ಮಂಡಿ ನೋವಿಗೆ ರಾಮಬಾಣ ಇಲ್ಲಿದೆ! ರಾತ್ರಿ ಈ ಪೇಸ್ಟ್ ಹಚ್ಚಿ ಸಾಕು
Knee Pain Home Remedies 2024 – ಇತ್ತೀಚಿನ ದಿನಗಳಲ್ಲಿ ದೇಶದ ಜನರು ವಿಪರೀತ ಮಂಡಿ ನೋವಿನಿಂದ (Knee Pain) ಬಳಲುತ್ತಿದ್ದು ಇದೀಗ ಮಂಡಿ ನೋವು ಎಲ್ಲರಲ್ಲೂ ಸರ್ವೇ ಸಾಮಾನ್ಯವಾಗಿದೆ. ಮತ್ತು ಇದರ ಪರಿಹಾರ ಹುಡುಕುತ್ತಾ ಜನರು ಮಾಡದೇ ಇರುವ ಪ್ರಯತ್ನಗಳಿಲ್ಲ ಹಾಗೂ ಸೂಕ್ತವಾದ ಮನೆಮದ್ದು (Home Remedy) ಅಥವಾ ಔಷಧಿ ಸಿಗದೇ ಜನರು ಇನ್ನೂ ಪರದಾಡುವಂತಾಗಿದೆ, ಬನ್ನಿ ಸ್ನೇಹಿತರೆ ಈ ಒಂದು ಸಮಸ್ಯೆ ಕುರಿತಾಗಿ ಒಂದಷ್ಟು ಮಾಹಿತಿ ಹಾಗೂ ಕೆಲವು ಔಷಧಗಳು (Medicine) ಹಾಗೂ ಮನೆಮದ್ದು ನಿಮಗೆ ಒದಗಿಸುವ ಪ್ರಯತ್ನ ಮಾಡುತ್ತೇವೆ.
ಮಂಡಿನೋವಿಗೆ ಮೂಲ ಕಾರಣಗಳು
ಮಂಡಿ ನೋವು (Knee Pain) ಕಾಣಿಸಿಕೊಳ್ಳಲು ಮೊದಲ ಪ್ರಧಾನ ಕಾರಣವೇನೆಂದರೆ ಅದುವೇ ನಮ್ಮ ದೇಹದ ಅತಿಯಾದ ತೂಕ (Heavy Weight) ಹೌದು ನಮ್ಮ ದೇಹದ ತೂಕ ಎಷ್ಟು ಹೆಚ್ಚಾಗುತ್ತದೆಯೋ ಅದೆಲ್ಲದರ ಬಾರ ನಮ್ಮ ಮಂಡಿ ಕೀಲುಗಳ ಮೇಲೆ ಒತ್ತಡ ಬೀಳುತ್ತದೆ, ನಂತರ ನಮಗೆ ಕ್ರಮೇಣವಾಗಿ ಮಂಡಿ ನೋವು ಸಮಸ್ಯೆ ಕಾಣಲು ಆರಂಭವಾಗುತ್ತದೆ,
ಮಂಡಿ ನೋವುಗಳು ಕಾಣಿಸಿಕೊಳ್ಳಲು ಮತ್ತೊಂದು ಪ್ರಮುಖ ಕಾರಣವೇನೆಂದರೆ ಅದುವೇ ನಮ್ಮ ಅಜೀರ್ಣ ಸಮಸ್ಯೆ, ಹೌದು ತಿಂದ ಆಹಾರವು ಸರಿಯಾಗಿ ಜೀರ್ಣವಾಗದೆ (Digest) ಇದ್ದಲ್ಲಿ ಆಮ ಸೃಷ್ಟಿಯಾಗಿ ವಾತ ವಿಕಾರ ಉಂಟಾಗಿ ವಾತವು ನಮ್ಮ ಮಂಡಿ ಕೀಲುಗಳ ಶ್ರಾವಣಿಕ ದ್ರವವನ್ನು ಕಡಿಮೆಗೊಳಿಸಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತದೆ.
