ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ .

ಒಟ್ಟು ಹುದ್ದೆಗಳು : ಒಟ್ಟು 14 ಹುದ್ದೆಗಳ ಭರ್ತಿ
ಉದ್ಯೋಗ ಸ್ಥಳ: ಚಿತ್ರದುರ್ಗ

ಹುದ್ದೆಗಳ ಹೆಸರು ಮತ್ತು ಶೈಕ್ಷಣಿಕ ವಿದ್ಯಾರ್ಹತೆ :
ಸಹಾಯಕ ವ್ಯವಸ್ಥಾಪಕರು(ಫೀಲ್ಡ್ ಆಫರೇಶನ್ಸ್) ಹುದ್ದೆಗೆ 10+2 ವಿದ್ಯಾಭ್ಯಾಸದ ನಂತರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 4 ವರ್ಷ ಅವಧಿಯ ಸಾಂಪ್ರದಾಯಕ ಬಿ.ಎಸ್ಸಿ (ಕೃಷಿ) ಪದವಿಯೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಬೀಜ ತಂತ್ರಜ್ಞಾನ/ ಪ್ಲಾಂಟ್ ಬ್ರೀಡಿಂಗ್ & ಜೆನೆಟಿಕ್ಸ್ ನಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಮೂರು ವರ್ಷ ಕೆಲಸದ ಅನುಭವ ಹೊಂದಿರಬೇಕು.

 

 

ಸಹಾಯಕ ವ್ಯವಸ್ಥಾಪಕರು (ಫೈನಾನ್ಸ್ & ಅಕೌಂಟ್ಸ್) ಹುದ್ದೆಗೆ 10+2 ವಿದ್ಯಾಭ್ಯಾಸದ ನಂತರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 3 ವರ್ಷ ಅವಧಿಯ ಸಾಂಪ್ರದಾಯಕ ಬಿ.ಕಾಂ/ಬಿಬಿಎಂ/ಬಿಬಿಎ ಪದವಿಯೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಎಂಬಿಎ (ಫೈನಾನ್ಸ್) ಸ್ನಾತಕೋತ್ತರ ಪದವಿ ಪಡೆದಿರಬೇಕು. ಮೂರು ವರ್ಷ ಕೆಲಸದ ಅನುಭವ ಹೊಂದಿರಬೇಕು.

• ಫೀಲ್ಡ್ ಆಫೀಸರ್ ಹುದ್ದೆಗೆ 10+2 ವಿದ್ಯಾಭ್ಯಾಸದ ನಂತರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 4 ವರ್ಷ ಅವಧಿಯ ಸಾಂಪ್ರದಾಯಕ ಬಿ.ಎಸ್ಸಿ (ಕೃಷಿ) ಪದವಿ ಪಡೆದಿರಬೇಕು. ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟದ ಚಟುವಟಿಕೆಗಳಲ್ಲಿ 2 ವರ್ಷ ಅನುಭವ ಹೊಂದಿರಬೇಕು.

• ಅಕೌಂಟ್ಸ್ ಆಫೀಸರ್ ಹುದ್ದೆಗೆ 10+2 ವಿದ್ಯಾಭ್ಯಾಸದ ನಂತರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 3 ವರ್ಷ ಅವಧಿಯ ಸಾಂಪ್ರದಾಯಕ ಬಿ.ಕಾಂ/ಬಿಬಿಎಂ/ಬಿಬಿಎ ಪದವಿಯೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಎಂ.ಕಾಂ/ಎಂಬಿಎ (ಫೈನಾನ್ಸ್) ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷ ಕೆಲಸದ ಅನುಭವ ಹೊಂದಿರಬೇಕು.

 

 

• ಕಮರ್ಶಿಯಲ್ ಆಫೀಸರ್ ಹುದ್ದೆಗೆ 10+2 ವಿದ್ಯಾಭ್ಯಾಸದ ನಂತರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 3 ವರ್ಷ ಅವಧಿಯ ಸಾಂಪ್ರದಾಯಕ ಬಿ.ಕಾಂ/ಬಿಬಿಎಂ/ಬಿಬಿಎ ಪದವಿಯೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಎಂಬಿಎ (ಮಾರ್ಕೆಟಿಂಗ್) ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷ ಕೆಲಸದ ಅನುಭವ ಹೊಂದಿರಬೇಕು.

