ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿ ಕೆಳಕಂಡ ಖಾಲಿ ಇರುವ 2019-20 ನೇ ಸಾಲಿನ ಗ್ರೂಪ್-‘ಎ’ ವೃಂದದ 16 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು 02 ವರ್ಷಗಳ ಡಿಪ್ಲೋಮಾ ಕೋರ್ಸ್ ಇನ್ ಫಾರೆಸ್ಟ್ರಿ ತರಬೇತಿಗಾಗಿ ಆಯ್ಕೆ ಮಾಡಲು ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ವಿದ್ಯಾರ್ಹತೆ | ಹುದ್ದೆಗಳ ಸಂಖ್ಯೆ |
ಬಿ.ಎಸ್ಸಿ (ಅರಣ್ಯ ಶಾಸ್ತ್ರ )ಪದವೀಧರರಿಗೆ | 08 |
2. ಬಿ.ಎಸ್ಸಿ (ಅರಣ್ಯ ಶಾಸ್ತ್ರ )ಪದವಿ ಹೊರತುಪಡಿಸಿ ಇತರೆ ವಿಜ್ಞಾನ/ಇಂಜಿನಿಯರಿಂಗ್ ಪದವೀಧರರಿಗೆ | 08 |
ಒಟ್ಟು | 16 |
ವಿದ್ಯಾರ್ಹತೆ
1. ಫಾರೆಸ್ಟ್ರಿ ಪದವೀಧರರಿಗಾಗಿ ಮೀಸಲಿರಿಸಿದ ಹುದ್ದೆಗಳಿಗೆ : ಕನಿಷ್ಠ 50% ಅಂಕಗಳೊಂದಿಗೆ ಅಭ್ಯರ್ಥಿಗಳು ಫಾರೆಸ್ಟ್ರಿ ವಿಷಯದಲ್ಲಿ ಪದವಿ ಪಡೆದಿರಬೇಕು.
2. ಫಾರೆಸ್ಟ್ರಿ ವಿಷಯವಲ್ಲದ ವಿಜ್ಞಾನ /ಇಂಜಿನಿಯರಿಂಗ್ ಪದವೀಧರರಿಗೆ ಮೀಸಲಾದ ಹುದ್ದೆಗಳಿಗೆ : ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದ ಕೃಷಿ ಅಥವಾ ತೋಟಗಾರಿಕೆ ಅಥವಾ ಪಶು ವೈದ್ಯ ವಿಜ್ಞಾನ ಪದವಿ ಅಥವಾ ಸಂಬಂಧಿಸಿದ ವಿಷಯಗಳಲ್ಲಿ ವಿಜ್ಞಾನ ಪದವಿ ಅಥವಾ ಕನಿಷ್ಠ 50% ಅಂಕಗಳೊಂದಿಗೆ ಇಂಜಿನಿಯರಿಂಗ್ನ ಯಾವುದೇ ವಿಭಾಗದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ವೇತನ ಶ್ರೇಣಿ: ರೂ 52,650/- ರೂ 97,100/-
ವಯೋಮಿತಿ
*ಸಾಮಾನ್ಯ ಅರ್ಹತೆ : 30 ವರ್ಷ
*ಪ್ರವರ್ಗ- 2ಎ, 2ಬಿ, 3ಎ, 3ಬಿ : 33 ವರ್ಷ
*ಪ.ಜಾ/ಪ.ಪಂ/ಪ್ರ.-1 : 35 ವರ್ಷ
ಆಯ್ಕೆ ವಿಧಾನ
(1) ಪೂರ್ವಭಾವಿ ಪರೀಕ್ಷೆ(ವಸ್ತುನಿಷ್ಠ ಬಹು ಆಯ್ಕೆ ಮಾದರಿ)
(2) ಮುಖ್ಯ ಪರೀಕ್ಷೆ (ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ)
ಅರ್ಜಿ ಶುಲ್ಕ
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ : 600/-
ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ : ರೂ 300/-
ಪ.ಜಾ/ಪ.ಪಂ/ಪ್ರ.-1 ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ 50/-ಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20 ಅಕ್ಟೋಬರ್ 2020 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ನವೆಂಬರ್ 2020 |
ಶುಲ್ಕಪಾವತಿಸಲುಕೊನೆಯ ದಿನಾಂಕ: 21 ನವೆಂಬರ್ 2020 |