ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಕೃಷಿ ಬೆಲೆ ಆಯೋಗದಲ್ಲಿ ಕಾರ್ಯ ನಿರ್ವಹಿಸಲು ತಾಂತ್ರಿಕ ಸಲಹೆಗಾರರು, ಹೆಚ್ಚುವರಿ ತಾಂತ್ರಿಕ ಸಲಹೆಗಾರರು ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳಿಗೆ
ಒಪ್ಪಂದದ ಆಧಾರದ ಮೇಲೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 16 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳ ವಿವರ
ಒಟ್ಟು ಹುದ್ದೆಗಳ ಸಂಖ್ಯೆ 05
ತಾಂತ್ರಿಕ ಸಲಹೆಗಾರರು 2 ಹುದ್ದೆಗಳು
ವೇತನ: ರೂ 50,000/-
ಹೆಚ್ಚುವರಿ ತಾಂತ್ರಿಕ ಸಲಹೆಗಾರರು 1
ವೇತನ: ರೂ 40.000/-
ತಾಂತ್ರಿಕ ಸಹಾಯಕರ 2
ವೇತನ: ರೂ 38,000/-
ವಿದ್ಯಾರ್ಹತೆ: ಕೃಷಿ ಅರ್ಥಶಾಸ್ತ ಅಥವಾ ಕೃಷಿ ಮಾರುಕಟ್ಟೆ ಅಥವಾ ಕೃಷಿ ಸಂಖ್ಯಾಶಾಸ್ತ್ರ ಅಥವಾ ಕೃಷಿ ವಿಸ್ತರಣಾ ಅಥವಾ ಕೃಷಿ / ತೋಟಗಾರಿಕೆ ವಿಜ್ಞಾನ ಸಂಬಂಧ ಪಟ್ಟ ವಿಷಯಗಳಲ್ಲಿ ಪಿ ಹೆಚ್ ಡಿ ಮಾಡಿರಬೇಕು,
ಈ ಹುದ್ದೆಗಳಿಗೆ ಆಯ್ಕೆಗೆ ಕೆಲವು ಅನುಭವಗಳನ್ನು ಕೇಳಲಾಗಿದೆ ಅದರ ಕುರಿತಾದ ಇನ್ನಷ್ಟು ಮಾಹಿತಿಗೆ ಕೆಳಗೆ ಕೊಟ್ಟಿರುವ ಅಧಿಸೂಚನೆ ಲಿಂಕ್ ಕ್ಲಿಕ್ ಮಾಡಿ ಓದಿ ನಂತರ ಅರ್ಜಿ ಸಲ್ಲಿಸಿ.
ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಅರ್ಜಿ ಹಾಕುವುದು ಹೇಗೆ?
ಕೆಳಗೆ ಕೊಟ್ಟಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಅದನ್ನು ಸಂಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿ ಅಕ್ಟೋಬರ್ 16 2020 ಸಂಜೆ 5 ಗಂಟೆಯೊಳಗೆ ಕರ್ನಾಟಕ ಕೃಷಿ ಬೆಲೆ ಆಯೋಗದ ಕಛೇರಿ, ಕೃಷಿ ಇಲಾಖಾ ಆವರಣದಲ್ಲಿ ಶೇಷಾದ್ರಿ ರಸ್ತೆ ಬೆಂಗಳೂರು ಇವರಿಗೆ ತಲುಪಿಸುವುದು, ಲಕೋಟೆ ಮೇಲೆ ಅರ್ಜಿಸಲ್ಲಿಸುತ್ತಿರುವ ಹುದ್ದೆಯ ಹೆಸರನ್ನು ಕೆಂಪು ಶಾಯಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಅಕ್ಟೋಬರ್ 2020