ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2020

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿ ಕೆಳಕಂಡ ಖಾಲಿ ಇರುವ 2019-20 ನೇ ಸಾಲಿನ ಗ್ರೂಪ್-‘ಎ’ ವೃಂದದ 16 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು 02 ವರ್ಷಗಳ ಡಿಪ್ಲೋಮಾ ಕೋರ್ಸ್ ಇನ್ ಫಾರೆಸ್ಟ್ರಿ ತರಬೇತಿಗಾಗಿ ಆಯ್ಕೆ ಮಾಡಲು ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

 

ವಿದ್ಯಾರ್ಹತೆ  ಹುದ್ದೆಗಳ ಸಂಖ್ಯೆ 
ಬಿ.ಎಸ್ಸಿ (ಅರಣ್ಯ ಶಾಸ್ತ್ರ )ಪದವೀಧರರಿಗೆ 08
2. ಬಿ.ಎಸ್ಸಿ (ಅರಣ್ಯ ಶಾಸ್ತ್ರ )ಪದವಿ ಹೊರತುಪಡಿಸಿ ಇತರೆ ವಿಜ್ಞಾನ/ಇಂಜಿನಿಯರಿಂಗ್ ಪದವೀಧರರಿಗೆ 08
ಒಟ್ಟು 16

 

ವಿದ್ಯಾರ್ಹತೆ
1. ಫಾರೆಸ್ಟ್ರಿ ಪದವೀಧರರಿಗಾಗಿ ಮೀಸಲಿರಿಸಿದ ಹುದ್ದೆಗಳಿಗೆ : ಕನಿಷ್ಠ 50% ಅಂಕಗಳೊಂದಿಗೆ ಅಭ್ಯರ್ಥಿಗಳು ಫಾರೆಸ್ಟ್ರಿ ವಿಷಯದಲ್ಲಿ ಪದವಿ ಪಡೆದಿರಬೇಕು.
2. ಫಾರೆಸ್ಟ್ರಿ ವಿಷಯವಲ್ಲದ ವಿಜ್ಞಾನ /ಇಂಜಿನಿಯರಿಂಗ್ ಪದವೀಧರರಿಗೆ ಮೀಸಲಾದ ಹುದ್ದೆಗಳಿಗೆ : ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದ ಕೃಷಿ ಅಥವಾ ತೋಟಗಾರಿಕೆ ಅಥವಾ ಪಶು ವೈದ್ಯ ವಿಜ್ಞಾನ ಪದವಿ ಅಥವಾ ಸಂಬಂಧಿಸಿದ ವಿಷಯಗಳಲ್ಲಿ ವಿಜ್ಞಾನ ಪದವಿ ಅಥವಾ ಕನಿಷ್ಠ 50% ಅಂಕಗಳೊಂದಿಗೆ ಇಂಜಿನಿಯರಿಂಗ್ನ ಯಾವುದೇ ವಿಭಾಗದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

 

 

ವೇತನ ಶ್ರೇಣಿ:  ರೂ 52,650/- ರೂ 97,100/-

ವಯೋಮಿತಿ
*ಸಾಮಾನ್ಯ ಅರ್ಹತೆ : 30 ವರ್ಷ
*ಪ್ರವರ್ಗ- 2ಎ, 2ಬಿ, 3ಎ, 3ಬಿ : 33 ವರ್ಷ
*ಪ.ಜಾ/ಪ.ಪಂ/ಪ್ರ.-1 : 35 ವರ್ಷ

 

ಆಯ್ಕೆ ವಿಧಾನ
(1) ಪೂರ್ವಭಾವಿ ಪರೀಕ್ಷೆ(ವಸ್ತುನಿಷ್ಠ ಬಹು ಆಯ್ಕೆ ಮಾದರಿ)
(2) ಮುಖ್ಯ ಪರೀಕ್ಷೆ (ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ)

 

 

ಅರ್ಜಿ ಶುಲ್ಕ

ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ : 600/-

ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ : ರೂ 300/-

ಪ.ಜಾ/ಪ.ಪಂ/ಪ್ರ.-1 ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ 50/-ಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು

 

 

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20 ಅಕ್ಟೋಬರ್ 2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ನವೆಂಬರ್ 2020
ಶುಲ್ಕಪಾವತಿಸಲುಕೊನೆಯ ದಿನಾಂಕ: 21 ನವೆಂಬರ್ 2020

 

ವೆಬ್ಸೈಟ್

ನೋಟಿಫಿಕೇಶನ್

 

 

 

error: Content is protected !!