ತೋಟಗಾರಿಕೆ ಇಲಾಖೆಯಲ್ಲಿ ಖಾಲಿಯಿರುವ 4000ಕ್ಕೂ ಅಧಿಕ ಹುದ್ದೆಗಳ ನೇಮಕಾತಿ 2021

ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ಖಾಲಿಯಿರುವ 4000ಕ್ಕೂ ಹೆಚ್ಚು ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸದಾಗಿ ಅಧಿಸೂಚನೆ ಪ್ರಕಟವಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

ಉದ್ಯೋಗ ಸ್ಥಳ: ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.
ಹುದ್ದೆಗಳ ಸಂಖ್ಯೆ : ಒಟ್ಟು 4000ಕ್ಕೂ ಅಧಿಕ ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ :
ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರು : 228 ಹುದ್ದೆ
ವೇತನ : ರೂ. 52,650 – ರೂ. 97,100
ತೋಟಗಾರಿಕೆಯಲ್ಲಿ ಬಿ.ಎಸ್‌ಸಿ ಪದವಿ ಜೊತೆಗೆ ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ತೋಟಗಾರಿಕೆ ಸಹಾಯಕ ನಿರ್ದೇಶಕರು : 465 ಹುದ್ದೆ
ವೇತನ : ರೂ. 43,100 – ರೂ. 83,900
ತೋಟಗಾರಿಕೆಯಲ್ಲಿ ಬಿ.ಎಸ್‌ಸಿ ಪದವಿ ಜೊತೆಗೆ ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ಸಹಾಯಕ ತೋಟಗಾರಿಕೆ ಅಧಿಕಾರಿ : 1090 ಹುದ್ದೆ
ವೇತನ : ರೂ. 40,900 – ರೂ. 78,200
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಬಿ.ಎಸ್ಸಿ ಪದವಿ, ಪದವಿ ಅರ್ಹತೆ ಹೊಂದಿರಬೇಕು.

ಪ್ರಥಮ ದರ್ಜೆ ಸಹಾಯಕರು : 292 ಹುದ್ದೆ
ವೇತನ : ರೂ. 27,650 – ರೂ. 52,650
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಶೀಘ್ರಲಿಪಿಗಾರರು : 18 ಹುದ್ದೆ
ವೇತನ : ರೂ. 27,650 – ರೂ. 52,650
ಕನ್ನಡದಲ್ಲಿ ಹಿರಿಯ ಹಾಗೂ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣರಾಗಿರಬೇಕು.

ಉದ್ಯೋಗ ಮಾಹಿತಿ : ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿ

ತೋಟಗಾರಿಕೆ ಸಹಾಯಕರು : 866 ಹುದ್ದೆ
ವೇತನ : ರೂ. 23,500 – ರೂ. 47,650
ಪಿಯುಸಿ (Science Stream with Biology) ಶೈಕ್ಷಣಿಕ ಅರ್ಹತೆ ಜೊತೆಗೆ ಕನಿಷ್ಠ 10 ತಿಂಗಳು ತೋಟಗಾರಿಕೆ ತರಬೇತಿ ಹೊಂದಿರಬೇಕು.

ದ್ವಿತೀಯ ದರ್ಜೆ ಸಹಾಯಕರು : 269 ಹುದ್ದೆ
ವೇತನ : ರೂ. 21,400 – ರೂ. 42,000
ದ್ವಿತೀಯ ಪಿಯುಸಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಡೇಟಾ ಎಂಟ್ರಿ ಆಪರೇಟರ್ : 56 ಹುದ್ದೆ
ವೇತನ : ರೂ. 21,400 – ರೂ. 42,000
ಕನ್ನಡದಲ್ಲಿ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣರಾಗಿರಬೇಕು.

ಚಾಲಕರು : 85 ಹುದ್ದೆ
ವೇತನ : ರೂ. 21,400 – ರೂ. 42,000
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.

ಲ್ಯಾಬ್ ಸಹಾಯಕ : 13 ಹುದ್ದೆ
ವೇತನ : ರೂ. 18,600 – ರೂ. 32,600
ಪಿಯುಸಿ (ಸೈನ್ಸ್) ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಬೀ-ಕೀಪಿಂಗ್ ಅಸಿಸ್ಟೆಂಟ್ : 20 ಹುದ್ದೆ
ವೇತನ : ರೂ. 18,600 – ರೂ. 32,600
8ನೇ ತರಗತಿ ಜೊತೆಗೆ ಕನಿಷ್ಠ 3 ತಿಂಗಳ ಬೀ-ಕೀಪಿಂಗ್ ತರಬೇತಿ ಪಡೆದಿರಬೇಕು.

 

 

ಸೇವಕ (ಪಿಯೋನ್) : 98 ಹುದ್ದೆ
ವೇತನ : ರೂ. 17,000 – ರೂ. 28,950
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ತೋಟಗಾರ : 177 ಹುದ್ದೆ
ವೇತನ : ರೂ. 17,000 – ರೂ. 28,950
ಎಸ್.ಎಸ್.ಎಲ್.ಸಿ ಅಥವಾ 2 ವರ್ಷಗಳ ಡಿಪ್ಲೊಮಾ ಕೋರ್ಸ್ ಪಡೆದಿರಬೇಕು.

ವಾಚ್ ಮೆನ್ : 29 ಹುದ್ದೆ
ವೇತನ : ರೂ. 17,000 – ರೂ. 28,950
7ನೇ ತರಗತಿ ಉತ್ತೀರ್ಣರಾಗಿರಬೇಕು.

ಆಯ್ಕೆ ವಿಧಾನ : ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಮುಂಬಡ್ತಿಯ ಮೂಲಕ ಭರ್ತಿ ಮಾಡಲಾಗುವುದು.

ಪ್ರಮುಖ ದಿನಾಂಕಗಳು
ಅಧಿಸೂಚನೆ ಪ್ರಕಟವಾದ ದಿನಾಂಕ : ಅಕ್ಟೋಬರ್ 04, 2021

ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಆರಂಭ ಆಗಲಿದೆ

Notification PDF 
Website 

Karnataka Horticulture Department Recruitment 2021 apply online for 4319 various posts

error: Content is protected !!