ವಿದ್ಯಾರ್ಥಿಗಳಿಗೆ 50 ಸಾವಿರದಿಂದ 1 ಲಕ್ಷವರೆಗೆ ಶೈಕ್ಷಣಿಕ ಸಹಾಯಧನ – Kotak Suraksha Scholarship 2024

ವಿದ್ಯಾರ್ಥಿಗಳಿಗೆ 50 ಸಾವಿರದಿಂದ 1 ಲಕ್ಷವರೆಗೆ ಶೈಕ್ಷಣಿಕ ಸಹಾಯಧನ 

ನಮಸ್ಕಾರ ಗೆಳೆಯರೇ ನೀವು ಕೋಟಕ್ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಬೇಕಾ? ಹಾಗಿದ್ದಲ್ಲಿ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು, ಶೈಕ್ಷಣಿಕ ಅರ್ಹತೆ, ಹಾಗೂ ಅರ್ಜಿ ಸಲ್ಲಿಕೆ ದಿನಾಂಕ ಮತ್ತಿತರ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ.

Kotak Suraksha Scholarship 2024 – ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳು ಇರುತ್ತವೆ, ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಶೈಕ್ಷಣಿಕ ಗುರಿಯನ್ನು ತಲುಪಲು ಹಣಕಾಸಿನ ನೇರವು ನೀಡಲು ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನನ್ನು ನೀಡಲಾಗುತ್ತದೆ. ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

9 ರಿಂದ 12 ನೇ ತರಗತಿ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ/ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ 50,000 ರೂ. ರಿಂದ 1,00,000 ರೂ ಶೈಕ್ಷಣಿಕ ಸಹಾಯಧನವನ್ನು ಕೋಟಕ್ ನೀಡಲಾಗುತ್ತಿದೆ.

ಸ್ಕಾಲರ್ಶಿಪ್ ಮೊತ್ತ ಎಷ್ಟು? :
– 9 ನೇ ತರಗತಿ ಯಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ: 50,000 ರೂ.
– ಸಾಮಾನ್ಯ ಹಾಗೂ ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ: 1,00,000 ರೂ.

ಬೇಕಾಗುವ ಅಗತ್ಯ ದಾಖಲೆಗಳು:
– ಆಧಾರ್ ಕಾರ್ಡ್
– ಪ್ರಸ್ತುತ ವರ್ಷದ ಪ್ರವೇಶ ಪುರಾವೆ (ಶುಲ್ಕ ರಸೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ಬೊನಾಫೈಡ್ ಪ್ರಮಾಣಪತ್ರ)
– 10 ಮತ್ತು 12 ನೇ ತರಗತಿಯ ಅಂಕಪಟ್ಟಿಗಳು
– ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿಗಳು
– ಆದಾಯ ಪ್ರಮಾಣ ಪತ್ರ
– ರೇಷನ್ ಕಾರ್ಡ್
– ಅರ್ಜಿದಾರರ ಅಥವಾ ಪೋಷಕರ ಬ್ಯಾಂಕ್ ಖಾತೆ ವಿವರಗಳು
– ಇತ್ತೀಚಿನ ಭಾವಚಿತ್ರ

ಅರ್ಹತೆಗಳು:
– ಅಂಗವಿಕಲ (ವಿಕಲಚೇತನ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಬಹುದು.
– 9 ರಿಂದ 12 ನೇ ತರಗತಿ ಹಾಗೂ ಸಾಮಾನ್ಯ/ವೃತ್ತಿಪರ ಪದವಿ ಕೋರ್ಸ್‌ ಓದುತ್ತಿರುವವರು
– ಅರ್ಜಿದಾರರು ತಮ್ಮ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
– ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು INR 3,20,000 ಗಿಂತ ಹೆಚ್ಚಿರಬಾರದು.
– ಕೋಟಕ್ ಸೆಕ್ಯುರಿಟೀಸ್, ಅದರ ಅಂಗಸಂಸ್ಥೆಗಳು ಮತ್ತು Buddy4Study ಉದ್ಯೋಗಿಗಳ ಮಕ್ಕಳು ಅರ್ಹರಲ್ಲ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 30-04-2024

ಪ್ರಮುಖ ಲಿಂಕ್’ಗಳು – ಇಲ್ಲಿ ಕ್ಲಿಕ್ ಮಾಡಿ 

 

 

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆವಿಜಯಪುರ
ಬಳ್ಳಾರಿಬೆಳಗಾವಿ
ಬೆಂಗಳೂರುಬೀದರ್
ಬಿಜಾಪುರಚಾಮರಾಜನಗರ
ಚಿಕ್ಕಬಳ್ಳಾಪುರಚಿಕ್ಕಮಗಳೂರು
ಚಿತ್ರದುರ್ಗದಕ್ಷಿಣ ಕನ್ನಡ
ದಾವಣಗೆರೆಧಾರವಾಡ
ಗದಗಕಲಬುರಗಿ 
ಹಾಸನಹಾವೇರಿ
ಹುಬ್ಬಳ್ಳಿಕಲಬುರಗಿ
ಕಾರವಾರಕೊಡಗು
ಕೋಲಾರಕೊಪ್ಪಳ
ಮಂಡ್ಯಮಂಗಳೂರು
ಮೈಸೂರುರಾಯಚೂರು
ರಾಮನಗರಶಿವಮೊಗ್ಗ
ತುಮಕೂರುಉಡುಪಿ
ಉತ್ತರ ಕನ್ನಡಯಾದಗಿರಿ

error: Content is protected !!