ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಖಾಲಿ ಹುದ್ದೆಗಳು

Telegram Group

 

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿಗೊಳಿಸುವ ಕುರಿತು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯಲ್ಲಿನ ವೃಂದಾವಾರು ಹುದ್ದೆಗಳನ್ನು ಕಲ್ಯಾಣ-ಕರ್ನಾಟಕ ಪ್ರದೇಶದ ಕಚೇರಿಗಳಿಗೆ ಹಾಗೂ ಉಳಿದ ಪ್ರದೇಶದ ಕಚೇರಿಗಳಿಗೆ ಒಟ್ಟು 1088 ವಿವಿಧ ಹುದ್ದೆಗಳು ಮಂಜೂರಾಗಿದ್ದು, ಹಾಲಿ 647 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, 441 ಹುದ್ದೆಗಳು ಖಾಲಿಯಿದ್ದು, ಡಿಸೆಂಬರ್ 2021 ರ ಅಂತ್ಯಕ್ಕೆ 37 ಸಿಬ್ಬಂದಿಗಳು ವಯೋನಿವೃತ್ತಿ ಹೊಂದಲಿದ್ದಾರೆ, ಕಳೆದ 4 ವರ್ಷಗಳಲ್ಲಿ 255 ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳು ನಿವೃತ್ತಿಯಾಗಿದ್ದು, 2021ನೇ ಸಾಲಿನಲ್ಲಿ 77 ಸಿಬ್ಬಂದಿಗಳು ವಯೋನಿವೃತ್ತಿ ಹೊಂದಲಿದ್ದಾರೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ವೃಂದದ ಒಟ್ಟು 77 ಹುದ್ದೆಗಳನ್ನು ಸಂಸ್ಥೆಯ ಭರ್ತಿಗೊಳಿಸಲು ಆರ್ಥಿಕ ಇಲಾಖೆಯ ಸಹಮತಿಯಂತೆ ಸರ್ಕಾರವು ಅನುಮತಿ ನೀಡಲು ತೀರ್ಮಾನಿಸಿರುತ್ತದೆ.

 

 

ಆದ್ದರಿಂದ ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ವೃಂದದ ಒಟ್ಟು 77 ಹುದ್ದೆಗಳನ್ನು ಈ ಕೆಳಕಂಡಂತೆ ಭರ್ತಿಮಾಡಿಕೊಳ್ಳಲು ಅನುಮತಿ ನೀಡಿದೆ.

ಸಹಾಯಕ ಅಭಿಯಂತರರು – 43
ಕಿರಿಯ ಅಭಿಯಂತರರು (ಸಿವಿಲ್) – 18
ಪ್ರಥಮ ದರ್ಜೆ ಸಹಾಯಕರು – 5
ದ್ವಿತೀಯ ದರ್ಜೆ ಸಹಾಯಕರು – 10
ಕಂಪ್ಯೂಟರ್ ಅಸಿಸ್ಟೆಂಟ್ – 1
ಒಟ್ಟು ಹುದ್ದೆಗಳು – 77

 

Download Notification PDF 

 

ಶೀಘ್ರದಲ್ಲಿ ಈ ನೇಮಕಾತಿ ಆರಂಭವಾಗಲಿದೆ ಕಾದಿರಿ

Telegram Group
error: Content is protected !!