ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಉದ್ಯೋಗ ಮೇಳ- ಎಸೆಸೆಲ್ಸಿ, ಪಿಯುಸಿ, ಐಟಿಐ, ಪದವಿ ಆದವರಿಗೆ

ಚಿತ್ರದುರ್ಗದಲ್ಲಿ (Chitradurga) ಉದ್ಯೋಗ ಬಯಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶ. ನಿಮ್ಮ ಊರಿನಲ್ಲೇ ನಡೆಯಲಿದೆ ಉದ್ಯೋಗ ಮೇಳ ನಡೆಯುತ್ತಿದೆ. ನಗರ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ತಿಂಗಳ ನವೆಂಬರ್ 4 ರಂದು ಉದ್ಯೋಗ ಮೇಳ (Job Fair) ಜರುಗಲಿದ್ದು ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗುವ ಮೂಲಕ ಉದ್ಯೋಗ ಪಡೆದುಕೊಳ್ಳಬಹುದು. ಕಲರ್ಸ್​ ಟೆಕ್ನಾಲಜಿ ಕಂಪನಿಯು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.

ಜಿಲ್ಲಾ ಪ್ರೋಗ್ರಾಂ ಪ್ಲಾನಿಂಗ್ ಆಫೀಸರ್ಸ್, ವೀಭಾಗೀಯ ಪ್ರೋಗ್ರಾಂ ಪ್ಲಾನಿಂಗ್ ಆಫೀಸರ್‌, ಟೆಲಿಕಾಲರ್ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವಿದ್ಯಾರ್ಹತೆ:
60 ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಬಿಎ, ಬಿಕಾಂ, ಬಿಸಿಎ, ಬಿಎಸ್‌ಸಿ, ಡಿಇಡಿ, ಬಿಇಡಿ, ಎಂಎ, ಎಂ.ಕಾಂ, ಎಂಎಸ್‌ಸಿ, ಎಂಸಿಎ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ 6 ರಿಂದ 16 ಸಾವಿರ ವೇತವನ್ನು ನಿಗದಿಪಡಿಸಲಾಗಿದೆ. ಡಿವಿಜನ್ ಪ್ರೋಗ್ರಾಮಿಂಗ್ ಪ್ಲಾನಿಂಗ್ ಆಫೀಸರ್ ಹುದ್ದೆಗೆ ಬಿಎ, ಬಿಕಾಂ, ಬಿಸಿಎ, ಬಿಎಸ್‌ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಎರಡು ಹುದ್ದೆಗಳು ಖಾಲಿ ಇವೆ. ಇವರಿಗೆ 16 ಸಾವಿರದಿಂದ 30 ಸಾವಿರ ರೂಪಾಯಿಗಳವರೆಗೆ ವೇತನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಂದರ್ಶನ ವಿಧಾನ:
ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ತಮ್ಮ ವಿವರ ಮತ್ತು ವಿದ್ಯಾರ್ಹತೆ ದಾಖಲೆಯೊಂದಿಗೆ ನಿಗದಿತ ಸಂದರ್ಶನ ದಿನಾಂಕದಂದು ಈ ಕೆಳಗೆ ನೀಡಲಾದ ಮಾಹಿತಿ ಅನುಸಾರ ಸಂದರ್ಶನ ನೀಡಬಹುದು. ಆಧಾರ್ ಕಾರ್ಡ್​, ಮಾರ್ಕ್ಸ್ ಕಾರ್ಡ್​ ಮತ್ತು ರೆಸ್ಯೂಮ್​, ತಮ್ಮ ಬಯೋಡೇಟಾ, ವಿದ್ಯಾರ್ಹತೆಯ ಪ್ರಮಾಣ ಪತ್ರಗಳು, ಭಾವಚಿತ್ರಗಳನ್ನು ಸಂದರ್ಶನಕ್ಕೆ ತರಬೇಕು.

ಸಂಬಳ:
ಹುದ್ದೆಗೆ ತಕ್ಕ ಸಂಬಳ ನೀಡಲಾಗುತ್ತದೆ. ನಿಮ್ಮ ಹುದ್ದೆಗೆ ಅನುಸಾರವಾಗಿ ಶಿಕ್ಷಕರ ಹುದ್ದೆಗೆ 6 ಸಾವಿರದಿಂದ 16 ಸಾವಿರ ವೇತನ ನಿಗದಿಪಡಿಸಲಾಗಿದೆ. ಇನ್ನಿತರ ಹುದ್ದೆಗಳಿಗೆ 16 ಸಾವಿರದಿಂದ 30 ಸಾವಿರ ನಿಗದಿ ಪಡಿಲಾಗಿದೆ.

ಸಂಪರ್ಕ ಸಂಖ್ಯೆ:
ಹೆಚ್ಚಿನ ಮಾಹಿತಿಯನ್ನು ನೀವು ಈ ನಂಬರ್​ಗೆ ಕರೆ ಮಾಡುವ ಮೂಲಕ ತಿಳಿದುಕೊಳ್ಳಬಹುದು. ದೂರವಾಣಿ ಸಂಖ್ಯೆ
7022459064,
8310785143,
8105619020ಕ್ಕೆ ಕರೆ ಮಾಡಿ.

 

close button