339 ಕರ್ನಾಟಕ ಅರಣ್ಯ ರಕ್ಷಕ ಹುದ್ದೆಗಳಿಗೆ 2ನೇ ಅಂತಿಮ ಆಯ್ಕೆಪಟ್ಟಿ ಬಿಡುಗಡೆ

2020ನೇ ಸಾಲಿನ ಮಾರ್ಚ್‌ನಲ್ಲಿ ಹೊರಡಿಸಲಾಗಿದ್ದ 339 ಅರಣ್ಯ ರಕ್ಷಕರ ನೇಮಕಾತಿ ಕುರಿತು ಎರಡನೇ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಹಿಂದೆಯೇ ಮೊದಲ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿತ್ತು. ಆಗ ನಿರ್ದಿಷ್ಟ ಸಂಖ್ಯೆಯ ಅಭ್ಯರ್ಥಿಗಳ ಕೊರತೆ ಇತ್ತು. ಇದೀಗ 28 ಅಭ್ಯರ್ಥಿಗಳನ್ನು ಒಳಗೊಂಡ ಎರಡನೇ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.

ಈ ಮೇಲಿನ ಸದರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಎರಡನೇ ಅಂತಿಮ ಆಯ್ಕೆಪಟ್ಟಿಯನ್ನು ಅರಣ್ಯ ಇಲಾಖೆ ಹುದ್ದೆಗಳ ನೇಮಕಾತಿ ಪೋರ್ಟಲ್‌ನಲ್ಲಿ ಚೆಕ್‌ ಮಾಡಬಹುದು.

339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಸಂಬಂಧ ವೃತ್ತಾವಾರು ಪ್ರತ್ಯೇಕ 1:1 ರಂತೆ 36 ಅಭ್ಯರ್ಥಿಗಳ ಎರಡನೇ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸದರಿ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಸಂಬಂಧಿಸಿದ ವೃತ್ತ ವ್ಯಾಪ್ತಿಯಲ್ಲಿ ಮೂಲ ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಅರ್ಹತಾ ಪರೀಕ್ಷೆಯನ್ನು ನಡೆಸಲಾಗಿತ್ತು. ಇದರಲ್ಲಿ 28 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ವೃತ್ತವಾರು ಆಯ್ಕೆಯಾದ ಅಭ್ಯರ್ಥಿಗಳ ಎರಡನೇ ಅಂತಿಮ ಆಯ್ಕೆಪಟ್ಟಿ ಈಗ ಬಿಡುಗಡೆ ಮಾಡಲಾಗಿದೆ.

ಆಯ್ಕೆಪಟ್ಟಿ ಚೆಕ್ ಮಾಡುವ ವಿಧಾನ
ಕರ್ನಾಟಕ ಅರಣ್ಯ ಇಲಾಖೆ ಅಧಿಕೃತ ವೆಬ್‌ಸೈಟ್‌ https://kfdrecruitment.in/ ಗೆ ಭೇಟಿ ನೀಡಿ.
ಓಪನ್ ಆದ ಪೇಜ್‌ನಲ್ಲಿ ‘FG- 2ನೇ ಅಂತಿಮ ಆಯ್ಕೆಪಟ್ಟಿ ಎಂದಿರುವಲ್ಲಿ ಕ್ಲಿಕ್ ಮಾಡಿ.
ನಂತರ ಓಪನ್ ಆಗುವ ಪೇಜ್‌ನಲ್ಲಿ ಆಯ್ಕೆಪಟ್ಟಿಯನ್ನು ಚೆಕ್‌ ಮಾಡಬಹುದು.
ಅಭ್ಯರ್ಥಿಗಳು ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿ ಸಹ ಎರಡನೇ ಆಯ್ಕೆಪಟ್ಟಿ ಚೆಕ್‌ ಮಾಡಬಹುದು.

error: Content is protected !!