• ಸೀಡ್ಸ್ ಆಫೀಸರ್ ಹುದ್ದೆಗೆ 10+2 ವಿದ್ಯಾಭ್ಯಾಸದ ನಂತರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 4 ವರ್ಷ ಅವಧಿಯ ಸಾಂಪ್ರದಾಯಕ ಬಿ.ಎಸ್ಸಿ (ಕೃಷಿ) ಪದವಿ ಪಡೆದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷ ಕೆಲಸದ ಅನುಭವ ಹೊಂದಿರಬೇಕು.

• ಎಕ್ಸಿಕ್ಯೂಟಿವ್ (ಪಿ&ಎ) ಹುದ್ದೆಗೆ 10+2 ವಿದ್ಯಾಭ್ಯಾಸದ ನಂತರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 3 ವರ್ಷ ಅವಧಿಯ ಸಾಂಪ್ರದಾಯಕ ಬಿ.ಕಾಂ/ಬಿ.ಎಸ್ಸಿ/ಬಿಬಿಎಂ/ಬಿಬಿಎ ಪದವಿ ಪಡೆದಿರಬೇಕು. ಆಡಳಿತ ನಿರ್ವಹಣಾ ಕ್ಷೇತ್ರದಲ್ಲಿ 2 ವರ್ಷ ಕೆಲಸದ ಅನುಭವ ಹೊಂದಿರಬೇಕು.

 

 

• ಅಸಿಸ್ಟೆಂಟ್ ಎಕ್ಸಿಕ್ಯೂಟಿವ್(ಕಮರ್ಶಿಯಲ್), ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಸ್ಟೋರ್ಸ್), ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಅಕೌಂಟ್ಸ್) ಹುದ್ದೆಗೆ 10+2 ವಿದ್ಯಾಭ್ಯಾಸದ ನಂತರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 3 ವರ್ಷ ಅವಧಿಯ ಸಾಂಪ್ರದಾಯಕ ಬಿ.ಕಾಂ/ಬಿಬಿಎಂ ಪದವಿ ಪಡೆದಿರಬೇಕು. ಕಂಪ್ಯೂಟರ್ ಆಪರೇಶನ್ಸ್ & ಅಪ್ಲಿಕೇಶನ್ಸ್ ಜ್ಞಾನದ ಜೊತೆಗೆ ಟ್ಯಾಲಿ ಕೋರ್ಸ್ ತೇರ್ಗಡೆ ಪ್ರಮಾಣ ಪತ್ರವನ್ನು ಹೊಂದಿರಬೇಕು.

• ಅಸಿಸ್ಟೆಂಟ್ ಹುದ್ದೆಗೆ ಅಧಿಕೃತ ಕಾಲೇಜಿನಿಂದ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು

ವಯೋಮಿತಿ ಸಡಿಲಿಕೆ : ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇದೆ

ವೇತನ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 17,000 ರಿಂದ ರೂ. 83,900 ವರೆಗೂ ವೇತನ ನೀಡಲಾಗುತ್ತದೆ.

 

 

ಆಯ್ಕೆ ವಿಧಾನ : ಸ್ವೀಕರಿಸಲಾದ ಅರ್ಜಿಗಳನ್ನು ನಿಗದಿಪಡಿಸಿದ ವಿದ್ಯಾರ್ಹತೆ ಹಾಗೂ ಅಗತ್ಯ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು ನಂತರ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ : ವ್ಯವಸ್ಥಾಪಕ ನಿರ್ದೇಶಕರು, ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ,
ಪ್ಲಾಟ್ ಸಂಖ್ಯೆ: 74/ಎ, ಕೆಳಗೋಟೆ ಇಂಡಸ್ಟ್ರೀಯಲ್ ಏರಿಯಾ, ಚಿತ್ರದುರ್ಗ – 577 501

ಅರ್ಜಿ ಶುಲ್ಕ : ಪ.ಜಾತಿ, ಪ.ಪಂ, ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳು ರೂ. 500 ಹಾಗೂ ಇತರೆ ವರ್ಗದ ಅಭ್ಯರ್ಥಿಗಳು ರೂ. 1000 ಅರ್ಜಿ ಶುಲ್ಕ ಪಾವತಿಸಬೇಕು

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ನವೆಂಬರ್ 04, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 06, 2021

Application Form 
Notification PDF 
error: Content is protected !!