ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.
KPSC DMA Recruitment 2022: ಕರ್ನಾಟಕ ಲೋಕಸೇವಾ ಆಯೋಗವು ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರಸಭೆ / ಪುರಸಭೆ / ಪಟ್ಟಣ ಪಂಚಾಯಿತಿ) ಗ್ರೂಪ್ ಸಿ ವೃಂದದ ಹುದ್ದೆಗಳ ಭರ್ತಿಗೆ ಇದೀಗ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,
ಇಲಾಖೆ ಹೆಸರು: | ಕರ್ನಾಟಕ ಲೋಕಸೇವಾ ಆಯೋಗ |
ಹುದ್ದೆಗಳ ಹೆಸರು: | ವಿವಿಧ ಹುದ್ದೆಗಳು |
ಒಟ್ಟು ಹುದ್ದೆಗಳು | 410 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ಹುದ್ದೆಗಳ ವಿವರ |
ಕಿರಿಯ ಅಭಿಯಂತರರು (ಸಿವಿಲ್) : 89 |
ಕಿರಿಯ ಅಭಿಯಂತರರು (ಸಿವಿಲ್) : 89 |
ಎಲೆಕ್ಟ್ರೀಷಿಯನ್ ಗ್ರೇಡ್-1: 02 |
ಎಲೆಕ್ಟ್ರೀಷಿಯನ್ ಗ್ರೇಡ್-2: 10 |
ನೀರು ಸರಬರಾಜು ಆಪರೇಟರ್ : 89 |
ಸಹಾಯಕ ಸರಬರಾಜು ಆಪರೇಟರ್ : 163 |
ಒಟ್ಟು ಹುದ್ದೆಗಳ ಸಂಖ್ಯೆ : 410 |
ವಿದ್ಯಾರ್ಹತೆ:
ಕಿರಿಯ ಅಭಿಯಂತರರು (ಸಿವಿಲ್) :
ಡಿಪ್ಲೊಮ ಇನ್ ಸಿವಿಲ್ ಇಂಜಿನಿಯರಿಂಗ್ / ಡಿಪ್ಲೊಮ ಇನ್ ಸಿವಿಲ್ ಇಂಜಿನಿಯರಿಂಗ್ (ಡ್ರಾಟ್ಸ್‌ಮ್ಯಾನ್‌ಶಿಪ್).
ಕಿರಿಯ ಆರೋಗ್ಯ ನಿರೀಕ್ಷಕರು :
ಎಸ್‌ಎಸ್‌ಎಲ್‌ಸಿ ನಂತರ 3 ವರ್ಷಗಳ ಸ್ಯಾನಿಟರಿ ಹೆಲ್ತ್ ಇನ್ಸ್‌ಪೆಕ್ಟರ್ ಡಿಪ್ಲೊಮ / ಹೆಲ್ತ್ ಇನ್ಸ್‌ಪೆಕ್ಟರ್ ಕೋರ್ಸ್ ಓದಿರಬೇಕು. ಅಥವಾ ಪಿಯುಸಿ ನಂತರ 2 ವರ್ಷದ ಸ್ಯಾನಿಟರಿ ಹೆಲ್ತ್ ಇನ್ಸ್‌ಪೆಕ್ಟರ್ ಡಿಪ್ಲೊಮ / ಹೆಲ್ತ್ ಇನ್ಸ್‌ಪೆಕ್ಟರ್ ಡಿಪ್ಲೊಮ ಕೋರ್ಸ್ ಓದಿರಬೇಕು.
ಎಲೆಕ್ಟ್ರೀಷಿಯನ್ ಗ್ರೇಡ್-1:
ಎಸ್‌ಎಸ್‌ಎಲ್ ಜತೆಗೆ ಇಲೆಕ್ಟ್ರಿಕಲ್ ಟ್ರೇಡ್‌ನಲ್ಲಿ ಐಟಿಐ ಪಾಸ್ ಮಾಡಿರಬೇಕು. ಜತೆಗೆ 1 ವರ್ಷದ ಅಪ್ರೆಂಟಿಸ್ ತರಬೇತಿ ಪಡೆದಿರಬೇಕು.
