ಉದ್ಯೋಗ ಮೇಳಕ್ಕೆ ಹೋಗಿ ಉದ್ಯೋಗ ಪಡೆಯಿರಿ
Job Fair Vijayapura – ವಿಜಯಪುರ: ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವಿಜಯಪುರ, ವತಿಯಿಂದ ಇದೇ ತಿಂಗಳು ನವೆಂಬರ್ 25 ರಂದು ಅಥಣಿ ರಸ್ತೆಯಲ್ಲಿರುವ ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನೀಯರಿಂಗ್ ಪದವಿ ಹಾಗೂ ಯಾವುದೇ ಸ್ನಾತಕೋತ್ತರ ಪದವಿ (ವಿಶೇಷ ಚೇತನರ ಸಹಿತ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗ ಮೇಳಕ್ಕೆ ಆಗಮಿಸಿ ಭಾಗವಹಿಸಬಹುದಾಗಿದ್ದು, ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ. Job Fair Vijayapura
ಉದ್ಯೋಗ ಸುದ್ದಿ – ಹಾಲು ಒಕ್ಕೂಟದಲ್ಲಿ (ಕೆಎಂಎಫ್ ) ನಲ್ಲಿ ಖಾಲಿ ಹುದ್ದೆಗಳ ಭರ್ತಿ
ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ನಿರುದ್ಯೋಗ ಯುವಕ, ಯುವತಿಯರಿದ್ದು ಅವರಿಗೆ ಈ ಮಿನಿ ಉದ್ಯೋಗ ಮೇಳ ಸಹಕಾರಿಯಾಗಲಿದೆ. ಹೌದು, ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ಪದವಿ ಹಾಗೂ ಯಾವುದೇ ಸ್ನಾತಕೋತ್ತರ ಪದವಿ ಪಡೆದವರು ಸೇರಿದಂತೆ ವಿಕಲಚೇತನರು ಸಹ ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಿ ತಮಗಿಷ್ಟವಾದ ಕೆಲಸವನ್ನ ಪಡೆದುಕೊಳ್ಳಬಹುದಾಗಿದೆ. Job Fair Vijayapura
ವಿಳಾಸ ಉದ್ಯೋಗಾಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ವಿಜಯಪುರ
ದೂರವಾಣಿ ಸಂಖ್ಯೆ 08352-250383, ಮೊ : 9945000793 ಅಥವಾ 9620095270 ಅಥವಾ 9110856771 ಅಥವಾ 9900607080 ಅಥವಾ 9901497747
ಯಾರನ್ನು ಸಂಪರ್ಕಿಸಬೇಕು?
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ – 08352-250383, ಮೊ : 9945000793, 9620095270, 9110856771, 9900607080, 9901497747 ಅಥವಾ ಖುದ್ದಾಗಿ ವಿಜಯಪುರ ನಗರದಲ್ಲಿರುವ ಉದ್ಯೋಗಾಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ವಿಜಯಪುರ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.