ನಮ್ಮ ಹಿಂದಿನ ಪೀಳಿಗೆಯಲ್ಲಿ ಮಹಿಳೆಯರು ಕುಳಿತುಕೊಂಡು ಅಡುಗೆ ಮಾಡುವ ವ್ಯವಸ್ಥೆ ಇತ್ತು ಆದರೆ ಇಂದಿನ ದಿನಮಾನಗಳಲ್ಲಿ ಎಲ್ಲರೂ ತಮ್ಮ ತಮ್ಮ ಅಡುಗೆ ಮನೆಗಳಲ್ಲಿ ಗಂಟೆಗಟ್ಟಲೆ ಎದ್ದು ನಿಂತು ಅಡುಗೆ ಮಾಡುವುದು ಸರ್ವೇಸಾಮಾನ್ಯವಾಗಿದೆ, ಇದರಿಂದಾಗಿ ಹೆಚ್ಚಾಗಿ ಮಂಡಿ ನೋವು ಸಮಸ್ಯೆ ಮಹಿಳೆಯರಲ್ಲಿ ಕಂಡುಬರುವುದು.
ಇದಕ್ಕೆ ಸೂಕ್ತ ಪರಿಹಾರಗಳು ಇಲ್ಲಿವೆ
ಎಕ್ಕೆ ಗಿಡದ ಎಲೆ, ನುಗ್ಗೆ ಸೊಪ್ಪು, ಹುಣಸೆ ಎಲೆ, ಬೇವಿನೆಲೆ, ಬೆಳ್ಳುಳ್ಳಿ ಪೇಸ್ಟ್, ಇವೆಲ್ಲವನ್ನು ನುಣ್ಣಗೆ ರುಬ್ಬಬೇಕು (ಪೇಸ್ಟ್ ಮಾಡಬೇಕು) ನುಣ್ಣಗೆ ಪೇಸ್ಟ್ ಮಾಡಿಕೊಂಡಿರುವ ಮಿಶ್ರಣವನ್ನು ಹರಳೆಣ್ಣೆಯಲ್ಲಿ ಫ್ರೈ ಮಾಡಬೇಕು, ಟ್ರೈ ಮಾಡಿದ ನಂತರ ಆ ಮಿಶ್ರಣವು ಬಿಸಿ ಇರುವಾಗಲೇ ಮಂಡಿ ನೋವಿನ ಜಾಗಕ್ಕೆ ಲೇಪಿಸಬೇಕು (ಹಚ್ಚಬೇಕು), ಆ ಒಂದು ಮಿಶ್ರಣವು ಮೊಳಕಾಲ ಮೇಲೆ ಲೇಪಿಸಿದ ನಂತರ ತೆಳುವಾದ ಬಟ್ಟೆಯಿಂದ ಅದರ ಮೇಲೆ ಸುತ್ತಬೇಕು, ಬೆಳಗ್ಗೆ ಎದ್ದು ಮಂಡಿ ಮೇಲೆ ಬಿಸಿಬಿಸಿಯಾದ ನೀರಿನಿಂದ ಸ್ನಾನ ಮಾಡಬೇಕು, ಈ ಒಂದು ಪ್ರಕ್ರಿಯೆಯು ರಾತ್ರಿ ಹೊತ್ತು ಮಾಡಬೇಕು ಇದರಿಂದ ಒಳ್ಳೆಯ ಫಲಿತಾಂಶ ನಾವು ಕಾಣಬಹುದು,
ಒಳ್ಳೆಯ ಆಹಾರ ಪದ್ಧತಿ (Food Diet) ಹಾಗೂ ಉತ್ತಮ ಜೀವನಶೈಲಿ (Lifestyle) ಇದರ ಜೊತೆಗೆ ದೇಹದ ಅತಿಯಾದ ತೂಕ ಕಡಿಮೆ ಮಾಡಿಕೊಂಡಲ್ಲಿ ಮಂಡಿಗಳ ಮೇಲೆ ಬೀಳುವ ಒತ್ತಡ ಕಡಿಮೆಯಾಗಿ ಕ್ರಮೇಣವಾಗಿ ನಿಮ್ಮ ಮಂಡಿ ನೋವಿನ ಸಮಸ್ಯೆಯಿಂದ ಹೊರ ಬರಬಹುದು,
ಜಿಲ್ಲಾವಾರು ಉದ್ಯೋಗಗಳು |