವಿದ್ಯಾರ್ಹತೆ:
ಪೋಸ್ಟ್‌ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯ / ಶಿಕ್ಷಣ ಸಂಸ್ಥೆಗಳಿಂದ ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ವೇತನಶ್ರೇಣಿ:
ಪೋಸ್ಟ್‌ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30,000. ವೇತನ ನಿಗದಿಮಾಡಲಾಗಿದೆ.

ಅರ್ಜಿ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.700/- ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.

ಆಯ್ಕೆ ವಿಧಾನ 
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡುತ್ತದೆ. ಆಯಾ ರಾಜ್ಯದ ಅಧಿಕೃತ ಭಾಷೆಯ ಸಾಮರ್ಥ್ಯ ತಿಳಿಯಲು ಭಾಷಾ ಪರೀಕ್ಷೆ ನಡೆಸಲಾಗುತ್ತದೆ.

ಅನುಭವ:
ಪೋಸ್ಟ್‌ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ನೇಮಕಾತಿ ಅಧಿಸೂಚನೆಯ ಪ್ರಕಾರ ಕನಿಷ್ಠ 2 ವರ್ಷ ಗ್ರಾಮೀಣ ಡಾಕ್ ಸೇವಕ್‌ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರಬೇಕು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 10-05-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-05-2022
  
ಪ್ರಮುಖ ಲಿಂಕುಗಳು 
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
close button