10ನೇ ಪಾಸಾದವರಿಗೆ ಗ್ರೂಪ್ ಡಿ ಖಾಲಿ ಹುದ್ದೆಗಳ ಭರ್ತಿ

 

Karnataka High Court Recruitment 2022: ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅಗತ್ಯವಿರುವ ಗ್ರೂಪ್-ಡಿ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು: ಕರ್ನಾಟಕ ಉಚ್ಚ ನ್ಯಾಯಾಲಯ
ಹುದ್ದೆಗಳ ಹೆಸರು: ಗ್ರೂಪ್-ಡಿ [ಜವಾನ, ಕಾವಲುಗಾರ, ಸ್ವೀಪರ್, ಜವಾನ (ಹೌಸ್ ಕೀಪಿಂಗ್)]
ಒಟ್ಟು ಹುದ್ದೆಗಳು  150
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ 

ವಿದ್ಯಾರ್ಹತೆ:
ಅಭ್ಯರ್ಥಿಯು ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.

ವೇತನಶ್ರೇಣಿ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 19,900 – ರೂ. 63,200 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಕ್ಕೆ ಸೇರಿದ ಹಾಗೂ ದೈಹಿಕ ಅಂಗವಿಕಲತೆ ಹೊಂದಿರುವ ಅಭ್ಯರ್ಥಿಗಳು ರೂ. 100, ಉಳಿದ ಅಭ್ಯರ್ಥಿಗಳು ರೂ.200 ಪಾವತಿಸಬೇಕು.

ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು ಅಥವಾ ಉಚ್ಚ ನ್ಯಾಯಾಲಯದ ವೆಬ್‌ಸೈಟ್ ನಿಂದ ಚಲನ್ ಪ್ರಿಂಟ್ ತೆಗೆದು ಎಸ್.ಬಿ.ಐ ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ಶುಲ್ಕ ಪಾವತಿಸಬಹುದು.

ಆಯ್ಕೆ ವಿಧಾನ:
10ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳ ಶೇಕಡಾವಾರು ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು. ಸಂದರ್ಶನಕ್ಕೆ ಗರಿಷ್ಠ 10 ಅಂಕಗಳನ್ನು ನಿಗದಿಪಡಿಸಲಾಗಿದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  ಆಗಸ್ಟ್ 17, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಸೆಪ್ಟೆಂಬರ್ 17, 2022
   
ಪ್ರಮುಖ ಲಿಂಕುಗಳು 
ನೋಟಿಫಿಕೇಶನ್ – 1 ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್  – 2 ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್  – 1 ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್  – 2 ಇಲ್ಲಿ ಕ್ಲಿಕ್ ಮಾಡಿ 

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆ ವಿಜಯಪುರ
ಬಳ್ಳಾರಿ ಬೆಳಗಾವಿ
ಬೆಂಗಳೂರು ಬೀದರ್
ಬಿಜಾಪುರ ಚಾಮರಾಜನಗರ
ಚಿಕ್ಕಬಳ್ಳಾಪುರ ಚಿಕ್ಕಮಗಳೂರು
ಚಿತ್ರದುರ್ಗ ದಕ್ಷಿಣ ಕನ್ನಡ
ದಾವಣಗೆರೆ ಧಾರವಾಡ
ಗದಗ ಕಲಬುರಗಿ 
ಹಾಸನ ಹಾವೇರಿ
ಹುಬ್ಬಳ್ಳಿ ಕಲಬುರಗಿ
ಕಾರವಾರ ಕೊಡಗು
ಕೋಲಾರ ಕೊಪ್ಪಳ
ಮಂಡ್ಯ ಮಂಗಳೂರು
ಮೈಸೂರು ರಾಯಚೂರು
ರಾಮನಗರ ಶಿವಮೊಗ್ಗ
ತುಮಕೂರು ಉಡುಪಿ
ಉತ್ತರ ಕನ್ನಡ ಯಾದಗಿರಿ
error: Content is protected !!