ಉದ್ಯೋಗ ಸುದ್ದಿ: ಜಿಲ್ಲಾ ಪಂಚಾಯತ್ ನೇಮಕಾತಿ 2022
ಎಲೆಕ್ಟ್ರೀಷಿಯನ್ ಗ್ರೇಡ್-2:
ಎಸ್‌ಎಸ್‌ಎಲ್ ಜತೆಗೆ ಇಲೆಕ್ಟ್ರಿಕಲ್ ಟ್ರೇಡ್‌ನಲ್ಲಿ ಐಟಿಐ ಪಾಸ್ ಮಾಡಿರಬೇಕು.
ನೀರು ಸರಬರಾಜು ಆಪರೇಟರ್ :
ಎಸ್‌ಎಸ್‌ಎಲ್‌ಸಿ ಪಾಸ್ ಜತೆಗೆ, ಐಟಿಐ ಕೋರ್ಸ್ ಅನ್ನು ಇಲೆಕ್ಟ್ರಿಕಲ್ ಟ್ರೇಡ್ ಅಥವಾ ಫಿಟ್ಟರ್ ಟ್ರೇಡ್ ನಲ್ಲಿ ಓದಿರಬೇಕು. ಜತೆಗೆ 1 ವರ್ಷ ಅಪ್ರೆಂಟಿಸ್ ತರಬೇತಿ ಪಡೆದಿರಬೇಕು.
ಸಹಾಯಕ ಸರಬರಾಜು ಆಪರೇಟರ್ :
ಎಸ್‌ಎಸ್‌ಎಲ್‌ಸಿ ಪಾಸ್ ಜತೆಗೆ, ಐಟಿಐ ಕೋರ್ಸ್ ಅನ್ನು ಇಲೆಕ್ಟ್ರಿಕಲ್ ಟ್ರೇಡ್ ಅಥವಾ ಫಿಟ್ಟರ್ ಟ್ರೇಡ್ ನಲ್ಲಿ ಓದಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಕೆಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಎಸ್‌ಸಿ / ಎಸ್‌ಟಿ / ಪ್ರ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗಧಿಪಡಿಸಲಾಗಿದೆ.
ಉದ್ಯೋಗ ಸುದ್ದಿ: ಪೊಲೀಸ್ ಇಲಾಖೆಯಲ್ಲಿ 1500 ಖಾಲಿ ಹುದ್ದೆಗಳು
ವೇತನಶ್ರೇಣಿ:
ಕಿರಿಯ ಅಭಿಯಂತರರು (ಸಿವಿಲ್) : ರೂ.33,450 /- -62,600/- ವೇತನ ನಿಗದಿಪಡಿಸಲಾಗಿದೆ.
ಕಿರಿಯ ಆರೋಗ್ಯ ನಿರೀಕ್ಷಕರು : ರೂ.23,500/- 47,650/- ವೇತನ ನಿಗದಿಪಡಿಸಲಾಗಿದೆ.
ಎಲೆಕ್ಟ್ರೀಷಿಯನ್ ಗ್ರೇಡ್-1: ರೂ.23,500/ – 47,650/- ವೇತನ ನಿಗದಿಪಡಿಸಲಾಗಿದೆ.
ಎಲೆಕ್ಟ್ರೀಷಿಯನ್ ಗ್ರೇಡ್-2: ರೂ.21,400/- 42,000/- ವೇತನ ನಿಗದಿಪಡಿಸಲಾಗಿದೆ.
ನೀರು ಸರಬರಾಜು ಆಪರೇಟರ್ : ರೂ.23,500/- -47,650/- ವೇತನ ನಿಗದಿಪಡಿಸಲಾಗಿದೆ.
ಸಹಾಯಕ ಸರಬರಾಜು ಆಪರೇಟರ್ : ರೂ.21,400/- 42,000/- ವೇತನ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ.600.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50.
ಎಸ್‌ಸಿ / ಎಸ್‌ಟಿ / ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 31-03-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 29-04-2022 ರ ರಾತ್ರಿ 11-45 ಗಂಟೆವರೆಗೆ. |
ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ: | 30-04-2022 |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |